ಶ್ರೀ ಕ್ಷೇತ್ರ ಇಂಚಗೇರಿ ಮಠ* 
 ಭಾಗ (3) ಶ್ರೀ ಕ್ಷೇತ್ರ ಇಂಚಗೇರಿ ಮಠದ ಮೂಲ ಗುರುಗಳ ಶ್ರೀ ಸದ್ಗುರು ಸಮರ್ಥ ಗುರುಲಿಂಗ ಜಂಗಮ ಮಹಾರಾಜರು, ಗಡಿಭಾಗದಲ್ಲಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ 1790 ರಲ್ಲಿ ಜನಿಸಿದರು. ಶ್ರೀ ಸದ್ಗುರು ಗುರುಲಿಂಗ ಜಂಗಮ ಮಹಾರಾಜರ ಆರಾಧನೆಗಾಗಿ ಶ್ರೀ ಸದ್ಗುರು ಸಮರ್ಥ ಬಾಹುಸಾಹೇಬ ಮಹಾರಾಜರು ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಅಡಿಪಾಯ ಹಾಕಿದರು. ಅಂದು ಒಂದು ಗದ್ದುಗೆಯಾಗಿ ಸ್ಥಾಪಿತಗೊಂಡು, ಈ ಶ್ರೀ ಕ್ಷೇತ್ರ ಇಂದು ದಕ್ಷಿಣ ಹಾಗೂ ಮಧ್ಯಭಾರತದ ಭಕ್ತಿ ಪಂಥದ ಆಕರ್ಶಕ ಬಿಂದುವಾಗಿ ಪ್ರಜ್ವಲಿಸುತ್ತಿದೆ.
ಶ್ರೀ ಸದ್ಗುರು ಸಮರ್ಥ ಗುರುಲಿಂಗ ಜಂಗಮ ಮಹಾರಾಜರು
ಶ್ರೀ ಕ್ಷೇತ್ರ ಇಂಚಗೇರಿ ಮಠದ ಮೂಲ ಸಂಪ್ರದಾಯವು ಸುಮಾರು 1200 ವರ್ಷಗಳ ಪುರಾತನ ನಾಥ ಸಂಪ್ರದಾಯಕ್ಕೆ ಸೇರಿದ್ದು. ಆ ಕಾಲದಲ್ಲಿ ನವನಾಥರು ಆಗಿಹೋಗಿದ್ದರು. ಆ ನವನಾಥರಿಗೆಲ್ಲ ಶ್ರೀ ದತ್ತಾತ್ರೇಯ ಸ್ವಾಮಿ ಗುರುವಾಗಿದ್ದರು . ಆ ನವನಾಥರಲ್ಲಿ ಶ್ರೀ ರೆವಣನಾಥರು ಒಬ್ಬರು. ಅವರ ಶಿಷ್ಯರಾಗಿ ಶ್ರೀ ಕಾಡಸಿದ್ದೇಶ್ವರರು ದೀಕ್ಷೆ ಪಡೆದು ಮಹಾರಾಷ್ಟ್ರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಶ್ರೀ ಕ್ಷೇತ್ರ ಸಿದ್ದಗಿರಿ ಬೆಟ್ಟದಲ್ಲಿ ಅಖಂಡ ತಪಸ್ಸು ನಡೆಸಿ ಅಘಾದವಾದ ಆಧ್ಯಾತ್ಮಿಕ ಶಕ್ತಿಪಡೆದರು.ಇಂತಹ ತಪಸ್ವಿಯಿಂದ ದೀಕ್ಷೆ ಪಡೆದ ಶ್ರೀ ಸ.ಸ.ಗುರುಲಿಂಗ ಜಂಗಮ ಮಹಾರಾಜರು ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಮೊಟ್ಟ ಮೊದಲ ಗುರುಗಳಾದರು. ಕುರಿ ಕಾಯುವ ಕಾಯಕವನ್ನು ಆಯ್ಧುಕೊಂಡ ಸದ್ಗುರುಗಳು ಸದಾ ಜ್ನಾನ ಮಗ್ನರಾಗಿರುತ್ತಿದ್ದರು. ತಮ್ಮ ಜ್ನಾನ ಶಕ್ತಿಯ ಮೂಲಕ ಆಧ್ಯಾತ್ಮ ಭೋದನೆ ಆರಂಬಿಸಿದ ಅವರು ಅಸಂಖ್ಯಾತರ ಭಕ್ತಿ ಸಮುಹವನ್ನುಹವನ್ನುಗಳಿಸಿದರು. ಕುರಿ ಹಾಲನ್ನೆ ಪ್ರಸಾದವನ್ನಾಗಿ ನೀಡುತ್ತ ರೋಗಗಳಿಂದ ನರಳುವ ರೋಗಿಗಳ ಕಾಯಿಲೆವಾಸಿ ಮಾಡುವ, ಅಜ್ಞಾನಿಗಳಿಗೆ ಜ್ಙಾನರ್ಜನೆ ಮಾಡುವ ಕಾಯಕದಲ್ಲಿ ತಮ್ಮನ್ನು ತಮ್ಮನ್ನು ತೊಡಗಿಸಿಕೊಂಡರು.ಈ ಸದ್ಗುರುಗಳ ಆಧ್ಯಾತ್ಮಸಶಕ್ತಿಯಿಂದ ಪ್ರೇರಣೆಗೊಳಗಾದ ಶ್ರೀ ಸದ್ಗುರು ಸಮರ್ಥ ಬಾಹುಸಾಹೇಬ ಮಹಾರಾಜರು ಅವರ ಶಿಷ್ಯರಾದರು.
ಶ್ರೀಗಳ ಸದ್ಗುರುಗಳಾದ ಶ್ರೀ ಸ.ಸ.ಗುರುಲಿಂಗ ಜಂಗಮ ಮಹಾರಾಜರು 1790ರಲ್ಲಿ ಕರ್ನಾಟಕ ಗಡಿಭಾಗವಾದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಜನಿಸಿದರು. ಇವರ ಮೂಲ ಹೆಸರು ನಾರಾಯಣಪ್ಪ. ನಾರಾಯಣಪ್ಪನವರು ಅವರು ಚಿಕ್ಕವರಿದ್ದಾಗಿನಿಂದ ಆಧ್ಯಾತ್ಮಪ್ರವೃತ್ತಿ ಉಳ್ಳವರು. ಅವರು ಜ್ಞಾನ ದಾಹದ ನಿಮಿತ್ಯ ಶ್ರೀ ಫಂಡರಪೂರ ಕ್ಷೇತ್ರಕ್ಕೆ ಹೋದಾಗ ಅವರಿಗೆ ಪಂಡರಪೂರ ವಿಠ್ಠಲನು ನೀನು ಸಿದ್ದಗಿರಿಗೆ ಹೋಗಿ ಶ್ರೀ ಕಾಡಸಿದ್ಧೇಶ್ವರಿಂದ ಉಪದೇಶ ಪಡೆ ಎಂದು ವಾಣಿಯಾಯಿತ್ತು. ನಂತರ ಅವರು ಸಿದ್ದಗಿರಿಗೆ ಹೋದಾಗ ಅವರಿಗೆ ನೂರಾರು ವರ್ಷಗಳ ಹಿಂದೆ ಆಗಿಹೋದ ಕಾಡಸಿದ್ದನು ಸಾಕಾರ ರೂಪದಲ್ಲಿ ಪ್ರಕಟವಾಗಿ ತತ್ವಮಸಿ (ನೀನೆ ಪರಮಾತ್ಮ) ಅಂತ ಉಪದೇಶ ನೀಡಿದರೆಂದು ಹೇಳಲಾಗುತ್ತಾದೆ. ಶ್ರೀ ನಾರಾಯಣಪ್ಪನವರು ತಮ್ಮ ಕುರಿ ಕಾಯುವ ಉದ್ಯೋಗದಲ್ಲಿ 35 ವರ್ಷಗಳ ಕಾಲ ಅಖಂಡ ಧ್ಯಾನವನ್ನು ಮಾಡಿ ಆತ್ಮಸಾಕ್ಷಾತ್ಕಾರವನ್ನು ಪಡದರೆಂದು ಗುರುಪರಂಪರೆಯಿಂದ ತಿಳಿದುಬರುತ್ತದೆ. ಅವರು ಮುಂದೆ ಶ್ರೀ ಗುರುಲಿಂಗ ಜಂಗಮ ಮಹಾರಾಜರೆಂದು ಪ್ರಸಿದ್ದರಾದರು.🚩🙏 ........ಮುಂದವರೆವದು (ಸಂಗ್ರಹ ಲೇಖನ)