ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ನ್ಯಾಯವಾದಿ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಸಿಂಡಿಕೇಟ್ ಸದಸ್ಯರಾದ ಕಿರಣಕುಮಾರ ದೇಸಾಯಿ ಅವರನ್ನು ಸನ್ಮಾನಿಸಿದರು.
ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳಿಗೆ ನೋಟ್ ಬುಕ್ ವಿತರಣೆ
ತೇರದಾಳ : ಸಮೀಪದ ಹಳಿಂಗಳಿ ಗ್ರಾಮದ ನ್ಯಾಯವಾದಿ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಸಿಂಡಿಕೇಟ್ ಸದಸ್ಯರಾದ ಕಿರಣಕುಮಾರ ದೇಸಾಯಿಯವರ 37 ಹುಟ್ಟು ಹಬ್ಬದ ಪ್ರಯುಕ್ತ ಕಿರಣ ದೇಸಾಯಿ ಅಭಿಮಾನಿ ಗೆಳೆಯರ ಬಳಗದ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್‍ಗಳನ್ನು ವಿತರಿಸುವುದರ ಮೂಲಕ ಮಕ್ಕಳೊಂದಿಗೆ ಕೇಕ್ ಕತ್ತರಿಸ ಸರಳವಾಗಿ ಆಚರಿಸಲಾಯಿತು.
ಗ್ರಾಮದ ಅಹಿಂಸಾ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಸರಳ ಸಮಾರಂಭದಲ್ಲಿ ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚಿ ಮಾತನಾಡಿದ ಕಿರಣ ದೇಸಾಯಿ ಪ್ರತಿಯೊಬ್ಬರು ದೇಶಪ್ರೇಮಿಗಳಾಗಬೇಕು ಸರಳ ಜೀವನ ಶೈಲಿಯನ್ನು ಮೈಗೂಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಉತ್ತಮ ಸಾಧಕರಾಗಬೇಕೆಂದು ತಿಳಿಸಿದ ಅವರು ನನ್ನ ಜನುಮ ದಿನವನ್ನು ಶಾಲಾ ಮಕ್ಕಳೊಂದಿಗೆ ಆಚರಿಸಿಕೊಳ್ಳುತ್ತಿರುವುದು ಸೌಭಾಗ್ಯವೆಂದು ಹರ್ಷವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಚೇರ್ಮನ್ ಬಿ.ಆರ್ ಬಿರಾದಾರ ಪಾಟೀಲ್ ಸಿಬ್ಬಂದಿ ಸೇರಿದಂತೆ ಕಿರಣ ದೇಸಾಯಿಯವರನ್ನು ಸತ್ಕರಿಸಿದರು. ಸಮಾರಂಭದಲ್ಲಿ ಮುಖಂಡರಾದ ಆಧಿನಾಥ ಕುಳ್ಳಿ, ಅಪ್ಪು ಪಾಟೀಲ್. ಅಂಕುಶ ದೇಸಾಯಿ, ಅಣ್ಣಾಸಾಬ ಪಾಟೀಲ್, ಪ್ರಜೋತ್ ದೇಸಾಯಿ ಸೇರಿದಂತೆ ಗೆಳೆಯರ ಬಳಗದ ಸರ್ವ ಸದಸ್ಯರು ಹಾಗೂ ಅಭಿಮಾನಿಗಳು ಮತ್ತು ಮಕ್ಕಳು ಪಾಲ್ಗೊಂಡಿದ್ದರು.
-----------------------------


Social Plugin