ವರದಿ ಮುರಿಗೆಪ್ಪ ಮಾಲಗಾರ                           ಹಳ್ಳೂರ 01:ನಮ್ಮ ದೇಶದ ಸನಾತನ ಸಂಸ್ಕೃತಿಯಲ್ಲಿ ಸಂಪ್ರದಾಯದ ಕಾರ್ಯಕ್ರಮಗಳು ತಮ್ಮದೇ ಆದ ವಿಶೇಷತೆಯನ್ನು ಹೊಂದಿವೆ ಎಂದು ಆಚರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಹುಟ್ಟುದಟ್ಟಿ ಕಾರ್ಯಕ್ರಮ ವಿಶೇಷವಾಗಿದೆ ಎಂದು ನ್ಯಾಯವಾದಿ ಎಸ್ ಎಂ  ಲಾತೂರ ಹೇಳಿದರು.    ಅವರು ಕಂಕಣವಾಡಿ ಗ್ರಾಮದ ಉಪ್ಪಾರ ಅವರ ತೋಟದಲ್ಲಿ  ಜರುಗಿದ ಚೌರಿ ಬಂಧುಗಳ  ಆದಿತ್ಯ ಮತ್ತು ಪ್ರತೀಕ್ಷ ಹುಟ್ಟು ದಟ್ಟಿ  ಕಾರ್ಯಕ್ರಮಲ್ಲಿ  ಮಾತನಾಡಿದರು.          ಅರ್ಜುನ ನಾಯಕವಾಡಿ ಮಾತನಾಡಿ ದಿವಂಗತ ತೇಜಸ್ವಿನಿ ನಾಯ್ಕವಾಡಿ  ಅವರ ಹೆಸರಿನಲ್ಲಿ ಟ್ರಸ್ಟನ್ನು ರಚಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹೇಳಿದರು. ಈ ಸಂದರ್ಭದಲ್ಲಿ ಡಾಕ್ಟರ್ ಎಲ್ ಎಸ್ ಚೌರಿ    ನಾರಾಯಣ ಅಗ್ನೇಪ್ಪಗೊಳ. ಚೈತ್ರಾ  ರಿಯಾಜ್ ಭಾಗವಾನ. ಬಸವರಾಜ್ ಉಪ್ಪಾರ. ಸಿದ್ದಪ್ಪ ನಾಯ್ಕವಾಡಿ. ಅಪ್ಪಾಸಾಹೇಬ ಬ್ಯಾಕೋಡ  ಮಧು ಸಣ್ಣಕ್ಕಿ. ಬಸವರಾಜ ಮರಡಿ. ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.