ಹಳ್ಳೂರ 06:ಗ್ರಾಮದ ಶಿವಶಂಕರ ನಗರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರ ಆದೇಶದಂತೆ ಶಾಲೆಯನ್ನು ಪ್ರಾರಂಭ ಮಾಡಲಾಯಿತು.
ಪ್ರಾರಂಭದಲ್ಲಿ ಶಾಲೆಯನ್ನು ಸ್ವಚ್ಛಗೊಳಿಸಿ ತಳಿಲು ತೋರಣ ಕಟ್ಟಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಆರುತಿ ಮಾಡಿ ಕೊಠಡಿಯೊಳಗೆ ಬರಮಾಡಿಕೊಂಡರ. ಕೋವಿಡ್ ಮಾರ್ಗಸುಚಿ ಪಾಲನೆಯೊಂದಿಗೆ ಸೋಮವಾರದಂದು ಶಾಲೆಯನ್ನು ಪ್ರಾರಂಭಮಾಡಿದರು.18 ತಿಂಗಳಿಂದ ಆರಂಭವಾಗಿರಲಿಲ್ಲ ಕೊರೋನಾ ಸಂಕಷ್ಟ ಹಾಗೂ ಹಲವು ಸವಾಲಗಳ ನಡುವೆ ಎರಡನೇ ಹಂತದ ಶಾಲೆಯನ್ನು ಆರಂಭ ಮಾಡಲು ಸರಕಾರ ಆದೇಶ ಮಾಡಿದೆ. ಸರಕಾರ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಶಾಲೆ ಪ್ರಾರಂಭದ ದಿನದಂದು ವಿದ್ಯಾರ್ಥಿಗಳಲ್ಲಿ ಹುಮ್ಮಸು ನಗು ಮುಖದಲ್ಲಿ ಮಂದಹಾಸ ಕಂಡು ಬರುತಿತ್ತು.ಇದೆ ಸಂದರ್ಭದಲ್ಲಿ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳಿದ್ದರು.

Social Plugin