ಬೆಂಗಳೂರಿನಲ್ಲಿ   ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಕ ಸವದಿ ಅವರು  ತೇರದಾಳ ನಗರದ ಬಸ್ ನಿಲ್ದಾಣದ ಹತ್ತಿರ ಬಸವೇಶ್ವರ ವೃತ್ತವನ್ನು ಅಭಿವೃದ್ಧಿಪಡಿಸಿ  ಹಾಗೂ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪಿಸಲು  80 ಲಕ್ಷ ರೂಪಾಯಿಗಳ ಅನುದಾನ ನೀಡಬೇಕೆಂದು ಶಾಸಕರು ತಮ್ಮ ಪತ್ರದ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೆ ಕೋರಿದರು. ಈ ಸಂದರ್ಭದಲ್ಲಿ  ತೇರದಾಳ ಪುರಸಭೆ ಸದಸ್ಯರಾದ ಸಚಿನ  ಕೊಡತೆ ಹಾಗೂ ಭಾ.ಜ.ಪ. ಯುವ ಮುಖಂಡರಾದ ಸದಾಶಿವ ಹೊಸಮನಿ ಇದ್ದರು.