ತೇರದಾಳ : ತೇರದಾಳ ಪಟ್ಟಣವನ್ನು 47ವರ್ಷಗಳಿಂದ ತಾಲೂಕಾ ಕೇಂದ್ರ ಸ್ಥಾನಮಾಡಲು ನಮ್ಮ ಪೂರ್ವಜರು ಹೋರಾಟ ಮಾಡುತ್ತ ಬಂದಿದ್ದರು. ಈಗ ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷಗಳು ವಿಫಲವಾಗಿದ್ದರಿಂದ, ಎಲ್ಲಿಯೋ ಇದ್ದ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ತೇರದಾಳ ಪಟ್ಟಣವನ್ನು ತಾಲೂಕಾ ಕೇಂದ್ರ ಸ್ಥಾನ ಮಾಡಿದ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ತಮ್ಮ ಮತ ನೀಡಿ ಗೆಲ್ಲಿಸಬೇಕು ಎಂದು ಜೆಡಿಎಸ್ ತಾಲೂಕಾ ಅಧ್ಯಕ್ಷ ಬುಜಬಲಿ ಕೆಂಗಾಲಿ ಹೇಳಿದರು.
ತೇರದಾಳ ಪಟ್ಟಣದ ವಾರ್ಡ ನಂ 3ರ ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು ಜೆಡಿಎಸ್ ಪಕ್ಷ ತೇರದಾಳ ಪಟ್ಟಣಕ್ಕೆ ಮರೆಯಲಾರದಂತಹ ಕೆಲಸವನ್ನು ಮಾಡಿದೆ. ಸುಮಾರು 47ವರ್ಷಗಳಿಂದ ಹೋರಾಟ ಮಾಡಿದರೂ ತೇರದಾಳ ತಾಲೂಕಾ ಕೇಂದ್ರವಾಗಿರಲಿಲ್ಲ. ಯಾವುದೇ ಬೇರೆ ಕೆಲಸಕ್ಕೆ ಬಂದಿದ್ದ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ತಾಲೂಕಾ ಹೋರಾಟ ವೇದಿಕೆಗೆ ಹೋಗಿ ಹೋರಾಟಗಾರರ ಮನವಿಯನ್ನು ಸ್ವೀಕರಿಸಿ ನಾನು ಅಧಿಕಾರಕ್ಕೆ ಬಂದ ಮೊದಲನೇ ದಿನವೇ ತೇರದಾಳ ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿ ಮಾಡುತ್ತೇನೆ ಎಂಬ ಮಾತು ಕೊಟ್ಟರು, ಕೊಟ್ಟ ಮಾತಿನಂತೆ ನಡೆದುಕೊಂಡು ತೇರದಾಳ ಪಟ್ಟಣವನ್ನು ತಾಲೂಕಾವನ್ನಾಗಿ ಘೋಷಣೆ ಮಾಡಿದರು ಎಂದರು.
ಈ ಸಂದರ್ಭದಲ್ಲಿ ಹನಮಂತ ಮಾವಿನ ಮರದ ಮಾತನಾಡಿ ತೇರದಾಳ ಪಟ್ಟಣಕ್ಕೆ ಮರೆಯಲಾರದಂತಹ ಐತಿಹಾಸಿಕ ಕೊಡುಗೆಯನ್ನು ನೀಡಿದ ಕುಮಾರಣ್ಣನ ಋಣವನ್ನು ತೀರಿಸುವ ಜವಾಬ್ದಾರಿ ತಮ್ಮೆಲ್ಲರ ಮೇಲಿದೆ. ಆಋಣವನ್ನು ತೀರಿಸಬೇಕೆಂದರೆ ಜೆಡಿಎಸ್ ಅಭ್ಯರ್ಥಿಯನ್ನು ಈ ಉಪಚುನಾವಣೆಯಲ್ಲಿ ಗೆಲ್ಲಿಸಬೇಕೆಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಾರಾಯಣ ಘೋರ್ಪಡೆ, ರಬಕವಿ-ಬನಹಟ್ಟಿ ತಾಲೂಕಾ ಅಧ್ಯಕ್ಷ ಸುರೇಶ ಮಡಿವಾಳ, ತುಳಜಪ್ಪ ಅಥಣಿ, ಚಿಕ್ಕಪ್ಪ ಲಕೋಹಾರ, ಮಗೆಪ್ಪ ತಾರದಾಳ, ಸತ್ಯಪ್ಪ ಮಹಿಶವಾಡಗಿ, ಸದಾಶಿವ ಗೊಂದಳಿ ಸೇರಿದಂತೆ ಸಾಕಷ್ಟು ಕಾರ್ಯಕರ್ತರು ಇದ್ದರು.
Social Plugin