ಹಳ್ಳೂರ 11: ಗ್ರಾಮದಲ್ಲಿ ಪ್ರತಿ ವರ್ಷದಂತೆ ಜರುಗುವ ಶ್ರೀ ಸಮರ್ಥ ಸದ್ಗುರು ಶ್ರೀ ಮಾಧವಾನಂದ ಪ್ರಭುಜಿಯವರ ಸ್ಮರಣಾರ್ಥ ಹಾಗೂ ಶ್ರಾವಣ ಸಪ್ತಾಹ ಮುಕ್ತಾಯ ಸಮಾರಂಭವು ರವಿವಾರದಂದು ಶ್ರೀ ಮಾಧವಾನಂದ ಆಶ್ರಮದಲ್ಲಿ ಜರುಗುತ್ತಿರುವ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು. ಶ್ರೀ ಸ ಸ ಬೆನ್ನಾಳಿ  ಪ್ರಭುಜಿ ಮಹಾರಾಜರು ಸಾನಿಧ್ಯ ಹಾಗೂ ಅಧ್ಯಕ್ಷತೆಯನ್ನು ಕೆ ಎಮ್ ಎಫ್ ಅಧ್ಯಕ್ಷರು  ಹಾಗೂ ಅರಭಾಂವಿ ಶಾಸಕರಾದ ಸನ್ಮಾನ್ಯ ಬಾಲಚಂದ್ರ ಜಾರಕಿಹೊಳಿ. ಗಿರಮಲ್ಲಪ್ಪ ಮಹಾರಾಜರು ಬನಹಟ್ಟಿ . ಹಾಗೂ ಗ್ರಾಮದ ರಾಜಕೀಯ ಮುಖಂಡರು ಗ್ರಾಮದ ಗುರು ಹಿರಿಯರು ಆಗಮಿಸುವರು. ಎಂದು ಶ್ರೀ ಮಾಧವಾನಂದ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.