ತೇರದಾಳದ ಪೋಲಿಸ್ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪನೆ ಕುರಿತು ಶಾಂತಿ ಸಭೆ ನೆರವೇರಿತು.
ತೇರದಾಳ : ಕರ್ನಾಟಕದಾದ್ಯಂತ ಅನೇಕ ಗಣೇಶ ಮಹಾಮಂಡಳದವರು ಹಾಗೂ ಶ್ರೀರಾಮಸೇನೆಯ ಒತ್ತಾಯದ ಸಲುವಾಗಿ ಹಾಗೂ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನೈಟ್ ಲಾಕ್ ಡೌನ್ ಹಾಗೂ ನಿಫಾ ವೈರಾಣು ಇರುವುದರಿಂದ ಸರಕಾರ ಕೆಲವು ಷರತ್ತುಗಳನ್ನು ಹಾಕಿ ಸಾರ್ವಜನಿಕ ವಲಯದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿದೆ. ಕೋವಿಡ್-19 ನಿಯಮಗಳನ್ನು ಪಾಲನೆ ಮಾಡಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಬೇಕು ಎಂದು ಸಿಪಿಐ ಜೆ.ಕರುಣೇಶಗೌಡ ಹೇಳಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ನಡೆದ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಕುರಿತು ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಹಳ್ಳಿಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪಂಚಾಯತಿಗಳ ಪಿಡಿಓ ಗಳು ಪರವಾಣಿಗೆ ಕೊಡುತ್ತಾರೆ. ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಸ್ಥಳೀಯ ಠಾಣೆಯ ಪಿಎಸ್‍ಐ ಅವರು ಕೊಡುತ್ತಾರೆ. ಅರ್ಜಿಯನ್ನು ಪುರಸಭೆಯಲ್ಲಿಯೇ ಕೊಡಬೇಕು. ಪರವಾಣಿಗೆಯನ್ನು ರಸ್ತೆಗಳನ್ನು ಹೊರತುಪಡಿಸಿ ಪರವಾಣಿಗೆ ಕೊಡುತ್ತಾರೆ. ಪರವಾಣಿಗೆ ಪಡೆಯುವಾಗ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಅಧಿಕಾರಿಗಳು ನಾವು ನಿಮಗೆ ಸಾಥ್ ಕೊಡುತ್ತೇವೆ ಸಾರ್ವಜನಿಕರು ಸರಕಾರದ ನಿಯಮಗಳನ್ನು ಪಾಲಿಸಬೇಕು. ಶಾಂತಿ ಮತ್ತು ಸಹಬಾಳ್ವೆಯಿಂದ ಗಣೇಶ ಹಬ್ಬನಡೆಯಿಲಿ. ಪಟಾಕಿ ಸುಡುವುದನ್ನು ಕಡಿಮೆ ಮಾಡಿ, ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯಾದ ಮೆರವಣಿಗೆ ಇರುವುದಿಲ್ಲ. ಕೋವಿಡ್ ಪ್ರಯುಕ್ತ ಇದೊಂದು ವರ್ಷ ಆಡಂಬರವಿಲ್ಲದೆ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಿ. ಯಾವುದೇ ರೀತಿಯಾದ ಮನರಂಜಣೆ ಕಾರ್ಯಕ್ರಮಗಳಿಗೆ ಅನುಮತಿ ಇರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪಿಎಸ್‍ಐ ರಾಜು ಬೀಳಗಿ, ಹೆಚ್ಚುವರಿ ಪಿಎಸ್‍ಐ ಎಸ್.ಕೆ.ಸೂರ್ಯವಂಶಿ, ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಸೇರಿದಂತೆ ಪುರಸಭೆ ವ್ಯಾಪ್ತಿಯಲ್ಲಿ ಬರುವಂತ ಮತ್ತು ತೇರದಾಳ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಗಣೇಶ ಪ್ರತಿಷ್ಠಾಪನೆ ಮಂಡಳಿಗಳ ಪದಾಧಿಕಾರಿಗಳು ಹಾಗೂ ಪಟ್ಟಣದ ಪ್ರಮುಖರು ಇದ್ದರು.
____________

Social Plugin