ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹರಾಜರು.
ಕ್ಷೇತ್ರ ಇಂಚಗೇರಿ ಮಠದ ಶ್ರೀ ಸದ್ಗುರು ಸಮರ್ಥ ಗೀರಿಮಲ್ಲೇಶ್ವರ ಮಹಾರಾಜರ ಪರಮ ಶಿಷ್ಯರಾದ ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹರಾಜರು ತಮ್ಮ ಗುರುಗಳಾದ ಶ್ರೀ ಸದ್ಗುರು ಸಮರ್ಥ ಗೀರಿಮಲ್ಲೇಶ್ವರ ಮಹಾರಾಜರು ಭಾಗವಹಿಸುವ ಪ್ರತಿಯೊಂದು ಸಪ್ತಾಹದಲ್ಲಿ ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹರಾಜರು ತಮ್ಮ ಊರಿನಲ್ಲಿ ಪ್ರತಿ ಮನೆ ಮನೆಗೆ ತಿಳಿಸಿ ಎಲ್ಲರನ್ನು ಕರೆದುಕೊಂಡು ಹೋಗಿ ಶ್ರೀ ಸದ್ಗುರು ಸಮರ್ಥ ಗೀರಿಮಲ್ಲೇಶ್ವರ ಮಹಾರಾಜರು ಭಾಗವಹಿಸುವ ಸಪ್ತಾಹದಲ್ಲಿ ಪುರಾಣ. ಪಾಠ. ಪ್ರವಚನ ಭಜನೆ ಮಾಡಲು ಪ್ರೇರೆರಿಪಿಸುತ್ತಿದ್ದರು. ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹರಾಜರು. ಒಮ್ಮೆ ಸಪ್ತಾಹಕ್ಕೆ ತಮ್ಮ ಊರಿನ ಜನರನ್ನು ಕರೆದುಕೊಂಡು ಹೋಗಲು ಹಣದ ಕೊರತೆಯಿಂದಾಗಿ ತಮ್ಮ ಹೊಲದಲ್ಲಿ ಬಿತ್ತಲು ಇಟ್ಟ ಗೋದಿ ಚೀಲಗಳನ್ನು ಮಾರಾಟ ಮಾಡಿ ಸಪ್ತಾಹದಲ್ಲಿ ಭಾಗವಹಿಸಿದ್ದರು. ಮುಂದೆ ಹೊಲದಲ್ಲಿ ಬಿತ್ತುವ ಪ್ರಸಂಗ ಬಂದಾಗ ಶ್ರೀ ಸದ್ಗುರು ಸಮರ್ಥ ಗೀರಿಮಲ್ಲೇಶ್ವರ ಮಹಾರಾಜರು ಕೊಟ್ಟ ದಿವ್ಯ ನಾಮಸ್ಮರಣೆಯಿಂದ (ಮರಳು) ಉಸುಕಿನಿಂದ ಹೊಲವೆಲ್ಲ ಬಿತ್ತಿದರಂತೆ ಮುಂದೆ ಪ್ರತಿ ವರ್ಷದ ಬೆಳೆಗಿಂತ ಹೆಚ್ಚಿನ ಗೋದಿ ಬೆಳೆ ಬಂದಿದ್ದು ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹರಾಜರ ಗುರುಭಕ್ತಿ ಹಾಗೂ ಕಠೊರ ತಪಸ್ಸಿನ ಒಂದು ನಿದರ್ಶನ . ಜಾತಿ ಧರ್ಮ ಮೇಲು ಕೀಳು ಎಂಬ ಭೇಧ ಭಾವ ಹೊಡೆದು ಹಾಕಿದ ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹರಾಜರು ಕಾರ್ತಿಕ ಮಾಸದ ವದ್ಯ ಷಷ್ಠಿ 19 ನವೆಂಬರ್ 1932 ಶನಿವಾರ ಸೂರ್ಯಾಸ್ತ ಸಮಯದಲ್ಲಿ ಶ್ರೀ ಸದ್ಗುರು ಸಮರ್ಥ ಭಾವೂಸಾಹೇಬ ಮಹಾರಾಜರಲ್ಲಿ ಲೀನರಾದರು. ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹರಾಜರ ಮಹಾ ಗದ್ದುಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶ್ರೀ ಕ್ಷೇತ್ರ ಹಿಪ್ಪರಗಿಯಲ್ಲಿ ರಾಜ್ಯದ ಹಿರಿ ಹೊಳೆ ಎಂದು ಖ್ಯಾತವಾದ ಕೃಷ್ಣಾ ನದಿ ದಂಡೆಯಲ್ಲಿ ಭೂ ಕೈಲಾಸಂದಂತೆ ಭವ್ಯ ದೇವಸ್ಥಾನ ನಿರ್ಮಾಣವಾಗಿದೆ. ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹರಾಜರರನ್ನು ಭಕ್ತರು ಬೇಡಿದ್ದನ್ನು ಕೊಡುವಂತಹ ಕಲಿಯುಗದ ಕಾಮಧೇನು ಕಲ್ಪ ವೃಕ್ಷ ಎಂದೆ ಕರೆಯುತ್ತಾರೆ ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹರಾಜ ಗದ್ದುಗೆಯಾದನಂತರ ಹಿಪ್ಪರಗಿಯ ಕೆಲವು ಜನರು ಶ್ರೀ ಸಂಗಮೇಶ್ವರ ಮಹರಾಜರ ಗದ್ದುಗೆಯನ್ನು ಕೀಳಲು ಅನೇಕ ಬಾರಿ ಪ್ರಯತ್ನ ಮಾಡಿದ್ದರು ಹಗಲು ಗದ್ದುಗೆ ಇರುವ ಸ್ಥಳ ಗುರತು ಮಾಡಿ ರಾತ್ರಿ ಗದ್ದುಗೆ ಕೀಳಲು ಹೋದಾಗ ಆ ಸ್ಥಳದಲ್ಲಿ ಗದ್ದುಗೆ ಪವಾಡ ಸದೃಶದಿಂದ ಸ್ಥಳಾಂತರಗೊಳ್ಳುತ್ತಿಂತೆ ಮುಂದೆ ಗದ್ದುಗೆ ಕೀಳುವ ಪ್ರಯತ್ನ ಬಿಟ್ಟು ಮನ ಪರಿವರ್ತನೆಗೊಂಡು ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹರಾಜರ ನಿಷ್ಠಾವಂತ ಭಕ್ತರಾದರಂತೆ. ಶ್ರೀ ಸದ್ಗುರು ಸಮರ್ಥ ಗೀರಿಮಲ್ಲೇಶ್ವರ ಮಹಾರಾಜರ ಸಹೋದರರಾದಂತಹ ಶ್ರೀ ಸದ್ಗುರು ಸಮರ್ಥ ಐನಾಥ ಪ್ರಭು ಮಹಾರಾಜರು ಕೂಡ ನಿತ್ಯ. ನೇಮ. ಭಜನೆಯನ್ನು ಮಾಡುತ್ತಾ . ಪ್ರತಿ ಹಳ್ಳಿ ಹಳ್ಳಿ ಪ್ರತಿ ಮನೆ ಮನೆಗೆ ಭೇಟಿ ಕೊಟ್ಟು ತಮ್ಮ ಗುರುಗಳಾದಂತಹ ಶ್ರೀ ಸದ್ಗುರು ಸಮರ್ಥ ಭಾವೂಸಾಹೇಬ ಮಹಾರಾಜರು ತಿಳಿಸಿದ ಸಂದೇಶ ಸಾರುತ್ತ ಭಕ್ತಿ ಬೆಳೆಸಿದರು ಶ್ರೀ ಸದ್ಗುರು ಸಮರ್ಥ ಐನಾಥ ಪ್ರಭು ಮಹಾರಾಜರ ಗದ್ದುಗೆ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿರುವ ಭವ್ಯ ದೇವಾಲಯವಾದ ಶ್ರೀ ಸದ್ಗುರು ಸಮರ್ಥ ಗುರುಲಿಂಗ ಜಂಗಮ ಹಾಗೂ ಶ್ರೀ ಸದ್ಗುರು ಸಮರ್ಥ ಭಾವೂಸಾಹೇಬ ಮಹಾರಾಜರ ಗದ್ದುಗೆಗಳ ನಡುವೆ ಸ್ಥಾಪಿತಗೊಂಡಿದೆ........🚩

Social Plugin