*ಶ್ರೀ ಕ್ಷೇತ್ರ ಇಂಚಗೇರಿ ಮಠ* 

ಭಾಗ (5) 

ಶ್ರೀ.ಸ. ಗಿರಿಮಲ್ಲೇಶ್ವರರು ಮಹಾರಾಜರು
ಶ್ರೀ ಸ.ಸ.ಗಿರಿಮಲ್ಲೇಶ್ವರರು ಮಹಾರಾಜರು ಕರ್ನಾಟಕ-ಮಹಾರಾಷ್ಠ್ರ ಭಾಗದಲ್ಲಿ ಸಂಚರಿಸಿ ಬಡವ ಬಲ್ಲಿಗರೆನ್ನದೆ, ಜಾತಿಭೇಧವನ್ನು ಎಣಿಸದೆ ಎಲ್ಲಾ ಜ್ಙಾನದಾಹಿಗಳಿಗೆ ಜ್ಙಾನೋಪದೇಶವನ್ನು ನೀಡಿದರು. ಈ ಭಕ್ತಿ ಪ್ರಸಾರಕ್ಕೆ ಉಳಿದೆಲ್ಲಾ ಗುರುಗಳ ವೆಚ್ಚವನ್ನು ಸಹ ನೀಡುತ್ತಿದ್ದರು. ಘನವೆತ್ತಜ್ಙಾನಿ, ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಶ್ರೀ ಗುರುದೇವ ರಾನಡೆಯವರು ಹಾಗೂ ಶ್ರೀ ಅಂಬುರಾವ್ ಮಹಾರಾಜರು ಉಮದಿ ಶ್ರೀಗಳ(ಭಾವೂಸಾಹೇಬ್ ಮಹಾರಾಜರು) ಇಚ್ಚೆಯಂತೆ ಭಕ್ತಿ ಪ್ರಚಾರ ಕಾರ್ಯಕೈಗೊಂಡರು. 19 ನೇ ಶತಮಾನದ ಅದಿಭಾಗದಲ್ಲಿ ದೇಶದ ಘನವೆತ್ತ ತತ್ವಜ್ಞಾನಿ ಹಾಗೂ ಮುಂದೆ ರಾಷ್ಟ್ರಪತಿಗಳಾದ ಶ್ರೀ ರಾಧಾಕೃಷ್ಣರ ಜೊತೆ ಸಂಪರ್ಕವಿದ್ದ ಶ್ರೀ ಗುರುದೇವ ರಾನಡೆಯವರು ಉಮದಿ ಶ್ರೀಗಳು (ಭಾವೂಸಾಹೇಬ್ ಮಹಾರಾಜರು) ಅವರೊಬ್ಬ ಭಗವಾನ್ ನಾರಾಯಣ ಅವತಾರವೆಂದು ಅವರಿಗೆ ಹೇಳಿದ್ದರು.
1911 ರಲ್ಲಿ ಶ್ರೀ ಗುರುದೇವ ಆರ್.ಡಿ.ರಾನಡೆಯವರು ಉಮದಿ ಶ್ರೀಗಳಿಗೆ ಬರೆದ ಪತ್ರದಲ್ಲಿ ಇಂಚಗೇರಿ ಸ್ಥಳದ ಬಗ್ಗೆ "ಪೃಥ್ವಿಯ ಮೇಲೆ ಭೂದೇವರಿರುವರೆಂದು ತಾವುಗಳು ಹೇಳಿದ್ದು ಉಂಟು. ಇಂತಹ ಭೂದೇವರು ಸಾಧನದಿಂದ ಆತ್ಮಸುಖವನ್ನು ಪಡೆದವರಲ್ಲದೆ ಇನ್ನಾರು ಇರಬಲ್ಲರು ? ಇಂಚಗೇರಿ ಇಂತಹ ಭೂದೇವರು ಸಭೆಯ ನಿಮ್ಮ ನೇತೃತ್ವದಲ್ಲಿ ನಡೆದು ಪರಸ್ಪರ ಅನಂದದಿಂದ ಬೆಳೆಯುತ್ತದೆ. ಇಂತಹ ಅನಂದದ ಲಾಭವು ಜಗತ್ತಿನಲ್ಲಿ ಇಂಚಗೇರಿ ಹೊರತು ಭೇರೆಡೆ ದೊರೆಯಲಾರದು". ಶ್ರೀ ಭಾವೂಸಾಹೇಬ್ ಮಹಾರಾಜರ ಕಾಲದಿಂದಲೂ ಶ್ರಾವಣ ಮಾಸದಲ್ಲಿ ನಡೆದುಕೊಂಡು ಬಂದ ಜ್ಙಾನ ಸಪ್ತಾಹವು ಇಂದಿನವರೆಗೂ ಇಂಚಗೇರಿಯಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ.
ಶ್ರೀ ಸ.ಸ. ಗಿರಿಮಲ್ಲೇಶ್ವರರು ಮಹಾರಾಜರು 1934 ರ ಮಾಘ ಶುದ್ದ ಚತುರ್ಥಿಯಂದು ಶ್ರೀ ಸ.ಸ. ಭಾವೂಸಾಹೇಬ್ ಮಹಾರಾಜರ ಪುಣ್ಯ ತಿಥಿಸಪ್ತಾಹ ಪೂರೈಸಿ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ದೇಹಬಿಟ್ಟರು. ಶ್ರೀ ಸ.ಸ. ಗಿರಿಮಲ್ಲೇಶ್ವರರು ಮಹಾರಾಜರ ಶಿಷ್ಯರಾದ ಶ್ರೀ ಸ.ಸ ಮಹಾದೇವರು 1915 ರ ನವೆಂಬರ್ 2 ರಂದು ಹುಬ್ಬಳ್ಳಿಯಲ್ಲಿ ಮುರುಗೋಡ ಮನೆತನದ ಶ್ರೀ ಸ.ಸ ಶಿವಪ್ರಭುಹಾಗೂ ಕಾಳಮ್ಮನವರ ಉದರಲ್ಲಿ ದೇವರೆಂದೆ ಖ್ಯಾತರಾದ ಶ್ರೀ ಸದ್ಗುರು ಸಮರ್ಥ ಮಾಧವಾ ನಂದರು  ಜನಿಸಿದರು.......🚩🙏ಮುಂದುವರಿವದು (ಸಂಗ್ರಹ ಲೇಖನ)