ತೇರದಾಳ ಪಟ್ಟಣದಲ್ಲಿ ಶ್ರೀಅಲ್ಲಮಪ್ರಭು ದೇವರ ಜಾತ್ರಾ ನಿಮಿತ್ಯ ಶ್ರೀ ಪ್ರಭುಲಿಂಗೇಶ್ವರ ಅನ್ನ ಪ್ರಸಾದ ಸಮಿತಿಯವರು ವಿರಕ್ತ ಮಠದಿಂದ ಪಾಲಕಿ ಉತ್ಸವ ಹಾಗೂ ಪ್ರಭು ಜ್ಯೋತಿ ಉತ್ಸವ ನಡೆಯಿತು.
ತೇರದಾಳ : ಪಟ್ಟಣದ ಮದನಾದಿ ಶ್ರೀಅಲ್ಲಮಪ್ರಭು ದೇವರ ಜಾತ್ರೆಯ ನಿಮಿತ್ಯ ಶ್ರೀಪ್ರಭುಲಿಂಗೇಶ್ವರ ಅನ್ನಪ್ರಸಾದ ಸಮಿತಿಯವರು ಮೂರು ದಿನಗಳ ಕಾಲ ನಡೆಸುವ ಅನ್ನಪ್ರಸಾದ ಕಾರ್ಯಕ್ರಮದ ಚಾಲನೆ ರವಿವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಭು ಜ್ಯೋತಿ ಉತ್ಸವ ಹಾಗೂ ಪಾಲಕಿ ಉತ್ಸವ ಸಂಭ್ರಮದಿಂದ ಜರುಗಿತು.
ಪಾಲಕಿ ಉತ್ಸವ ಹಾಗೂ ಪ್ರಭುಜ್ಯೋತಿಯು ವಿರಕ್ತಮಠದಿಂದ ಪ್ರಾರಂಭಗೊಂಡು ಜವಳಿ ಬಜಾರ, ಕನ್ನಡಶಾಲೆ, ಗಣಪತಿ ದೇವಸ್ಥಾನ, ದ್ವಾರ ಬಾಗಿಲು ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಅಲ್ಲಮಪ್ರಭು ದೇವಸ್ಥಾನ ತಲುಪಿತು. ಕುಂಭ ಹಾಗೂ ವಾದ್ಯಮೇಳಗಳು ಉತ್ಸವಕ್ಕೆ ಮೆರಗು ತಂದವು.
ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಶ್ರೀಗಳು, ಸ್ಥಳೀಯ ಹಿರೇಮಠದ ಗಂಗಾಧರ ದೇವರು, ಹುಕ್ಕೇರಿ ಮಠದ ಶಿವುಕುಮಾರ ದೇವರು, ಪ್ರಸಾದ ಸಮೀತಿಯವರು, ದೇವಸ್ಥಾನದ ಅರ್ಚಕರು,ಮುಖಂಡರು ಅನ್ನಪ್ರಸಾದಕ್ಕೆ ಚಾಲನೆ ನೀಡಿದರು.
ಸೆ.6ರಂದು ಶ್ರೀಅಲ್ಲಮಪ್ರಭುದೇವರ ಜಾತ್ರೆಯು ಸರಳರೀತಿಯಲ್ಲಿ ಜರುಗಲಿದ್ದು, ದೇವಸ್ಥಾನದಲ್ಲಿ ಬೆಳಗಿನ ಜಾವ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ನಂತರ ದೇವಸ್ಥಾನದ ಆವರಣದಲ್ಲಿ ನಂದಿಕೋಲು ಹಾಗೂ ಪಲ್ಲಕ್ಕಿ ಉತ್ಸವ ಸರಳ ರೀತಿಯಲ್ಲಿ ಜರುಗಲಿವೆ.
_________

Social Plugin