ವರದಿ ಮುರಿಗೆಪ್ಪ ಮಾಲಗಾರ 
ಬಂಡಿಗಣಿ 05: ಸತ್ಯವಂತರನ್ನು ಸದಾಕಾಲ ರಕ್ಷಣೆ ಮಾಡುವ ಬಸವಣ್ಣನ ಸ್ಥಾಪನೆ ಮಾಡಿದ್ದು ಆನಂದದಾಯಕವಾಗಿದೆ.ಬಸವ ಗೋಪಾಲ ಎರಡನೇ ಮಠ ಪರಮಾನಂದವಾಡಿ ಮಠ ವೆಂದು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು. ಅವರು ರಾಯಬಾಗ ತಾಲ್ಲೂಕಿನ ಪರಮಾನಂದವಾಡಿಯಲ್ಲಿ ಶ್ರೀ ನಂದೇಶನ ಮೂರ್ತಿ ಪ್ರತಿಷ್ಠಾಪನೆ ಹಾಗೂ 26ನೇ ಪಾರಮಾರ್ಥಿಕ ಸಪ್ತಾಹದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಅಸ್ತಿ ಅಂತಸ್ತು ಅಧಿಕಾರ ವ್ಯಾಮೋಹಕ್ಕೆ ಸಿಲುಕಿ ಶ್ರೇಷ್ಠವಾದ ಮಾನವ ಜನ್ಮ ಹಾಳುಮಾಡಿಕೊಳ್ಳದೆ ಆತ್ಮಜ್ಞಾನವನ್ನು ಮಾಡಿಕೊಂಡು ಮಾನವ ಜನ್ಮವನ್ನು ಉದ್ದಾರ ಮಾಡಿಕೊಳ್ಳಿರಿ. ಬಬಲಾದಿ ಇಂಚಗೇರಿ, ಬಂಡಿಗಣಿ,ಮಠದಲ್ಲಿ ಆತ್ಮಜ್ಞಾನ ಮಾರ್ಗ ದೊರೆಯುವದು.ಆತ್ಮಜ್ಞಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬಂಡಿಗಣಿ ಮಠದ ಹೆಸರು ಹೇಳಿ ಹಣ ಕೇಳಿದರೆ ಕೊಡಬೇಡಿರಿ. ಜನಕರಾಜ 56 ರಾಷ್ಟ್ರಗಳ ರಾಜ್ಯನಿದ್ದರೂ ನೆಮ್ಮದಿ ಸಿಗದೇ ಕೊನೆಗೆ ಆತ್ಮಜ್ಞಾನವನ್ನು ಮಾಡಿಕೊಂಡರು. ಸುಳ್ಳು ತುಡುಗ ಬಿಟ್ಟು ಸತ್ಯದ ಕಾಯಕ ಮಾಡುತ್ತಾ ದಾನ ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಿರೆಂದು ಹೇಳಿದರು. ಕುಡಚಿ ಶಾಸಕ ಪಿ ರಾಜೀವ ಮಾತನಾಡಿ ಮಣ್ಣಲ್ಲಿ ಮನ್ನಾಗಿ ಹೋಗುವ ಶರೀರವನ್ನು ಸಂಸಾರದ ಸುಖಕ್ಕೆ ದೇವರಲ್ಲಿ ಬೇಡಿಕೊಳ್ಳದೆ ಒಳ್ಳೆಯದನ್ನು ಬೇಡಿಕೊಳ್ಳಬೇಕು.
ಅಕ್ಷರ, ಅನ್ನ ದಾಸೋಹ, ಆದ್ಯಾತ್ಮ ಮೂರು ಕ್ಷೇತ್ರಗಳಲ್ಲಿ ಸಮಾಜಕ್ಕೆ ಕೊಡುಗೆ ನೀಡಿ ಲಕ್ಷಾಂತರ ಭಕ್ತರ ಮನಗೆದ್ದು ಅಂಧಕಾರವನ್ನು ಕಳೆದು ಜ್ಞಾನವನ್ನು ನೀಡಿ ಜಗತ್ತು ಉದ್ದಾರ ಮಾಡುವ ದಾನೇಶ್ವರ ಶ್ರೀಗಳ ಕಾರ್ಯ ಶ್ಲಾಘನಿಯವಾದದ್ದು. ನಾನು ರಾಜಕೀಯದಲ್ಲಿ ಶಾಸಕನಾಗಿ ಉನ್ನತ ಮಟ್ಟಕ್ಕೆ ಬೆಳೆಯಲು ದಾನೇಶ್ವರ ಶ್ರೀಗಳ ಆಶೀರ್ವಾದವೆ ಕಾರಣ ಎಂದು ಹೇಳಿದರು. ಪ್ರಾರಂಭದಲ್ಲಿ ಶ್ರೀ ನಂದೇಶನ ಮೂರ್ತಿ ಪ್ರತಿಷ್ಠಾಪನೆಯನ್ನು ದಾನೇಶ್ವರ ಶ್ರೀಗಳ ಅಮೃತ ಹಸ್ತದಿಂದ ನೆರವೇರಿತು. ವಿಜಯ ವೇದಾಂಗ ಶ್ರೀಗಳು. ಸತ್ತೇವ್ವಾ ಪೂಜೇರಿ. ಶಾಂತಮ್ಮ ತಾಯಿ ಬಿಲಕುಂದಿ. ಐನುದ್ದಿನ ಮುಲ್ಲಾ. ಬೀರಪ್ಪ ಪೂಜೇರಿ. ಕರೆಪ್ಪ ದಡ್ಡಿಮನಿ. ಮಲ್ಲಪ್ಪ ತವನಿಧಿ. ಡಾ ಭರತ ಲೋನಾರೆ. ಹರಳಯ್ಯ್ ಅಥಣಿ. ಎಸ್ ಎಸ್ ಸವದಿ ಸೇರಿದಂತೆ ಅನೇಕ ಭಕ್ತರಿದ್ದು ಕಾರ್ಯಕ್ರಮ ವನ್ನು ವಾಯ್ ಆರ್ ಎಲ್ಲಟ್ಟಿ ಸ್ವಾಗತಿಸಿ. ಶಿವಲಿಂಗ ಹಿಡಕಲ ನಿರೂಪಿಸಿ. ಮಹಾಂತೇಶ ದುಪದಾಳ ವಂದಿಸಿದರು. ಸಹಸ್ರಾರು ಮುತ್ತೈದೆಯರಿಗೆ ಉಡಿತುಂಬಿ ಬಂಡಿಗಣಿ ಮಠದಿಂದ ಸರ್ವರಿಗೂ ಊಟದ ವ್ಯವಸ್ಥೆ ನಡೆಯಿತು.
________