ತೇರದಾಳ ಪುರಸಭೆ 3 ನೇ ವಾರ್ಡಿನ ಉಪಚುನಾವಣೆ ಇಂದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಪುಷ್ಪಲತಾ ವಿನಾಯಕ ಬಂಕಾಪೂರ ಗೆಲವು ಸಾಧಿಸಿದಕ್ಕಾಗಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಬಿಜೆಪಿ ಬೆಂಬಲಿತ ಪುಷ್ಪಲತಾ ಬಂಕಾಪೂರ ಗೆಲುವು 
ತೇರದಾಳ : ತೀವ್ರ ಕುತೂಹಲ ಕೆರಳಿಸಿದ ತೇರದಾಳ ಪುರಸಭೆ 3 ನೇ ವಾರ್ಡಿನ ಉಪಚುನಾವಣೆ ಇಂದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಪುಷ್ಪಲತಾ ವಿನಾಯಕ ಬಂಕಾಪೂರ 43 ಮತಗಳ ಅಂತರದ ಗೆಲುವು ಸಾಧಿಸುವುದರ ಮೂಲಕ ವಿನಾಯಕ ಬಂಕಾಪೂರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿಯನ್ನು ಗೆಲ್ಲಿಸುವುದರ ಮೂಲಕ ಜನರು ಮತ್ತೆ ಬಿಜೆಪಿಗೆ ಜೈ ಎಂದಿದ್ದಾರೆ.
   ಉಪಚುನಾವಣೆ ನಡೆದ 3 ನೇ ವಾರ್ಡಿನಲ್ಲಿ ಒಟ್ಟು 1369 ಮತರಾರರಿದ್ದು ಸಪ್ಟೆಂಬರ 3 ರಂದು ನಡೆದ ಮತದಾನದಲ್ಲಿ 1012 ಮತಗಳು ಚಲಾವಣೆಯಾಗಿದ್ದು ಈ ಪೈಕಿ ಬಿಜೆಪಿ ಬೆಂಬಲಿತ ಪುಷ್ಪಲತಾ ಬಂಕಾಪೂರ ಪರವಾಗಿ 503 ಮತಗಳು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ರಾಜೇಸಾಬ ನಗಾರ್ಜಿ ಪರ 460 ಮತಗಳು ಚಲಾವಣೆಯಾಗಿದ್ದು ಪುಷ್ಪಲತಾ ಬಂಕಾಪೂರ 43 ಮತಗಳ ಅಂತರದ ಅಭೂತಪೂರ್ವ ಗೆಲುವನ್ನು ಸಾಧಿಸಿದ್ದು ಜೆಡಿಎಸ್ ಪಕ್ಷದ ಅಭ್ಯರ್ಥಿ ನಬಿಸಾಬ ಸಾತಬಚ್ಚೆ 20, ಪಕ್ಷೇತರ ಅಭ್ಯರ್ಥಿಗಳಾದ ಬಾಪು ಗಾಡಿವಡ್ಡರ 20 ಹಾಗೂ ರಮೇಶ ಗಾಡಿವಡ್ಡರ 08 ಮತಗಳನ್ನು ಪಡೆದಿದ್ದು 09 ನೋಟಾ ಮತಗಳು ಚಲಾವಣೆಯಾಗಿರುತ್ತವೆ.
    ವಿಜಯಿಶಾಲಿಯಾದ ಬಿಜೆಪಿ ಅಭ್ಯರ್ಥಿ ಪುಷ್ಪಲತಾ ಬಂಕಾಪೂರ ತಮ್ಮ ಪತಿಯನ್ನು ನೆನೆದು ಕೆಲಹೊತ್ತು ಭಾವುಕರಾಗಿ ಮಾತನಾಡಿದ ಅವರು ಈ ಗೆಲುವಿಗೆ ನನ್ನ ಪತಿದೇವರ ಸಮಾಜಮುಖಿ ಕೆಲಸವೇ ಕಾರಣ ಸಾವಿರಾರು ಬಡಜನರಿಗೆ ಆಶ್ರಯದಾತನಾಗಿದ್ದ ನನ್ನ ಗಂಡನ ಅಕಾಲಿಕ ನಿಧನದಿಂದ ಮರುಗಿದ ಜನರು ಪ್ರತಿಪಕ್ಷದವರು ಎಷ್ಟೇ ಆಶೆ ಅಮೀಷಗಳನ್ನು ಒಡ್ಡಿದರೂ ಕೂಡ ದೃತಿಗೆಡದೆ ಇಂದು 43 ಮತಗಳ ಅಂತರದಿಂದ ನನ್ನನ್ನು ವಿಜಯಿಶಾಲಿಯನ್ನಾಗಿಸಿದ ಜನರಿಗೆ ಋಣಿಯಾಗಿರುವುದಾಗಿ ತಿಳಿಸಿದ ಅವರು ಪತಿಯ ಆಶಯದಂತೆ ಸದಾ ಜನಸೇವೆಗೆ ಬದ್ಧವೆಂದು ಸಂಕಲ್ಪಿಸಿದರು.
    ವಿಜಯೋತ್ಸವದಲ್ಲಿ ಪಟ್ಟಣದ ಬಿಜೆಪಿ ಮುಖಂಡರಾದ ನಗರಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಪ್ರಕಾಶ ಹೊಸಮನಿ, ಶ್ರೀಕಾಂತ ಕೋರಿ, ಸಚೀನ ಕೊಡತೆ, ಕೇದಾರಿ ಪಾಟೀಲ,ಲಕ್ಷ್ಮಣ ನಾಯಕ, ಸದಾಶಿವ ಹೊಸಮನಿ, ಶಂಕರ ಕುಂಬಾರ, ಮುರುಗೇಶ ಮಿರ್ಜಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಶ್ರೀರಾಮ ಸೇನೆಯ ಪದಾಧಿಕಾರಿಗಳು ಮತ್ತು ವಿನಾಯಕ ಬಂಕಾಪೂರ ಅಭಿಮಾನಿಗಳು ಇದ್ದರು.
________