ತೇರದಾಳದ ಪೊಲೀಸ್ ಠಾಣೆಯಲ್ಲಿ ಗಣೇಶನ ಪ್ರತಿಷ್ಠಾಪನೆ.
ಪೂಜೆಗೈದು ಗಣೇಶನಿಗೆ ಪೋಲಿಸ್ ಠಾಣೆಯಲ್ಲಿ ಸ್ವಾಗತ
ತೇರದಾಳ : ದಿನವಿಡೀ ಆ ಕೇಸು ಈ ಕೇಸು, ಅಲ್ಲಿ ಹೊಡೆದಾಟ, ಬಡಿದಾಟ, ಅಶಾಂತಿ, ಒಂದಿಲ್ಲೊಂದು ಪ್ರಕರಣಗಳ ಬಗಿಹರಿಸುವಂತ ತಮ್ಮ ಕೆಲಸದಲ್ಲಿ ತಲ್ಲೀನರಾಗುತ್ತಿದ್ದ ಪೊಲೀಸರು ಶುಕ್ರವಾರ ಗಣೇಶನನ್ನು ಆರತಿ ಮಾಡಿ ಪೂಜೆಯೊಂದಿಗೆ ಪೋಲಿಸ್ ಠಾಣೆಗೆ ಸ್ವಾಗತಿಸಿಕೊಂಡು ಪ್ರತಿಷ್ಠಾಪಿಸಿದರು.
ದೇಶದಲ್ಲೆಡೆ ಕೊರೊನಾ ವೈರಾಣುವಿನ ಅಟ್ಟಹಾಸದಿಂದಾಗಿ ಹಬ್ಬ ಹರಿದಿನಗಳು ಸರಳವಾಗಿ ಆಚರಿಸಲಾಗುತ್ತಿದ್ದು, ಶುಕ್ರವಾರ ಮುಂಜಾನೆ ಪೋಲಿಸರು ಸಡಗರ ಸಂಭ್ರಮದಿಂದ ಪಟಾಕಿಗಳನ್ನು ಸುಡುತ್ತ ಗಣೇಶನನ್ನು ಠಾಣೆಯಲ್ಲಿ ಪ್ರತಿಷಾಪಿಸಿದರು. ವಾದ್ಯ, ಮೆರವಣಿಗೆಗಳು ಇಲ್ಲದೆ ಸರಳವಾಗಿ ಗಣೇಶ ಹಬ್ಬವನ್ನು ಆಚರಿಸಲು ಪ್ರಾರಂಭವಾಯಿತು. ಪ್ರತಿಷ್ಠಾಪಿಸಿದ ಗಣೇಶನನ್ನು ಐದು ದಿನಗಳವರೆಗೆ ಠಾಣೆಯಲ್ಲಿ ಪೂಜಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಠಾಣೆಯ ಪಿಎಸ್‍ಐ ರಾಜು ಬೀಳಗಿ, ಎಎಸ್‍ಐ ಎಲ್.ಬಿ.ಮಾಳಿ, ಕೆ.ಎಚ್.ಸನಹಟ್ಟಿ, ಎಮ್.ಎಸ್.ಸವದಿ, ಮಂಜು ಎತ್ತಿಮನಿ, ಸಿದ್ದು ಗಲಾಟೆ, ಮಹಿಳಾ ಸಿಬ್ಬಂದಿಗಳಾದ ಎಲ್ಲಟ್ಟಿ ಹಾಗೂ ರಾಚನ್ನವರ ಸೇರಿದಂತೆ ಠಾಣೆಯ ಎಲ್ಲ ಸಿಬ್ಬಂದಿ ಪಾಲ್ಗೊಂಡಿದ್ದರು.

Social Plugin