ತಾಲೂಕಿನಾದ್ಯಂತ ಆಧಾರ್ ಕಾರ್ಡ್ ತಿದ್ದುಪಡಿ ನಡೆಸುತ್ತಿರುವ ನೆಪದಲ್ಲಿ ಕೆಲ ಖಾಸಗಿ ವ್ಯಕ್ತಿಗಳು ಆಧಾರ್ ಗುತ್ತಿಗೆದಾರನೊಂದಿಗೆ ಶ್ಯಾಮೀಲಾಗಿ ಮೂರು ಪಟ್ಟು ಹಣ ವಸೂಲಿ ಮಾಡುತ್ತಿರುವದು ಬೆಳಕಿಗೆ ಬಂದಿದೆ.
ಆಯಾ ಅಂಚೆ-ಕಛೇರಿಯಲ್ಲಿ ಹಾಗು ಕೆಲ ರಾಷ್ಟಿಕೃತ ಬ್ಯಾಂಕ್‌ಗಳಲ್ಲಿ ಆಧಾರ್ ಕಾಡ್ ತಿದ್ದುಪಡಿ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರಿಗೆ ಇದರ ಮಾಹಿತಿಯಿಲ್ಲದೆ ಖಾಸಗಿ ಕಂಪ್ಯೂಟರ್ ಸಂಸ್ಥೆಗಳಿಗೆ ತೆರಳುತ್ತಿದ್ದು, ಅಲ್ಲಿದ್ದ ಮಧ್ಯವರ್ತಿಗಳಿಂದ ೫೦ ಹಾಗು ೧೦೦ ರೂಪಾಯಿಗಳ ಫೀ ಇದ್ದದ್ದನ್ನು 3೦೦ ರೂ.ಗಳವರೆಗೂ ಹಣ ಪಡೆದು ಅಕ್ರಮವಾಗಿ ವಸೂಲಿಗಿಳಿದಿರುವದು ಆತಂಕಕರಾಗಿ ವಿಷಯವಾಗಿದೆ.ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಯೋಗ್ಯ ಕ್ರಮ ಕೈಗೊಳ್ಳಬೇಕು ಹಾಗು ಸಾರ್ವಜನಿಕರು ಆಯಾ ಅಂಚೆ ಕಚೇರಿ ಅಥವಾ ರಾಷ್ಟಿಕೃತ ಬ್ಯಾಂಕ್‌ಗಳಿಗೆ ಮಾತ್ರ ತೆರಳಿ ತಮ್ಮ ತಮ್ಮ ಆಧಾರ್ ಕಾರ್ಡಗಳ ತಿದ್ದುಪಡಿ ಕಾರ್ಯದಲ್ಲಿ ತೊಡಗಬೇಕಾಗಿದೆ.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin