ಬಂಡಿಗಣಿ 08:ಬೇರೆಯವರ ಆಸ್ತಿ ಅಂತಸ್ತಿಗೆ ಆಸೆ ಮಾಡದೆ ಸತ್ಯ ನೀತಿ ಮಾರ್ಗದಲ್ಲಿದ್ದು ಸುಳ್ಳು ತುಡುಗ ಬಿಟ್ಟು ಸತ್ಯದ ಕಾಯಕ ಮಾಡಿ ಹಣ ಸಂಪಾದನೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗಿ ದೇವರ ಪ್ರೀತಿಗೆ ಪಾತ್ರರಾಗುವರೆಂದು ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು. ಅವರು ಬಂಡಿಗಣಿಯ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದಲ್ಲಿ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ದುಷ್ಟರಿಗೆ, ಕುಡಕರಿಗೆ ಸಹಾಯ ಸಹಕಾರ ಮಾಡದೆ ಸತ್ಯವಂತ, ಬಡವ ಅಸಹಾಯಕರಿಗೆ ಸಹಾಯ ಮಾಡಿ ಪುಣ್ಯ ಪಡೆದುಕೊಳ್ಳಿರಿ.
ಹೇಸಿ ಗುಣ ಮನದಲ್ಲಿಟ್ಟುಕೊಂಡು ಪುಣ್ಯ ಕ್ಷೇತ್ರಗಳಿಗೆ ಹೋದರೆ ಪಲವಿಲ್ಲ ಪ್ರತಿಯೊಂದು ಜೀವಿಯಲ್ಲಿ ಹಾಗೂ ಹೂವಿನಂಥ ಶುಭ್ರ ಮನಸ್ಸಿನಲ್ಲಿ ದೇವರಿದ್ದಾನೆ. ಒಬ್ಬರ ಮನಸ್ಸನ್ನು ನೋಯಿಸಿ ಸತ್ಯವನ್ನು ಸುಳ್ಳು ಮಾಡಿ ಕಷ್ಟಕ್ಕೆ ಸಿಲುಕಿಸುವದು ಮಹಾಪಾಪವಾಗಿದೆ. ಜಾತಿ ಅಭಿಮಾನವನ್ನು ಬಿಟ್ಟು ನೀತಿ ಧರ್ಮವನ್ನು ಪಾಲಿಸಿರಿ. ಒಂದು ಸಾವಿರ ವರ್ಷದ ತಪಸ್ಸು ಕ್ಷಣದ ನೀತಿಗೆ ಸಮಾನವಾದದ್ದು. ಮಾನವ ಹುಟ್ಟುವಾಗ, ಸಾಯುವಾಗ ಮಹೂರ್ತ ಸಮಯ ನೋಡಿ ಬರುವದಿಲ್ಲ ಪಂಚಾಂಗ ಮಂತ್ರವಾದಿ ಗಳೆಲ್ಲ ನಶ್ವರ ದೇವರೊಬ್ಬನೇ ಸತ್ಯ.ರಾಜಕಾರಣಿಗಳು, ಅಧಿಕಾರಿಗಳು ನುಡಿದಂತೆ ನಡೆಯಬೇಕು. ಸರಕಾರ, ವೈದ್ಯ, ಗುರುವಿನ ಮುಂದೆ ಕೆಟ್ಟ ಪ್ರಸಂಗ ಬಂದರು ಸುಳ್ಳು ಮಾತಾಡದೆ ಸತ್ಯವನ್ನೇ ನುಡಿಯಬೇಕು ಸತ್ಯವೇ ದೇವರು.ಸತ್ಯಹರಿಚಂದ್ರನನ್ನು ಸಾಕಷ್ಟು ರೀತಿಯಿಂದ ಕಷ್ಟ ನೀಡಿದ ವಿಸ್ವಾಮಿತ್ರನಿಗೆ ಕೊನೆಗೆ ಕಷ್ಟ ಅನುಭವಿಸುವ ಪ್ರಸಂಗಒದಗಿ ಬಂತು.
ಸತ್ಯಕ್ಕೆ ಜಯವಾಗುವದೆಂದು ಹೇಳಿದರು. ಬೆಳಗಾವಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಮಾತನಾಡಿ ಜಗತ್ತಿನಲ್ಲಿ ಹಸಿವಿನಿಂದ ಬಳಲಬಾರದೆಂದು ಹಸಿವು ನಿಗಿಸುವ ಅನ್ನದಾಸೋಹ, ಮಾಡಿ ಸತ್ಯದ ಸಂದೇಶವನ್ನು ಸಾರಿ ಹೇಳಿ ಜಗತ್ತನ್ನು ಉದ್ದಾರಮಾಡುವ ದಾನೇಶ್ವರ ಶ್ರೀಗಳ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲವೆಂದು ಹೇಳಿದರು. ಬೆಂಗಳೂರಿನ ಹೂವು ಮಾರಾಟಗರಾದ ಎ ಕಾರ್ತಿಕ. ಎ ಮುತ್ತು ಅವರು ದಾನೇಶ್ವರ ಶ್ರೀಗಳಿಗೆ ಹೂವಿನ ಅಲಂಕಾರ ಮಾಡಿ ಮಾತನಾಡಿ ಬಂಡಿಗಣಿ ಮಠಕ್ಕೆ ಹೂ ಕೊಡುವದರಿಂದ ನಮ್ಮ ವ್ಯಾಪಾರ ಅತ್ತ್ಯುತ್ತಮ ವಾಗಿ ನಡೆದು ಹೆಚ್ಚು ಲಾಭದಾಯಕವಾಗಿದೆ ಎಂದರು. ಇದೆ ಸಂದರ್ಭದಲ್ಲಿ ಸಹಸ್ರಾರು ಮುತ್ತೈದೆಯರಿಗೆ ಉಡಿ ತುಂಬಿದರು. ಆಲಕನೂರ ಕರೆಸಿದ್ದನ ಪೂಜಾರಿ ನಾಗಪ್ಪ ಕಂಠೀಕಾರ.ಹವಾಲ್ದಾರ ಭೀಮಸಿ ನಾಗನೂರ.ಬಸವರಾಜ ಕಡಾಡಿ. ವಾಮನ್ನಾ ಕಟ್ಟಿಮನಿ. ನಬಿಸಾಬ ಮುಲ್ಲಾ. ಕರೆಪ್ಪ ದಡ್ಡಿಮನಿ. ನಾಗಪ್ಪ ಚೌಗಲಾ ಸೇರಿದಂತೆ ಭಕ್ತರಿದ್ದರು.

Social Plugin