ವರದಿ ಮುರಿಗೆಪ್ಪ ಮಾಲಗಾರ ಹಳ್ಳೂರ 12:ಇಂಚಗೇರಿ,ಮಾಧವಾನಂದರ ಸಂಪ್ರದಾಯವು ಶ್ರೇಷ್ಠವಾದದ್ದು ಹಳ್ಳಿ ಹಳ್ಳಿಗೆ ಹೋಗಿ ಸಪ್ತಾಹ ನಡೆಸಿ ಭಕ್ತರಿಗೆ ಭಕ್ತಿ ನೀತಿ ಕಲಿಸಿ ಉದ್ದಾರಮಾಡಿದ್ದಾರೆ. ಸಂಸಾರ, ಶ್ರೀಮಂತಿಕೆ ಅಧಿಕಾರದಲ್ಲಿ ಆನಂದವಿಲ್ಲ ಸಂತ ಮಹಾತ್ಮರ ಸಂಘದಲ್ಲಿದ್ದು ದೇವರ ನಾಮಸ್ಮರಣೆ ಮಾಡಿದರೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆತು ಜೀವನವು ಸುಖಮಯವಾಗಿರುತ್ತದೆ ಎಂದು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.
ಅವರು ಹಳ್ಳೂರ ಗ್ರಾಮದ ಸಮರ್ಥ ಸದ್ಗುರು ಶ್ರೀ ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ ಹಾಗೂ ಸಪ್ತಾಹ ಮುಕ್ತಾಯ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ ಮಹಾತ್ಮರ ಹೆಸರಿನಲ್ಲಿ ಸಪ್ತಾಹ ಮಾಡಿದರೆ ಸಾಲದು ಅವರು ಹೇಳಿದ ಸನ್ಮಾರ್ಗದಲ್ಲಿ ಸಾಗಿದರೆ ಒಳ್ಳೆಯದು.ಸಾದು,ಸಂತ ಪತಿವ್ರತೆ ಯರಿಗೆ ನಿಂದಾ ಆಡುವದು ಪಾಪಧಾಯಕವಾಗಿದೆ. ಬೇರೆಯವರ ಸೀಮೆಯನ್ನು ಅನ್ಯಾಯವಾಗಿ ಒತ್ತುವರಿ ಮಾಡಬೇಡಿರಿ. ಹಿರಿತನ ಮಾಡುವರು ಹಣದ ಆಸೆ ಬಿಟ್ಟು ಜಾತಿ ರಕ್ತ ಸಂಬಂಧ ಹಿಡಿಯದೆ ಸತ್ಯಕ್ಕೆ ನ್ಯಾಯವನ್ನು ಒದಗಿಸಬೇಕು.
ಯುವ ಜನಾಂಗದವರು ಸಾರಾಯಿ ಮಾದಕ ವಸ್ತು ಸೇವನೆ ಮಾಡಿ ಶರೀರ ಹಾಳು ಮಾಡಿಕೊಳ್ಳದೆ. ಹಾಲು ಕುಡಿದು ಶರೀರ ಸದೃಢವಾಗಿಸಿಕೊಳ್ಳಿರಿ. ಮಾಧವಾನಂದರಿಗೆ ದೇಶದ ಮೇಲೆ ಅಭಿಮಾನವಿತ್ತು ದೇಶದ ಹಿತಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಗೋ ಹತ್ಯೆ ಶಿಶು ಹತ್ಯೆ ಮಹಾಪಾಪವಾದದ್ದು. ಪುರಾಣ ಪ್ರವಚನ ಹೇಳುವರು ಹಣದಾಸೆಯನ್ನು ಬಿಟ್ಟು ಶ್ರದ್ದಾ ಭಕ್ತಿಯಿಂದ ಹೇಳಿ ಜಗತ್ತು ಉದ್ದಾರ ಮಾಡಿರೆಂದು ಹೇಳಿದರು. ಶ್ರೀ ಪ್ರಭು ಮಹಾರಾಜರು ಬೆನ್ನಾಳಿ ಮಾತನಾಡಿ ಮನಸ್ಸನ್ನು ಶುದ್ಧ ಮಾಡಿಕೊಂಡಾಗ ಮಾತ್ರ ಮೋಕ್ಷ ದೊರೆಯುವದು. ಮನಸ್ಸನ್ನು ಗೆದ್ದರೆ ಜಗತ್ತೇ ಗೆಲ್ಲಬಹುದು.ಇಂಚಗೇರಿ ಸಾಂಪ್ರದಾಯವು ದೇಶದ ನಾನಾಕಡೆ ಹಬ್ಬಿದೆ. ದೇವರು ನಮ್ಮೊಳಗೆ ಇದ್ದಾನೆ.ಸಮರ್ಥ ಸದ್ಗುರುವಿನ ಪೂರ್ಣವಾಗಿ ನಂಬಿ ನಡೆದರೆ ಎಂದಿಗೂ ಕೈ ಬಿಡುವದಿಲ್ಲ ನಸುಕಿನ ಸಮಯದಲ್ಲಿ ದೇವರ ನಾಮಸ್ಮರಣೆ ಮಾಡಿದರೆ ಸುವರ್ಣಾವಕಾಶ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಶ್ರೀಮಂತ ಮಹಾರಾಜರು. ವಿಜಯ ಮಹಾರಾಜರು. ಅರವಿಂದ ವಕೀಲರು. ಮಾತೋಶ್ರೀ ನೂರುಜಾನ. ಬಸಪ್ಪ ಸಂತಿ. ಕರೆಪ್ಪ ದಡ್ಡಿಮನಿ. ಬಾಳಯ್ಯ ಹಿರೇಮಠ. ಬಸಪ್ಪ ಮಾಲಗಾರ.ಮಾರುತಿ ಮಾವರಕರ. ಸುರೇಶ ಡಬ್ಬನವರ. ಲಕ್ಷ್ಮಣ ಹೊಸಮನಿ. ಗಿರೀಶ ಕೌಜಲಗಿ. ದುಂಡಪ್ಪ ಕತ್ತಿ. ಅಶೋಕ ಕಾಗೆ. ಸೋಮು ಹಿರೇಮಠ.ಶಿವಾನಂದ ಕೌಜಲಗಿ. ಗಿರಮಲ್ಲ ಸಂತಿ.ಸಂಗಪ್ಪ ದುರದುಂಡಿ. ಅಲ್ಲಪ್ಪ, ಕೌಜಲಗಿ. ಕೆಂಪಣ್ಣ ರುದ್ರಾಪುರ. ಸಂಗಪ್ಪ ದುರದುಂಡಿ. ಸಂಗಮೇಶ ದುರದುಂಡಿ. ಕಾರ್ಯಕ್ರಮವನ್ನು ಅಶೋಕ ಹೆಗ್ಗಾನಿ ಸ್ವಾಗತಿಸಿ. ಮುರಿಗೆಪ್ಪ ಮಾಲಗಾರ ನಿರೂಪಿಸಿ. ಸಿದ್ದು ದುರದುಂಡಿ ವಂದಿಸಿದರು.
______

Social Plugin