ಅಂತರ್ ಜಿಲ್ಲಾ ಕಳ್ಳರಿಂದ 10ಬೈಕ್‍ಗಳನ್ನು ವಶಪಡಿಸಿಕೊಂಡು ಇಬ್ಬರು ಕಳ್ಳರನ್ನು ಬಂಧಿಸಿದ ತೇರದಾಳ ಪೋಲಿಸ್‍ರು.

  ತೇರದಾಳ ಪೋಲಿಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ, 10 ಬೈಕ್ ವಶ
ತೇರದಾಳ : ತೇರದಾಳ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ರಬಕವಿ, ಮಹಾಲಿಂಗಪೂರ ಹಾಗೂ ಮುಧೋಳ, ಲೋಕಾಪೂರ, ಬೆಳಗಾವಿ ಜಿಲ್ಲೆಯ ಗೋಕಾಕ, ಕಟಕೋಳಗಳಲ್ಲಿ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಪಟ್ಟಣದ ಮಹಾವೀರ ಸರ್ಕಲ್‍ದಲ್ಲಿ ಸೆ.12ರಂದು ಬೆಳಿಗ್ಗೆ ಬಂಧಿಸಿರುವ ಪೋಲಿಸರು. ಆರೋಪಿತರಿಂದ 10 ಬೈಕ್‍ಗಳನ್ನು ವಶಪಡಿಸಿಕೊಂಡು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
  ಬಾಗಲಕೋಟ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಲೋಕೇಶ ಜಗಲಾಸರ್ ಮತ್ತು ಡಿಎಸ್‍ಪಿ ಎಮ್.ಪಾಂಡುರಂಗಯ್ಯ ಹಾಗೂ ಬನಹಟ್ಟಿ ಸಿಪಿಐ ಜೆ.ಕರುಣೇಶಗೌಡ ಸ್ಥಳೀಯ ಠಾಣೆಯ ಪಿಎಸ್‍ಐ ಆರ್.ವಾಯ್. ಬೀಳಗಿ ನೇತೃತ್ವದಲ್ಲಿ ಆರೋಪಿತರಾದ ಹುಜೇಫಾ ದಸ್ತಗೀರಸಾಬ ಅತ್ತಾರ(23) ಹಾಗೂ ಜುಬೇರ ಅಲ್ಲಾಸಾಬ ಶಿಲ್ಲೆದಾರ(27) ಬಂಧಿಸಿ ಅವರ ಹತ್ತಿರವಿದ್ದ 5.ಲಕ್ಷ ರೂ. ಬೆಲೆಬಾಳುವ 10ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. 
  ಈ ಕಾರ್ಯಾಚರಣೆ ತಂಡದಲ್ಲಿ ಹೆಚ್ಚುವರಿ ಪಿಎಸ್‍ಐ ಎಸ್.ಕೆ.ಸೂರ್ಯವಂಶಿ, ಎಎಸ್‍ಐ ಎಲ್.ಬಿ.ಮಾಳಿ, ಸಿಬ್ಬಂದಿಗಳಾದ ಪಿ.ಎಚ್.ಗಣಿ, ಎಮ್.ಆರ್.ಕೆಂಚನ್ನವರ, ಸಿ.ಎಮ್.ಬಡೇಘರ, ಎ.ಬಿ.ಸವದಿ, ಬಿ.ಎಸ್.ಚೌಲಗಿ, ಎಸ್.ಎಸ್.ಜಕಾತಿ, ಕೆ.ಎಚ್.ಸನಹಟ್ಟಿ, ಎಮ್.ಎಲ್.ದೊಡಹಟ್ಟಿ, ಎಸ್.ಬಿ.ಕಲಾಠೆ, ಎಸ್.ಬಿ.ಭೋಜನ್ನವರ, ಎಮ್.ಎಸ್. ಸವದಿ, ಎನ್.ಡಿ.ಕಾಂಬಳೆ, ಮಹಾಂತೇಶ ಗುರವ ಪೋಲಿಸರು ಭಾಗವಹಿಸಿದ್ದರು.
________