ಮಳೆ ಬೆಳೆ ನೀಡಿ ಕೆಟ್ಟದ್ದನ್ನು ಹೋಗಲಾಡಿಸಿ ಸುಖ ಸಮೃದ್ಧಿ ನೀಡುವ ಜೋಕುಮಾರ
         ಹಳ್ಳೂರ 22: ಗ್ರಾಮದಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿ ನಂತರ ಹುಟ್ಟುವ ಜೋಕುಮಾರಸ್ವಾಮಿ ಜನನವಾಗಿ ಒಂದು ವಾರಗಳ ಕಾಲ ಗ್ರಾಮದಲ್ಲಿ ಜೋಕುಮಾರ ಮೂರ್ತಿಯನ್ನು ಪ್ರತಿ ಮನೆ ಮನೆಗೆ ಹೋಗುವ ಸಾಂಪ್ರದಾಯಕ ಪದ್ಧತಿ ನಡೆಯುತ್ತದೆ.ಗಣೇಶ ಭಾದ್ರಪದ ಮಾಸದಲ್ಲಿ ಗಣೇಶ ಚತುರ್ಥಿಯ ಆಚರಣೆಯ ಸಂಭ್ರಮ ದಲ್ಲಿ ಮತ್ತೊಬ್ಬ ದೇವರ ಆರಾಧನೆಯು ನಡೆಯುತ್ತಿದೆ, ಅದುವೇ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ ಸ್ವಾಮಿಯ ಆರಾಧನೆ, ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಈ ಆರಾಧನೆ ಜರುಗುತ್ತದೆ, ಭಾದ್ರಪದ ಶುಕ್ಲಪಕ್ಷದ ಚತುಥಿ೯ಯಂದು ಗಣೇಶನ ಜನನವಾದರೆ,ಭಾದ್ರಪದ ಅಷ್ಚಮಿಗೆ ಜೋಕುಮಾರ ಸ್ವಾಮಿಯ ಜನನ, ಇವರಿಬ್ಬರ ನಡುವಿನ ಭೇಟಿ ಒಂದೇ ದಿನ, ಇಬ್ಬರೂ ಸಹೋದರರು , ಜೋಕುಮಾರ ಸ್ವಾಮಿಯ ಆರಾಧನೆಯನ್ನು ಉತ್ತರ ಕರ್ನಾಟಕದಲ್ಲಿ ಗಂಗಾಮತಸ್ಥ ಸಮುದಾಯದ ಜನರು ಆಚರಿಸುವರು, ಈ ಸಮುದಾಯದವರು ತಮ್ಮ ಮನೆಗೆ ಗಣೇಶ ಮೂರ್ತಿ ಮನೆಗೆ ತರಲಾರರು,ರಾಜ್ಯದಲ್ಲಿ ಗಂಗಾಮತಸ್ಥ ಸಮುದಾಯದವರು ಮನೆಯ ಹೆಣ್ಣು ಮಕ್ಕಳು ಬುಟ್ಟಿ ಯಲ್ಲಿ ಜೋಕುಮಾರ ಸ್ವಾಮಿಯನ್ನು ಪ್ರತಿಷ್ಠಾಪಿಸಿಕೊಂಡು ದೇವಸ್ವರೂಪ ವನ್ನು ಮಾಡಿ ತಲೆಗೆ ಉತ್ತರ ಕರ್ನಾಟಕದ ಪುಟಗಳ(ರುಮಾಲು) ಸುತ್ತಿ ಮನೆ ಮನೆಗೆ ಹಾಡು ಹೇಳುತ್ತಾ (ಅಂದರೆ ಜೋಕುಮಾರ ಸ್ವಾಮಿಯ ಜನನ, ಜೀವನದ ವೃತ್ತಾಂತದ ಹಾಡು) ಹೋಗುವರು, ಹೀಗೆ ಏಳು ದಿವಸಗಳ ಕಾಲ ಆಚರಿಸುವರು,ಮನೆ ಮನೆಗೆ ಜೋಕುಮಾರ ಸ್ವಾಮಿಯನ್ನು ತೆಗೆದುಕೊಂಡು ಹೋದಾಗ ಅವರು ನೀಡುವ ಆಹಾರ ಪದಾರ್ಥಗಳನ್ನು ಸ್ವೀಕರಿಸುವರು
ಜೋಕುಮಾರ ಸ್ವಾಮಿಯ ಬಗೆಗೆ ಹಲವಾರು ವಿವಿಧ ಕಥೆಗಳಿವೆ, ಆತ ಬಹಳ ವೃೆಭವದಿಂದ ಬದುಕಿದ್ದಾನೆಂದೂ, ಆತನು ಬೇರೆ ಯವರ ಹೆಣ್ಣು ಮಕ್ಕಳನ್ನು ಮೋಹಿಸಿ ಅವರಿಂದಲೇ ಹತನಾದನೆಂದು, ಮತ್ತೊಂದು ಕಥೆಯಂತೆ ತಾಯಿ ಪಾರ್ವತಿ ದೇವಿಯು "ನೀನು ಹುಟ್ಟಿದ ಏಳನೆಯ ದಿನಕ್ಕೆ ಸಾಯಿ" ಎಂದು ಶಾಪಕೊಟ್ಟಳಂತೆ, ಇಂಥ ಹಲವು ಕಥೆಗಳಿವೆಜೋಕುಮಾರ ಸ್ವಾಮಿಯನ್ನು ಬುಟ್ಟಿಯಲ್ಲಿ ಮನೆಗೆ ತಂದಾಗ ಆತನಿಗೆ ನೃೆವೇದ್ಯ ಅಪಿ೯ಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಸಮಾಜಕ್ಕೆ ಇದೆ, ಜೋಕುಮಾರ ಸ್ವಾಮಿಯು ತನ್ನ ಆಚರಣೆ ನಂತರ ಪರಶಿವನ ಬಳಿಗೆ ಹೋಗಿ ಭೂಲೋಕದ ಮಳೆ ಬೆಳೆಯ ವರದಿ ನೀಡುವ ನೆಂಬ ಪ್ರತೀತಿ ಇದೆ, ಮಳೆ ಕೊಡುವ ದೇವರೆಂದು ತಿಳಿದು ಈತನನ್ನು ಪೂಜಿಸುವರು,ಜೋಕುಮಾರ
 “ಜೋಕ” ನೆಂಬ ಮುನಿಯ ಮಗನೆಂದು, ಜೊತೆಗೆ ಆತ ಜೇಷ್ಠಾ ದೇವಿಯ ಮಗನೆಂದು ತಿಳಿಯಲಾಗುತ್ತಿದೆ.ಆತನು ಶಿವನ ಗಣಗಲ್ಲಿರುವವನು, ಆತ ಗಣಪತಿಯೊಂದಿಗೆ ಬರುವನು ಆದರೆ ಆತನಿಗೆ ಬರೀ ಏಳುದಿವಸ ಆಯಸ್ಸು ಹೀಗೆ ಅನೇಕ ಕಥೆಗಳಿವೆ.
ಒಮ್ಮೆ ಮಳೆಹೋಗಿ ಬೆಳೆ ಒಣಗುತ್ತದೆ. ಆಗ ಜೋಕುಮಾರ ತನ್ನಕುದುರೆ ಏರಿ ಹೊಲಗದ್ದೆಗಳಲ್ಲಿ ಸಂಚರಿಸುತ್ತಾನೆ. ಅವನು ತನ್ನ ಮೇಲು ಹೊದಿಕೆ ಒಮ್ಮೆ ಜೋರಾಗಿ ಆಕಾಶಕ್ಕೆ ಬೀಸಿದಾಗ ಮೋಡಗಳು ಮಳೆ ಸುರಿಸುತ್ತವೆ ಎಂಬ ಕಥೆಯು ಜನಪದದಲ್ಲಿ ಜನಜನಿತ ವಾಗಿದೆ.
ತನ್ನ ಜೀವಿತದ ಏಳು ದಿನಗಳಲ್ಲಿ ಏಳು ಅವತಾರ ತಾಳಿ ಸ್ತ್ರೀಯರನ್ನುಮೋಹಿಸುತ್ತಾನೆ. ಒಮ್ಮೆ ಮಡಿವಾಳರ ಯುವತಿಯನ್ನು ಆತ ಇಷ್ಟಪಡುತ್ತಾಳೆ. ಜೋಕುಮಾರನನ್ನು ಸಹಿಸದ ಆ ಯುವತಿಯ ತಂದೆ ಜೋಕುಮಾರನ ತಲೆ ಕತ್ತರಿಸಿ ನದಿಗೆ ಬಿಸಾಡುತ್ತಾನೆ. ಆ ತಲೆಯು ಒಬ್ಬಬೆಸ್ತರವನಿಗೆ ದೊರೆಯುತ್ತದೆ.ಆಗ ಆತ ತಮ್ಮ ಬೆಳೆಗಳನ್ನು ರಕ್ಷಿಸಿ ನಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ತಂದು ಊರಿನವರೆಲ್ಲರ ಜೊತೆ ಸೇರಿಕೊಂಡು ಜೋಕುಮಾರಸ್ವಾಮಿಗೆ ಪೂಜೆ ಸಲ್ಲಿಸಿದನು ಎಂದು ಕಥೆಯಲ್ಲಿ ಹೇಳಲಾಗುತ್ತದೆ . ಮೂರ್ತಿ ಮಾಡಿದವರಿಗೆ ಕೊಡಬೇಕಾದ ಎಲೆ. ಅಡಿಕೆ, ಉಲುಪಿ ಬೇಳೆ, ಬೆಲ್ಲ, ಪೂಜಿಸಿ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ. ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ.
 ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಆ ಹಾಡುಗಳಲ್ಲಿ ಆತನ ಹುಟ್ಟು,ಬಾಲ್ಯ, ಉಡಾಳತನ, ಆತನ ಕೊಲೆ, ನಂತರದಲ್ಲಿ “ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿ” ಎಲ್ಲ ವೃತಾಂತಗಳು ಬರುತ್ತವೆ. ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು ಇಟ್ಟು ನೀಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ ಯಾಗಿದೆ ಹೀಗೆ ಗ್ರಾಮದ ಪ್ರತಿ ಮನೆಗೆ ಜೋಕುಮಾರ ಸ್ವಾಮಿಯನ್ನು ತೆಗೆದುಕೊಂಡು ಹೋಗಿ ಪೂಜಿಸುವರು, ತನ್ನ ಹುಟ್ಟಿನ ನಂತರದ ಏಳನೇ ದಿನ ಹರಿಜನ ಕೇರಿಗೆ ಹೋಗಿ ತನ್ನ ಕೀಟಲೆಯಿಂದ ಮಾತಂಗಿಯರ ಕೈಗೆ ಸಿಕ್ಕು ಕಣ್ಣು ಕಿತ್ತಿಸಿಕೊಳ್ಳುತ್ತಾನೆ. ಮರಳಿ ಕಣ್ಣು ಕಳೆದುಕೊಂಡು ಕೇರಿಗೆ ಬಂದ ಜೋಕುಮಾರನನ್ನು ಹಿರಿಯರೊಬ್ಬರು ಒನಕೆಯಿಂದ ಆತನ ತಲೆ ಕುಟ್ಟಿ ರಾತ್ರಿ ಊರು ಮುಂದಿನ ಹಳ್ಳ ಅಥವಾ ಕೆರೆ ಯಲ್ಲಿ ಹಾಕುವರು ಎಂಬುದುಸಂಪ್ರದಾಯ.
ಕೊನೆಯ ದಿನ ಗುರುತಿಸಿದ ಮನೆಯಲ್ಲಿ ಜೋಕುಮಾರನ ಮೂರ್ತಿಗೆ ಚೂರಿ ಹಾಕುವರು.
ಆತನ ಅಳಲು ಹೀಗೆ ಏಳು ದಿನ ಬದುಕುವ ಜೋಕುಮಾರ ಸ್ವಾಮಿ ಏಳನೇ ದಿನ ಸಾಯುತ್ತಾನೆ. ಅಂದೇ ಕೆಲವು ಕಡೆ ಅಳಲು-ಅಂಬಲಿ ಎಂಬ ವಿಶಿಷ್ಟ ಆಚರಣೆಯು ಹೊಲಗಳಲ್ಲಿ ನಡೆಯುತ್ತದೆ. ರೊಟ್ಟಿ-ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ಹೊಗಿ ಭೂತಾಯಿಯ ಪೂಜೆ ಮಾಡಿ ಮನೆಮಂದಿಯೆಲ್ಲಾ ಸೇರಿ ಉಂಡುಬರುವುದು ಸಂಪ್ರದಾಯ. ಅಷ್ಟೇ ಅಲ್ಲ ಈ ಅಳಲಿ ನಲ್ಲಿ ಹೊಸಬಟ್ಟೆ ಉಡುವಂತಿಲ್ಲ, ಒಡವೆ-ವಾಹನ ಖರೀದಿಸುವಂತಿಲ್ಲ, ಶುಭಕಾರ್ಯ ಮಾಡುವಂತಿಲ್ಲ ಎಂಬುದು ಜನಪದರ ನಂಬಿಕೆ
ಜೋಕುಮಾರನ ಮರೆಯುವುದು:
ಜೋಕುಮಾರನ ಮರಣದ ನಂತರ ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ, ಕೆರೆಯ ಸಮೀಪವೋ, ನದಿ ದಂಡೆಗೋ ಒಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ “ದಿನ ಕಮ೯” ಮಾಡಿ ಮುಗಿಸಿ ತಮ್ಮ ದಿನನಿತ್ಯದ ಜೀವನದ ಕೆಲಸ ಕಾರ್ಯಗಳನ್ನುಪ್ರಾರಂಭಿಸುತ್ತಾರೆ.
  ಗ್ರಾಮದಲ್ಲಿ ಮಹಿಳೆಯರು ತಿರುಗುವರು
ಜೋಕುಮಾರ.... ಮಡಿವಾಳ ಕೇರಿ ಹೊಕ್ಕಾನ ಜೋಕುಮಾರ ಮುಡಿತುಂಬಾ ಹೂವ ಮುಡಿದಂತ ಚೆಲುವಿನ ತನ್ನ ಮಡಿಯಂದಾ ಜೋಕಮಾರ. 
ಹೀಗೆ ಗಣೇಶ ಚತುರ್ಥಿಯ ಹಬ್ಬದ ಆಚರಣೆಯಲ್ಲಿ ಸದ್ದಿಲ್ಲದೆ ಜೋಕುಮಾರ ಸ್ವಾಮಿಯ ಆಚರಣೆ ಜರುಗಿ ಹೋಗುತ್ತದೆ, ಹಳ್ಳಿಗಳಲ್ಲಿ ತುಂಬ ಶ್ರದ್ಧೆಯಿಂದ ಭಕ್ತಿಯಿಂದ ಆಚರಣೆ ಮಾಡುವರು, ಸವ೯ರಿಗೂ ದೇವರು ಒಳಿತನ್ನೇ ಮಾಡಲೆಂದು ಪ್ರಾಥಿ೯ಸೋಣ, ಇಂದಿನ ಪ್ರಸ್ತುತ ಕರೋನಾ ಮಹಾಮಾರಿ ರೋಗಾಣುಗಳ ತೊಂದರೆ, ಅಶಾಂತಿಯ ವಾತಾವರಣದ ಪ್ರಸ್ತುತ ಸಮಯದಲ್ಲಿಯ ಸಮಸ್ಯೆಗಳಿಗೆ ಮಂಗಳ ಮತ್ತು ಗಣೇಶ ರಾಜನು ಹಾಗೂ ಆತನ ಸಹೋದರನಾದ ಜೋಕುಮಾರ ಸ್ವಾಮಿಯು ಪರಿಹಾರ ನೀಡಲೆಂದು ಆಶಿಸಿ ಭಕ್ತಿಯಿಂದ ಆರಾಧಿಸೋಣ, ಇದೆ ಸಂದರ್ಭದಲ್ಲಿ ಏಳು ದಿನ ಜೋಕುಮಾರ ಸೇವೆ ಮಾಡಿದ ಬೌರವ್ವ ತಳವಾರ. ಶಿವಶಂಕರ ನಗರದ ಗೌರವ್ವ ಬಸಪ್ಪ ಮಾಲಗಾರ . ಸೇರಿದಂತೆ ಅನೇಕರಿದ್ದರು. ಮುರಿಗೆಪ್ಪ ಮಾಲಗಾರ. ಊರು ಹಳ್ಳೂರ ಮೊಬೈಲ್ ನ,9341928214