ತೇರದಾಳ ಸಮೀಪದ ಗೋಲಭಾವಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಕೆ.ಪಿ.ಪೂಜಾರಿ ಗುರುಗಳಿಗೆ 2021ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಯುಕ್ತ ಸನ್ಮಾನ ಕಾರ್ಯಕ್ರಮ ಜರುಗಿತು.
ಗೌರವಗಳು ಜವಾಬ್ದಾರಿ ಹೆಚ್ಚಿಸುತ್ತವೆ
ತೇರದಾಳ : ಪ್ರತಿಯೊಬ್ಬರಿಗೂ ಗೌರವ ದೊರಕುತ್ತಿದ್ದಂತೆ ಆ ವ್ಯಕ್ತಿಗೆ ಜವಾಬ್ದಾರಿಗಳು ಹೆಚ್ಚುತ್ತವೆ ಎಂದು ಗೋಲಭಾವಿ ಎಚ್‍ಪಿಎಸ್ ಶಾಲೆ ಶಿಕ್ಷಕ ಕೆ.ಪಿ.ಪೂಜಾರಿ ಹೇಳಿದರು.
 ಸಮೀಪದ ಗೋಲಭಾವಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಕೆ.ಪಿ.ಪೂಜಾರಿ ಗುರುಗಳಿಗೆ 2021ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಯುಕ್ತ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಸನ್ಮಾನ ಸ್ವೀಕರಿಸಿ ಮಾತನಾಡಿದರು. 
  ನಾವು ಮಾಡುವ ವೃತ್ತಿ ಪವಿತ್ರವಾದುದು, ಶಿಕ್ಷಕ ನಿರಂತರ ಅಧ್ಯಯನಶೀಲರಾಗಬೇಕು. ಮಕ್ಕಳಿಗೆ ಹೊಸತನವನ್ನು ನೀಡುವಲ್ಲಿ ಹಾತೊರೆಯುತ್ತಿರಬೇಕು, ಮಕ್ಕಳ ಮನಸ್ಸನ್ನು ಅರಿತು ಪಾಠ ಮಾಡುವ ಮನೋಧರ್ಮ ನಮ್ಮದಾಗಬೇಕು, ಪ್ರಶಸ್ತಿಗಳು ನಮ್ಮನ್ನು ಗೌರವಿಸುವುದರ ಜೊತೆಗೆ ಮತ್ತಷ್ಟು ಜವಾಬ್ದಾರಿಗಳು ಹೆಚ್ಚುತ್ತವೆ ಎಂದರು.
 ಕಾರ್ಯಕ್ರಮದಲ್ಲಿ ಮುಖ್ಯಗುರು ಎಸ್.ಜಿ. ನವಿಲ್ಯಾಳ, ದೈಹಿಕ ಶಿಕ್ಷಕ ಜಿ.ಬಿ.ಸಂಗೊಂದಿ, ಎನ್.ಎಂ.ಘಾಶನ್, ಬಿ.ಎನ್.ವಾಜಂತ್ರಿ, ಎ.ಎಸ್.ಕೇಸ್ಕರ, ಕೆ.ಎಂ.ಆಸಂಗಿ, ಜೆ.ಎ.ತಹಸೀಲ್ದಾರ, ಸಿ.ಜಿ.ಕಾರಜೋಳ. ಕೆಂಚವ್ವ ತಿಮ್ಮಾಪೂರ, ಇಂದ್ರವ್ವ ದೇಸಾಯಿ, ಶಾಂತವ್ವ ಮಾಂಗ, ಬಾಳವ್ವ ಕರಿಗಾರ ಇದ್ದರು.