ಹಳ್ಳೂರ 14:ವಿಗ್ನ ನಿವಾರಕ ಗಣೇಶನನ್ನು ಭಕ್ತಿಯಿಂದ ಪೂಜಿಸಿ ಜ್ಞಾನಿಸಿದರೆ ವಿಗ್ನ ನಿವಾರಣೆಯಾಗಿ ಸಕಲ ಸೌಭಾಗ್ಯ ದೊರೆಯುತ್ತವೆ ಎಂದು ಬಂಡಿಗಣಿಯ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.        
    ಅವರು ಹಳ್ಳೂರ ಗ್ರಾಮದ ಗಾಂಧಿನಗರದಲ್ಲಿರುವ ಬಸವ ಗೋಪಾಲ ಆಶ್ರಮದಲ್ಲಿ ಗಣೇಶ ಚತುರ್ಥಿ ನಿಮಿತ್ಯವಾಗಿ ಬೆಟ್ಟಿ ನೀಡಿ ಮಾತನಾಡಿ ಧ್ಯಾನ ಮಾಡುವದರಿಂದ ಜ್ಞಾನವು ವೃದ್ಧಿಯಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ದಾನವನ್ನು ಮಾಡಿದರೆ ಸಿರಿ ಸಂಪತ್ತು ವೃದ್ಧಿಯಾಗುತ್ತದೆ.ಜ್ಞಾನಿಗಳು ನೀತಿ ಸಂಬಂಧ ಮಾತ್ರ ಹಿಡಿಯುತ್ತಾರೆ, ರಾಜಕಾರಣಿಗಳು ಇತ್ತೀಚಿಗೆ ಜಾತಿಯ ಆಧಾರದ ಮೇಲೆ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ  ರಕ್ತ ಸಂಬಂಧ ಜಾತಿ ಶ್ರೀಮಂತಿಗೆ ಹಿಡಿಯದೆ ನೀತಿ ಧರ್ಮವಂತರಿಗೆ ಸಹಾಯ ಸಹಕಾರ ನೀಡಬೇಕು. ಹಿರಿಹೊಳಿ ಚಿಕ್ಕೊಳ್ಳಿ ನಡುವೆ ಇರವುವರು ಜೀವನವು ನಂದ ಗೋಕುಲವಿದ್ದಂತಿದೆ. ಬೇಕಾದಷ್ಟು ಕಷ್ಟ ಬಂದರು ದುಷ್ಟರಿಗೆ ಹೆದರದೆ ಸದ್ಗುರುವಿನ ಮೇಲೆ ಪೂರ್ಣ ನಂಬಿಕೆ ಇಟ್ಟು ನಡೆದರೆ ಜೀವನ ಸುಖವಾಗಿರುತ್ತದೆ.ಸಂತ ಮಹಾತ್ಮರ ಕಷ್ಟ ನೀಡಿದವರಿಗೆ ಸುಖವಾಗುವದಿಲ್ಲ. ಒಬ್ಬರ ಮನಸ್ಸು ಒಬ್ಬರು ನೋಯಿಸದೆ ಎಲ್ಲರೂ ಒಗ್ಗಟ್ಟಾಗಿ ಸಹಬಾಳ್ವೆಯಿಂದ ಜೀವನ ಸಾಗಿಸಿರೆಂದು ಹೇಳಿದರು. ಈ  ಸಂದರ್ಭದಲ್ಲಿ ಗಂಗಪ್ಪ ಪಾಲಬಾಂವಿ. ಕರೆಪ್ಪ ದಡ್ಡಿಮನಿ. ಹಣಮಂತ ಪಾಲಬಾಂವಿ. ಗಂಗಪ್ಪ ಅಟ್ಟಮಟ್ಟಿ ಸೇರಿದಂತೆ ಹಳ್ಳೂರ ಗ್ರಾಮದ ಗುರು ಹಿರಿಯರು ಹಾಗೂ ಬಸವ ಗೋಪಾಲ ಸದ್ಭಕ್ತರಿದ್ದರು.