ವರದಿ ಮುರಿಗೆಪ್ಪಾ ಮಾಲಗಾರ. ಹಳ್ಳೂರ 03:ಸಾವಿರ ಹಾಡಿನ ಸರದಾರ ಹಳ್ಳೂರ ಗ್ರಾಮದ ಸಾಹಿತ್ಯ ರತ್ನ ಸಿದ್ದು ಮಹಾರಾಜರವರ 300ನೇ ಧ್ವನಿಸುರಳಿ ಬಿಡುಗಡೆ ಸುಮಾರಂಭವು ಬಾಗಲಕೋಟ ಜಿಲ್ಲೆಯ ಬನಹಟ್ಟಿ ತಾಲ್ಲೂಕಿನ ಕುಲಹಳ್ಳಿಯಲ್ಲಿ ಸೋಮವಾರದಂದು ಕೃ ಷ್ಣ ತೀರದ ಶ್ರೀ ಶಿವಲಿಂಗೇಶ್ವರ ಜಾಗೃತ ಸ್ಥಳದಲ್ಲಿ ಶ್ರೀ ಶಿವಲಿಂಗೇಶ್ವರ ಟ್ರಸ್ಟ್ ಕಮಿಟಿ (ರಿ)ಕುಲಹಳ್ಳಿ ಹಾಗೂ ಗ್ರಾಮದ ಸಮಸ್ತ ಹಿರಿಯರ, ರಾಜಕೀಯ ಮುಖಂಡರ ಆಶ್ರಯದಲ್ಲಿ ಮಹಾರಾಜ ಸಿದ್ದು ಹಳ್ಳೂರ ಅವರ ಧ್ವನಿ ಸುರುಳಿ ಬಿಡುಗಡೆ ಸಮಾರಂಭವು ಜರುಗುವುದು. ಗಂಡು ಮೆಟ್ಟಿದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಮಹಾರಾಜ ಸಿದ್ದು ಹಳ್ಳೂರ ಇದು ಕಾವ್ಯ ನಾಮವಾಗಿದೆ. ಪೂರ್ಣ ಹೆಸರು ಸಿದ್ದಪ್ಪ ಮಾಯಪ್ಪ ಮಾರಾಜಾಪ್ಪಗೋಳ. ತಂದೆಯ ಹೆಸರು ಮಾಯಪ್ಪ, ತಾಯಿ ಸಾಂಯವ್ವ, ಹಳ್ಳೂರ ಗ್ರಾಮದಲ್ಲಿ 20/6/1975 ರಲ್ಲಿ ಜನನವಾಯಿತು. ಶಿಕ್ಷಣ ಪಿ ಯು ಸಿ ವಿಜ್ಞಾನ ವಿಭಾಗವನ್ನು ಕಲಿತಿದ್ದು. ವೃತ್ತಿ ಸ್ಥಳೀಯ ಶ್ರೀ ಹಳ್ಳದ ರಂಗನ ಸೌಹಾರ್ದ ಸಹಕಾರಿ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವುದು.
ಸಾಹಿತ್ಯ ಸೇವೆ ಎರಡುವರೆ ದಶಕಗಳಿಂದ ನಿರಂತರವಾಗಿ ಮೂರು ನೂರಕ್ಕೂ ಅಧಿಕ ಧ್ವನಿ ಸುರುಳಿಗಳಿಗೆ ನಾಲ್ಕು ಸಾವಿರಕ್ಕೂ ಅಧಿಕ ಗೀತೆಗಳನ್ನು ರಚಿಸಿ, ಸಾವಿರ ಹಾಡಿನ ಸರದಾರ ಎಂದು ಚಿರಪರಿಚಿತರು. ಮಹಾರಾಷ್ಟ್ರದ ಪಂಡರಪುರ ಶ್ರೀ ಪಾಂಡುರಂಗ ಆಂಧ್ರಪ್ರದೇಶ ಶ್ರೀಶೈಲ ಮಲ್ಲಿಕಾರ್ಜುನ ಕೇರಳದ ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಕರ್ನಾಟಕದ 14 ಜಿಲ್ಲೆಗಳ ಬೆಳಗಾವಿ ಜಿಲ್ಲೆಯ ಸಾಕಷ್ಟು ಪುಣ್ಯ ಕ್ಷೇತ್ರಗಳ ಮಠ ಮಾನ್ಯಗಳ ಕುರಿತು ಮನಮುಟ್ಟುವ ಹಾಗೆ ಭಕ್ತಿ ಗೀತೆಗಳು, ಅನುಭವ ಪದಗಳು ಹಾಗೂ ಜನಪದ ಗೀತೆಗಳನ್ನು ರಚಿಸಿ ಉತ್ತರ ಕರ್ನಾಟಕದ ಜನಮನ ಗೆದ್ದ ಸಾಹಿತಿಗಳಾಗಿದ್ದಾರೆ. ಗೀತೆಗಳಿಗೆ ದಿ. ಜಿ.ವಿ. ಆತ್ರಿ ಕೆ ಯುವರಾಜ. ಮಂಜುಳಾ ಗುರುರಾಜ. ಬಿ ಆರ್ ಛಾಯಾ. ಚಂದ್ರಿಕಾ ಗುರುರಾಜ. ಅನುರಾಧ ಭಟ್ಟ. ಶಬ್ಬೀರ ಡಾoಗೆ. ಬಸವರಾಜ ಘೀವಾರಿ. ಮಲ್ಲೇಶ ಪಂಡ್ರೋಳ್ಳಿ. ಸೇರಿದಂತೆ 182 ಕ್ಕೂ ಹೆಚ್ಚು ಗಾಯಕ ಗಾಯಕಿಯರು ಧ್ವನಿ ನೀಡಿದ್ದಾರೆ. ಸಾಹಿತ್ಯ ಸೇವೆಯನ್ನು ಗುರುತಿಸಿ ಕರುನಾಡಿನ ಹೆಸರಾಂತ ಮಠ ಮಾನ್ಯಗಳು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದಾರೆ.ಸಾಹಿತ್ಯ ರತ್ನ, ಸಾಹಿತ್ಯ ಭೂಷಣ, ಸರಸ್ವತಿ ಭೂಷಣ ಶ್ರೀ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರೆತಿವೆ.ಜಾನಪದ ಸಾಹಿತ್ಯದ ಸಾರಸ್ಯತ್ವಕ್ಕೆ ನೀಡುವ ಕಾಣಿಕೆ ಅಪಾರವಾದದ್ದು. ಗ್ರಾಮೀಣ ಬಾಗದಲ್ಲಿ ಎಲೆ ಮರಿಯ ಕಾಯಿಯಂತೆ ಸೇವೆಯಲ್ಲಿ ತೊಡಗಿದ್ದಾರೆ ಮಾಹಾರಾಜ ಸಿದ್ದು ಹಳ್ಳೂರ.

Social Plugin