ತೇರದಾಳ ಪಟ್ಟಣದ ವಾರ್ಡ ನಂಬರ್ 3ರ ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜೇಸಾಬ್ ನಗಾರ್ಜಿ ಪರ ಮತಯಾಚಿಸಿದರು. 

ಸಬ ಕಾ ಸಾಥ ಅಲ್ಲ ಸಾಹುಕಾರ ಕಾ ಸಾಥ - ಆನಂದ ನ್ಯಾಮಗೌಡ.

ತೇರದಾಳ: ದೇಶದಲ್ಲಿ ಸಾಕಷ್ಟು ಬಡವರು ಕರೊನಾ ಕಾರಣದಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದೆ ಪ್ರಾಣ ತೆತ್ತಿದ್ದಾರೆ. ಜೀವನ ನಡೆಸಬೇಕೆಂದರೆ ಕೈಯಲ್ಲಿ ಕೆಲಸವಿಲ್ಲ, ಕಾಸು ಇಲ್ಲ. ಇದ್ದಷ್ಟರಲ್ಲಿಯೇ ಜೀವನ ಸಾಗಿಸೋಣವೆಂದರೆ ಅದು ಸಾಧ್ಯವಾಗುತ್ತಿಲ್ಲ. ಏಕೆಂದರೆ ಜೀವನ ಸಾಗಿಸಲು ಅತೀ ಮುಖ್ಯವಾಗಿರುವ ಆಹಾರ ಧಾನ್ಯ, ಅಡುಗೆ ಎಣ್ಣೆ, ಕಿರಾಣಿ ವಸ್ತುಗಳ, ಪೆಟ್ರೋಲ್, ಡಿಸೈಲ್, ಗ್ಯಾಸ್ ಮುಂತಾದ ವಸ್ತುಗಳ ಬೆಲೆ ಗಗನಕ್ಕೆರಿವೆ. ಹೀಗಾದಾಗ ಬಡವರು ಹೇಗೆ ಬದುಕಬೇಕು. ಸಬ್ ಕಾ ಸಾಥ್ ಎಂದು ಮಂತ್ರ ಹೇಳುತ್ತಿರುವ ಬಿಜೆಪಿ ಪಕ್ಷ ಬಡವರ ಅಣ್ಣವನ್ನು ಕಿತ್ತುಕೊಂಡು ಹಸಿವಿನಿಂದ ಒದ್ದಾಡುವಂತೆ ಮಾಡಿದೆ. ಇದು ಸಬ್ ಕಾ ಸಾಥ್ ಅಲ್ಲ ಸಾಹುಕಾರ್ ಕಾ ಸಾಥ್ ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರು ಬಿಜೆಪಿ ಪಕ್ಷವನ್ನು ತೀಕ್ಷ್ಣವಾಗಿ ಟೀಕಿಸಿದರು.

    ಪಟ್ಟಣದ ವಾರ್ಡ ನಂಬರ್ 3ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜೇಸಾಬ್ ನಗಾರ್ಜಿ ಪರ ಮತಯಾಚಿಸುವ ಸಂದರ್ಭದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಪಕ್ಷ ದೇಶವನ್ನು ಸಂಘ ಸಂಸ್ಥೆಗಳಿಗೆ ಮಾರಾಟಮಾಡುತ್ತಲಿದೆ. ಇದರಿಂದ ಹಿಂದುಳಿದ ವರ್ಗಗಳ  ಮೀಸಲಾತಿ ಸೌಲಭ್ಯ ಹೋರಟು ಹೋಗುತ್ತದೆ. ಹೀಗಾದಾಗ ದೇಶದಲ್ಲಿ ಹಿಂದುಳಿದ ವರ್ಗದವರ ಮಕ್ಕಳು ನಿರುದ್ಯೋಗಿಗಳಾಗಿ ಜೀವನ ನಡೆಸಬೇಕಾಗುತ್ತದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಿರುವ ಬಿಜೆಪಿ ಪಕ್ಷ ಈಗ ಮಾಡುತ್ತಿರುವುದೇನು ಎಂಬುದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೇಸ್ ಪಕ್ಷ ಯಾವಾಗಲೂ ದೇಶ ಕಟ್ಟುವ ಕೆಲಸ ಮಾಡಿದೆ. ಇಂದಿರಾಗಾಂಧಿಯವರು ಗರೀಬಿ ಹಠಾವೋ ಎಂದು ಬಡವರ ಬಡತನ ನಿರ್ಮೂಲನೆ ಮಾಡಲು ಸಾಕಷ್ಟು ಒಳ್ಳೆಯ ಕಾರ್ಯಕ್ರಮ ಜಾರಿಗೆ ತಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಾಗಲಕೋಟ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ನಂಜಯ್ಯನಮಠ ಅವರು ಬಿಜೆಪಿ ಸರ್ಕಾರವು ಬಡವರ ಖಾತೆಗೆ ಹದಿನೈದು ಲಕ್ಷರೂಪಾಯಿಗಳನ್ನು ನೀಡುತ್ತೇವೆಂದು ಸುಳ್ಳು ಹೇಳಿ ಜನರಿಗೆ ಮೋಸ ಮಾಡಿ ಸರ್ಕಾರ ರಚಿಸಿದ್ದಾರೆ. ಇವರ ಆಡಳಿತ ಬಡವರ ಪರವಾಗಿಲ್ಲ. ಬಡವರಿಗಾಗಿ ಹಮ್ಮಿಕೊಂಡಿರುವ ಕಾಂಗ್ರೇಸ್ ಪಕ್ಷದ ಸಾಕಷ್ಟು ಯೋಜನೆಗಳನ್ನು ರದ್ದುಮಾಡಿ ಅವರನ್ನು ಬೀದಿಗೆ ತಂದಿದ್ದಾರೆ. ಇಂತಹ ಪಕ್ಷ ನೀಮಗೆ ಬೇಕೆ ಎಂದು ಪ್ರಶ್ನಿಸಿದರು.

  ಮಾಜಿ ಸಚಿವೆ ಉಮಾಶ್ರೀ ಮಾತನಾಡಿ ಕಾಂಗ್ರೇಸ್ ಪಕ್ಷ ಬಡವರಿಗಾಗಿ ಲೆಕ್ಕವಿಲ್ಲದಷ್ಟು ಕೆಲಸ ಮಾಡಿದೆ. ನಾಡಿನಲ್ಲಿರುವ ಎಲ್ಲ ಬಡ ಕುಟುಂಬಗಳಿಗೆ ಉಚಿತವಾಗಿ ಅಕ್ಕಿಯನ್ನು ನೀಡಿದೆ. ಸಂಧ್ಯಾ ಸುರಕ್ಷಾ ಯೋಜನೆ, ಮೈತ್ರಿ ಯೋಜನೆ, ಮಂಗಳ ಮುಖಿಯರಿಗೆ, ಪತಿಯಿಂದ ದೀರಾದವರಿಗೆ, ಗರ್ಭಿಣಿಯರಿಗೆ, ಶಿಶುಗಳಿಗೆ, ಶಾಲಾ ಮಕ್ಕಳಿಗೆ, ಮಹಿಳಾ ಸಂಘಗಳಿಗೆ ಹೀಗೆ ಒಬ್ಬರನ್ನು ಬಿಡದೆ ಎಲ್ಲ ಬಡ ಕುಟುಂಬಗಳ ಬದುಕಿಗೆ ನೆರವನ್ನು ನೀಡಿದೆ. ಆದರೆ ಬಿಜೆಪಿ ಯವರು ಈ ಕಾರ್ಯಕ್ರಮಗಳನ್ನು ಒಂದೊಂದಾಗಿ ಮೊಟಕು ಗೊಳಿಸುತ್ತಾ ಮತ್ತೆ ಬಡವರು ಬೀದಿಗೆ ಬೀಳುವಂತಹ ಪರಿಸ್ಥಿತಿ ತಂದೊಡ್ಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ನಾಳೆ ಬಡವರ ಗತಿ ಹೇಗೆ ನೀವೆ ಆಲೋಚನೆ ಮಾಡಿ ಎಂದು ಹೇಳಿದರಲ್ಲದೇ ಬಡವರ ಪಕ್ಷವಾದ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಬೇಕೆಂದು ವಿನಂತಿಸಿಕೊಂಡರು. 

 ಈ ಸಂದಂರ್ಭದಲ್ಲಿ ಪದ್ಮಜೀತ್ ನಾಡಗೌಡಪಾಟೀಲ್, ಕಂಗನೊಳ್ಳಿ, ಪ್ರವೀಣ ನಾಡಗೌಡ, ಪರಸಪ್ಪ ಮಾಸ್ತಿ, ನೇಮಣ್ಣ ಸಾವಂತನವರ, ಪ್ರಭು ಗಸ್ತಿ, ನೀಲೆಶ ದೇಸಾಯಿ, ಅಶೋಕ ಆಳಗೊಂಡ, ಶೆಟ್ಟೆಪ್ಪ ಸುಣಗಾರ, ಸುರೇಶ ಕಬಾಡಗಿ, ಶಿವಾನಂದ ನಡುವಿನಕೇರಿ ಸೇರಿದಂತೆ ಸಾಕಷ್ಟು ಕಾಂಗ್ರೇಸ್ ಮುಖಂಡರು, ಕಾರ್ಯಕರ್ತರು ಇದ್ದರು.