ನಿದ್ರೆಯಲ್ಲಿರುವ ಜಿಲ್ಲಾಡಳಿತ ಎಚ್ಚರವಾಗುವುದು ಯಾವಾಗಾ?
ಅಭಿವೃದ್ದಿಗೆ ಅಡ್ಡಗಾಲು ಹಾಕಿ ಅವ್ಯವಹಾರ ನಡೆಸಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
ಮುಗಳಖೋಡ: ಪಟ್ಟಣದ ಪುರಸಭೆ ಸೇರಿದಂತ್ತೆ ಎರಡು ಪುರಸಭೆ ಹಾಗೂ ಎರಡು ಪಟ್ಟಣಪಂಚಾಯಿತಿಗಳಲ್ಲಿ ಸನ್ 1995 ರಿಂದ ಗುತ್ತಿಗೆ ಆದಾರದ ಮೇಲೆ ಸಹಾಯಕ ಕಿರಿಯ ಅಭಿಯಂತರರಾಗಿ ಸೇವೆಸಲ್ಲಿಸುತ್ತಿರುವ ಫ್ರಭಾವಿ ಅಧಿಕಾರಿ ಎಸ್.ಆರ್ ಚೌಗಲಾ ಅವರ ಕುರಿತು ಇತ್ತಿಚಿಗೆ ಖಾಸಗಿ ವಾಹಿನಿಯೊಂದರಲ್ಲಿ ಅಧಿಕಾರಿಯ ಧೀರ್ಘಾವದಿಯ ಸೇವಾವದಿ ಹಾಗೂ ಕಳಪೆ ಕಾಮಗಾರಿಗಳ ಬಗ್ಗೆ ಬಿತ್ತರವಾದ ವರದಿಯ ಹಿನ್ನೇಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪಟ್ಟಣದ ಜಿ.ಪಂ ಮಾಜಿ ಸದಸ್ಯ ಡಾ. ಸಿ.ಬಿ.ಕುಲಿಗೋಡ, ಮೂರು ಪುರಸಭೆ ಹಾಗೂ ಎರಡು ಪಟ್ಟಣ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಅಧಿಕಾರಿಯು ಮಾಡಿರುವ ಪ್ರತಿಯೊಂದು ಕಾಮಗಾರಿಗಳಲ್ಲಿಯೂ ಅವ್ಯವಹಾರ ಮತ್ತು ಕಳಪೆ ಕಾಮಗಾರಿ ಎಂಬ ಸಾರ್ವಜನಿಕ ದೂರುಗಳು ಸಾಕಷ್ಟು ದೂರುಗಳು ಇದ್ದರೂ ಕೂಡ ಇತನ ವಿರುದ್ಧ ಕ್ರಮ ಕೈಗೊಳ್ಳಲು ಯಾವ ಮೇಲಾಧಿಕಾರಿಗಳು ಮುಂದೆ ಬರುತ್ತಿಲ್ಲ. ಈತ ಮಾಡಿರುವ ಪ್ರತಿಯೊಂದು ಅವ್ಯವಹಾರದ ದಾಖಲಾತಿಗಳ ಸಮೇತ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹ ಕಣ್ಣು ಮುಚ್ಚಿ ಕುಳಿತಿರುವ ಜಿಲ್ಲಾಡಳಿತದ ದೋರಣೆ ಪ್ರಜಾರಾಜಕ್ಕೆ ಅವಮಾನಿಸುವಂತಿದೆ ಎಂದರು.
ಚರಂಡಿ, ಜಲಕುಂಭ, ವಿದ್ಯುತ್ ದೀಪ, ಶೌಚಾಲಯಗಳ ನಿರ್ಮಾಣ, ಸ್ಮಶಾನ ಅಭಿವೃದ್ಧಿ, ಕಛೇರಿ ಪೀಠೊಪಕರಣಗಳು ಸೇರಿದಂತ್ತೆ ಕುಡಿಯುವ ನೀರಿನ ಯೋಜನೆಗೆಳು ಹಾಗೂ ಬಸ್ ನಿಲ್ದಾಣ ಸೇರಿದಂತ್ತೆ ಎಲ್ಲ ಕಾಮಗಾರಿಗಳಲ್ಲೂ ಕಳಪೆ ಹಾಗೂ ಅವ್ಯವಹಾರದ ಹೊಗೆಯಾಡುತ್ತಿದೆ ಎನ್ನುವದು ಸಾರ್ವಜನಿಕ ಅಭಿಪ್ರಾಯವಾಗಿದೆ.
ಮುಗಳಖೋಡ ಪುರಸಭೆಯಲ್ಲಿ ಈ ಹಿಂದೆ ಪ್ರಥಮ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎಸ್. ಓ. ವಡೇರ ಹಾಗೂ ಸಹಾಯಕ ಕಿರಿಯ ಅಭಿಯಂತರ ಇ.ವ್ಹಿ. ಕೊಂಗವಾಡ ಈ ಇಬ್ಬರು ಅಧಿಕಾರಿಗಳನ್ನು ಕೆವಲ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇವರನ್ನು ಅಮಾನತುಗೋಳಿಸಿ ಆದೇಶ ಹೊರಡಿಸಿತ್ತು. ಆದರೆ ಐದು ಪುರಸಭೆಯಿಂದ ಆರೋಪದ ಸುರಿಮಳೆಗಳೆ ಸುರಿಯುತಿದ್ದರು ಸಹ ಎಲ್ಲ ದಾಖಲಾತಿಗಳು ಲಭ್ಯವಿದ್ದರು ಕೂಡಾ ಇಂತಹ ಅಧಿಕಾರಿಯ ಮೇಲೆ ಯಾವುದೆ ಶಿಸ್ತು ಕ್ರಮ ತಗೆದುಕೊಳ್ಳುವಲ್ಲಿ ಹಿಂದೆಟು ಹಾಕುತ್ತಿರುವುದನ್ನು ನೋಡಿದರೆ ಈ ಪ್ರಕರಣದಲ್ಲಿ ಪ್ರಭಾವಿ ನಾಯಕರು, ರಾಜಕಾರಣಿಗಳು ಹಾಗೂ ಉನ್ನತ ಹುದ್ದೆಯ ಅಧಿಕಾರಿಗಳ ಕೈಚಳಕ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಬಾಕ್ಷ್ ಲೈನ್:
ಹಾರೂಗೇರಿ ಹಾಗೂ ಮುಗಳಖೋಡ ಪುರಸಭೆಗಳಿಗೆ ಒಂದೆ ಕಂಪನಿಯ ಜೆಸಿಬಿಗಳನ್ನು ಖರಿಧಿಮಾಡಲು ತಿರ್ಮಾನಿಸಿತ್ತು, ಹಾರೂಗೇರಿಯಲ್ಲಿ ಜೆಸಿಬಿಯನ್ನು ಖರಿಧಿ ಮಾಡಿದ ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಮುಗಳಖೋಡ ಪಟ್ಟಣಕ್ಕೆ ಜೆಸಿಬಿ ಖರಿದಿ ಮಾಡಲಿಲ್ಲ. ಕಳೆದ ಐದು ವರ್ಷಗಳ ಹಿಂದೆಯೆ ಆದೇಶ ನೀಡಿದ ನಗರೋತ್ತಾನದ ಕಾಮಗಾರಿಗಳಿಗೆ ಈ ಇಂಜೀನೀಯರ್ ಅನುವುಮಾಡಿಕೊಡಲಿಲ್ಲ. ಬದಲಿಗೆ ಈಗ ಬೇರೆಯ ಗುತ್ತಿಗೆದಾರರ ಹೆಸರಲ್ಲಿ ಸ್ವತಃ ತಾನೆ ಕಾಮಗಾರಿಗಳನ್ನು ನಡೆಸಲು ಯತ್ನಿಸುತ್ತಿದ್ದಾನೆ.
ಡಾ.ಸಿ.ಬಿ.ಕುಲಿಗೋಡ ಜಿ.ಪಂ. ಮಾಜಿ ಸದಸ್ಯ.
ಮೂರು ಪುರಸಭೆ ಮತ್ತು ಎರಡು ಪಟ್ಟಣ ಪಂಚಾಯಿತಿಗಳಲ್ಲಿ ಸನ್ 2016ರ ರಿಂದಲೂ ಅಭಿವೃದ್ದಿಗೆ ಅಡ್ಡಿಯಾಗಿ ಬ್ರಷ್ಟಾಚಾರದ ಆರೋಪವನ್ನು ಹೊತ್ತಿರುವ ಎಲ್ಲ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಲ್ಲಿ ಜಿಲ್ಲಾಅಡಳಿತ ಹಾಗೂ ಜನಪ್ರತಿ ನಿಧಿಗಳು ಕಾರ್ಯಪ್ರವರ್ತರಾಗಬೇಕು.
ಭರಮು ತೇಲಿ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಕುಡಚಿ ಮಂಡಲ

Social Plugin