ಹಳ್ಳೂರ 21:ಗೋಕಾಕ ತಾಲೂಕಿನ ಘಟಪ್ರಭಾ ಮಲ್ಲಾಪುರ (ಪಿ ಜಿ) ಪಟ್ಟಣದ  ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಬುಧವಾರ ದಂದು ಜರುಗುತ್ತಿರುವ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದ  ದಿವ್ಯ ಸಾನಿಧ್ಯವನ್ನು ಬಂಡಿಗಣಿಯ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಶ್ರೀಗಳು ವಹಿಸುವರು. ಘಟಪ್ರಭಾ ಸಿ ಪಿ ಐ ಶ್ರೀಶೈಲ ಬ್ಯಾಕೂಡ. ಸಮತೋಲ ಪತ್ರಿಕೆಯ ಸಂಪಾದಕರಾದ ಮಡಿವಾಳಪ್ಪ ಮುಚಳಂಬಿ. ರಾಮಣ್ಣ ಹುಕ್ಕೇರಿ. ಮಾರುತಿ ಹುಕ್ಕೇರಿ. ಶಂಕರ ಹತ್ತರವಾಟ ಸೇರಿದಂತೆ ವಿಠ್ಠಲ ರುಕ್ಮಿಣಿ ಕಮಿಟಿಯವರು, ಗ್ರಾಮಸ್ಥರು  ಹಾಗೂ ಬಂಡಿಗಣಿ ಮಠದ ಸದ್ಭಕ್ತರು ಪಾಲ್ಗೊಳ್ಳುವರೆಂದು ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.