ವರದಿ ಮುರಿಗೆಪ್ಪ ಮಾಲಗಾರ 
ಹಳ್ಳೂರ 22: ಅಂಗದಲ್ಲಿ ಲಿಂಗ ಸ್ಥಾಪನೆ ಮಾಡಿಕೊಂಡು ಶಿವನ ಪಾದವನ್ನು ಹೊಂದಬೇಕು. ಪಾಪ ಕರ್ಮದ ಕಾರ್ಯ ಮಾಡದೆ ಪುಣ್ಯದ ಕೆಲಸ ಕಾರ್ಯಗಳನ್ನು ಮಾಡಿದರೆ ಪಾಪ ನಾಶವಾಗಿ ಪುಣ್ಯ ಪ್ರಾಪ್ತಿಯಾಗುವುದು ಎಂದು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು. ಅವರು ಘಟಪ್ರಭಾ ಮಲ್ಲಾಪುರ (ಪಿ ಜಿ) ಪಟ್ಟಣದ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ನಡೆದ ಪಾರಮಾರ್ಥಿಕ ಸಪ್ತಾಹದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಕಲ್ಮಶವಾದ ಮನಸ್ಸು ಹೊಂದದೆ ಪರಿಶುದ್ದವಾದ ಮನಸ್ಸಿನಿಂದ ಪ್ರಹ್ಲಾದನಂತಹ ಭಕ್ತಿ ಮಾಡಿದರೆ ದೇವರು ಒಲಿಯುವನು.ಜಾತಿ ಗುರವಿನ, ಮಂತ್ರವಾದಿಗಳನ್ನು ನಂಬದೆ ನೀತಿ ಧರ್ಮದ ಮಾರ್ಗವನ್ನು ತೋರಿಸಿ ಉದ್ದಾರ ಮಾಡುವ ಸಮರ್ಥ ಗುರುವಿನನ್ನು ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆದರೆ ಮಾನವ ಜನ್ಮ ಉದ್ದಾರವಾಗುತ್ತದೆ.ಧರ್ಮವಂತರ, ರಾಜಕಾರಣಿಗಳ, ಗುರು ಶಿಷ್ಯರ, ಗಂಡ ಹೆಂಡತಿ ಮನಸ್ಸು ಕೆಡಿಸಿ ಅಗಲಿಸುವ ಪಾಪದ ಕೆಲಸ ಮಾಡಬಾರದು.ಲೋಕವು ಸತ್ಯವು, ಮಿತ್ಯವೂ ಎರಡು ಇದೆ.ದುಷ್ಟರ ಸಂಗ ಮಾಡಿ ಜೀವನ ಹಾಳುಮಾಡಿಕೊಳ್ಳದೆ ಸತ್ಯವಂತರ ಸಂಗ ಮಾಡಿ ಉದ್ದಾರವಾಗಿರಿ.ಭೂಮಿಯ ಮೇಲೆ ಮೋಸ ವಂಚನೆ ತಾಂಡವಾಡುತ್ತಿದೆ.ಪಾಪ ಹೆಚ್ಚಾದಾಗ ಕಾಲಕಾಲಕ್ಕೂ ಮಾಧವಾನಂದರಂತಹ ಅವತಾರಿಕರು ಬಂದಿರುತ್ತಾರೆ ತಿಳಿದುಕೊಂಡು ಅವರ ಸನ್ಮಾರ್ಗದಲ್ಲಿ ಸಾಗಬೇಕು. ಎಂದು ಹೇಳಿದರು. ದಯಾನಂದ ಶ್ರೀಗಳು ಮಾತನಾಡಿ ದೇವಸ್ಥಾನಕ್ಕೆ ಹೋದರೆ ದೇವರು ಮಾತಾಡುವದಿಲ್ಲ ಭಕ್ತರು ಭಕ್ತಿ ಮಾಡಿದರೆ ಬಂದ ಕಷ್ಟ ಬಯಲು ಮಾಡಿ ಬೇಡಿದ್ದನ್ನು ಕೊಡುವ ಕಲಿಯುಗದ ಕಾಮಧೇನು ಕಲ್ಪವೃಕ್ಷ ದಾನೇಶ್ವರ ಶ್ರೀಗಳು ಎಂದು ಹೇಳಿದರು. ಮಾರುತಿ ಹುಕ್ಕೇರಿ ಮಾತನಾಡಿ ಜೋರಾಗಿ ಮಳೆ ಬರುತ್ತಿದ್ದರೂ ಭಕ್ತರು ಅಲುಗಾಡದೆ ಕುಳಿತುಕೊಂಡು ಅನುಭವ ಕೇಳುವದನ್ನು ನೋಡಿದರೆ ಇದೊಂದು ವಿಶೇಷ ಹಾಗೂ ಭಕ್ತಿಯ ಪರಾಕಾಷ್ಟೇ.ಹಾದಿ ಬೀದಿ, ಪುಣ್ಯಕ್ಷೇತ್ರಗಳಲ್ಲಿ ಹಸಿದವರಿಗೆ ಅನ್ನ ನೀಡುವ ದಾನೇಶ್ವರ ಶ್ರೀಗಳ ಪುಣ್ಯದ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲವೆಂದು ಹೇಳಿದರು. ದಾನೇಶ್ವರ ಶ್ರೀಗಳನ್ನು ಘಟಪ್ರಭಾ, ಮಲ್ಲಾಪುರ ಭಕ್ತರು ಅಲಂಕರಿಸಿ ಸನ್ಮಾನಿಸಿದರು. ಈ ಸಮಯದಲ್ಲಿ ವಿಜಯ ವೇದಾಂಗ ಶ್ರೀಗಳು.ಶಾಂತಮ್ಮ ತಾಯಿ. ಮಲಪ್ರಭಾ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಮೀನಾಕ್ಷಿ ನೆಲಗಳ್ಳಿ.ಸಿ ಪಿ ಐ ಶ್ರೀಶೈಲ ಬ್ಯಾಕೋಡ. ಸಮತೋಲ ಪತ್ರಿಕೆಯ ಸಂಪಾದಕರಾದ ಮಡಿವಾಳಪ್ಪ ಮುಚಳಂಬಿ.ಗ್ರಾಮ ಲೇ ಜಗದೀಶ ಚೊರಿ.ರಾಮನ್ನಾ ಹುಕ್ಕೇರಿ.ಮನೋಜ ಕಲಬುರ್ಗಿ.ಕರೆಪ್ಪ ದಡ್ಡಿಮನಿ. ಕ್ಯಾತ ಗಾಯಕಿ ಸವೀತಾ ಪಟ್ಟಣಶೆಟ್ಟಿ.ಮಾರುತಿ ತುಕ್ಕಾನಟ್ಟಿ ಸೇರಿದಂತೆ ಅನೇಕರಿದ್ದರು.