ಮುಗಳಖೋಡ: ಇಲ್ಲಿನ ಜಿ.ಎಲ್. ಬಿ.ಸಿ ಕಾಲುವೆ ಹತ್ತಿರ ಜತ್ತ-ಜಾಂಬೊಟಿ (ಮುಗಳಖೋಡ ಕ್ರಾಸ್) ರಸ್ತೆ ತಿರುವಿನಲ್ಲಿ ರಾತ್ರಿ ವೇಳೆ 2 ಗಂಟೆಗೆ ವೇಗವಾಗಿ ಅಥಣಿಗೆ ಹೋಗುವ ಸ್ವಿಪ್ಟ್ ಕಾರ ಆಯ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು, ಒರ್ವ ಸಣ್ಣ ಪುಟ್ಟ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದಾನೆ.
ಘಟನೆಯ ವಿವರ: ಅಥಣಿಯ ಈರಯ್ಯಾ ಮಲ್ಲಯ್ಯ ಹಿರೇಮಠ ಎಂಬ ಯುವಕ ಶನಿವಾರ ನರಗುಂದದಿಂದ ತಮ್ಮ ತಾಯಿಯನ್ನು ಆಸ್ಪತ್ರೆಗೆ ತೋರಿಸಿ ಬಿಟ್ಟು ಬರುವಾಗ ಮುನವಳ್ಳಿ ದಾಬಾದಲ್ಲಿ ಊಟ ಮುಗಿಸಿ ಅಥಣಿಗೆ ಮರಳುವಾಗ ಮುಗಳಖೋಡ ಕೆನಾಲ್ ಹತ್ತಿರ ವೇಗವಾಗಿ ಬಂದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಅಥಣಿ ಶಿವಯೋಗಿ ನಗರದ ಕಾರ ಚಾಲಕ ನಿಂಗರಾಜ ಅಪ್ಪಸಾಬ ಮಾಳಿ ಊರ್ಪ ಮುತ್ತು ( 21 ) ಇನ್ನೋರ್ವ ಅಥಣಿ ಸ್ವಾಮಿ ಪ್ಲಾಟ್ ವಿನಾಯಕ ಚಿದಾನಂದ ಕಾವೇರಿ (20) ಮೃತಪಟ್ಟಿದ್ದಾರೆ. ವಾಹನವು ಸಂಪೂರ್ಣ ನುಜ್ಜು-ಗುಜ್ಜಾಗಿದ್ದು ಅದೃಷ್ಟವಶಾತ್ ಈರಯ್ಯಾ ಮಲ್ಲಯ್ಯಾ ಹಿರೇಮಠ ಸಣ್ಣ ಪುಟ್ಟ ಗಾಯಗಳಾಗಿ ಬದುಕುಳಿದಿದ್ದಾನೆ. ರಸ್ತೆ ಪಕ್ಕದ ಜನರು ಜೋರಾದ ಶಬ್ದ ಕೇಳಿ ಹೊರ ಬಂದು 112ಗೆ ಹಾಗೂ ಹಾರೂಗೇರಿ ಪೋಲಿಸ್ ಠಾಣೆಗೆ ಸುದ್ದಿ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಹಾರೂಗೇರಿ ಪೋಲಿಸ್ ಸಿಬ್ಬಂದಿ ಮರಕ್ಕೆ ಅಂಟಿಕೊಂಡ ಕಾರನ್ನು ಜೆಸಿಬಿ ಮೂಲಕ ಹೊರತೆಗೆದು ಮೃತರನ್ನು ವೈದ್ಯಕೀಯ ತಪಾಸಣೆ ಮಾಡಿ ಮೃತರ ಕುಟುಂಬದವರಿಗೆ ಪಾರ್ಥಿವ ಶರೀರವನ್ನು ಹಸ್ತಾಂತರಿಸಿದರು.
ಘಟನಾ ಸ್ಥಳಕ್ಕೆ ಅಥಣಿ ಡಿ.ವಾಯ.ಎಸ್.ಪಿ ಎಸ್ ವ್ಹಿ.ಗಿರೀಶ, ರಾಯಬಾಗ ಸಿ.ಪಿ.ಐ ಕೆ.ಎಸ್. ಹಟ್ಟಿ, ಪಿ.ಎಸ್.ಐ ರಾಘವೇಂದ್ರ ಖೋತ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Social Plugin