ಹಳ್ಳೂರ 17:ಭಾರತದ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಜನ್ಮ ನಿಮಿತ್ಯವಾಗಿ ಹಮ್ಮಿಕೊಂಡ ಹಾಗೂ ಕೆ ಎಮ್ ಎಫ್ ಅಧ್ಯಕ್ಷರು ಹಾಗೂ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಯವರ ಆದೇಶ ಮೇರೆಗೆ  ಅತೀ ದೊಡ್ಡ ಉಚಿತವಾಗಿ ಹಮ್ಮಿಕೊಂಡ  ಬ್ರಹತ್ ಲಸಿಕಾ  ಮೇಳವನ್ನು  ಗ್ರಾಮದ ಶಿವಶಂಕರ ನಗರ ಶಾಲೆಯಲ್ಲಿ ನಡೆದಿದ್ದ ಸ್ಥಳಕ್ಕೆ   ಗ್ರಾಮ ಲೆಕ್ಕಾಧಿಕಾರಿ ಸಂಜು ಅಗ್ನೇಪ್ಪಗೋಳ ಬೆಟ್ಟಿ ನೀಡಿ  ಬ್ರಹತ್ ಲಸಿಕಾ ಮೇಳವನ್ನು ವೀಕ್ಷಿಸಿ ಚಾಲನೆ ನೀಡಿ ಮಾತನಾಡಿ ಕೋವಿಡ್ 19 ಮಹಾಮಾರಿ ವಿರುದ್ದ ಹೋರಾಡುವ ಬ್ರಹತ್ ಲಸಿಕಾ ಮೇಳವನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಿರಿ. ಲಸಿಕೆಯನ್ನು ಪಡೆದು ಕೊರೋನಾ ಮುಕ್ತ ದೇಶವನ್ನು ಮಾಡಲು ಸಹಕಾರಿಯಾಗುವದು ಎಂದು ಹೇಳಿದರು.   ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಮಾತನಾಡಿ  ಕೋವಿಡ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟ  ಪ್ರತಿಯೊಬ್ಬರೂ ಹಾಕಿಸಿಕೊಳ್ಳಿ ಯಾವದೇ ಅಡ್ಡಪರಿಣಾಮ ಉಂಟಾಗುವದಿಲ್ಲ ಕೊರೋನಾ ಹಿಮ್ಮೆಟ್ಟಿಸಲು ಇದು ಅಸ್ತ್ರವಾಗುತ್ತಿದೆ. ಆದ್ದರಿಂದ ಜನತೆ ಕಡ್ಡಾಯವಾಗಿ ಲಸಿಕೆ ಪಡೆಯಬೇಕೆಂದು ಹೇಳಿದರು.           
     ಹಣಮಂತ ಬೆಳಗಲಿ. ಬಿ ಜೆ ಪಾರ್ಥನಳ್ಳಿ. ಭೀಮಪ್ಪ ನೀಡೋಣಿ. ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ರಾಮು ಕುಂಬಾರ . ದೀಪಾ ಬಡಿಗೇರ. ಎಸ್ ಜಿ ಪತ್ತಾರ. ಗ್ರಾಮ ಪಂಚಾಯತ ಸಿಬ್ಬಂದಿಗಳಾದ ಮಹಾಂತೇಶ ಸಂತಿ. ಮಹಾಂತೇಶ ಕುಂದರಗಿ. ಗ್ರಾಮ  ಪ ಸದಸ್ಯ ಬಸವರಾಜ ಲೋಕಣ್ಣವರ.ಆರ್ ಏನ್ ಕಡಕೋಳ.ಆರ್ ಎಮ್ ಚಿಂಚಣಿ.ಅಂ. ಕಾ. ಕ. ಗಂಗವ್ವ ಪಾಲಬಾಂವಿ.ಆ, ಕಾ.ಕ,ಪ್ರೀತಿ ಮಾಲಗಾರ.ಶ್ರೀಶೈಲ ಲೋಕಣ್ಣವರ. ಕೆಂಪಣ್ಣ ಅಂಗಡಿ.ಸೇರಿದಂತೆ ಸಾರ್ವಜನಿಕರಿದ್ದರು.