ತೇರದಾಳ ಗುರುವಾರ ಮೊಹರಂ ಹಬ್ಬದ ಪ್ರಯುಕ್ತ ಸಂಭ್ರಮದ ಡೋಲಿಗಳ ಮೆರವಣಿಗೆ ಜರುಗಿತು.


ತೇರದಾಳದಲ್ಲಿ ಸಂಭ್ರಮದ ಮೊಹರಂ ಆಚರಣೆ

ತೇರದಾಳ: ಹಿಂದು-ಮುಸ್ಲಿಂ-ಜೈನ್ ಬಾಂಧವರ ಭಾವೈಕ್ಯತೆ ಕೇಂದ್ರವಾದ ತೇರದಾಳದಲ್ಲಿ ಸೌಹಾರ್ಧತೆಯಿಂದ ಪ್ರತಿವರ್ಷದಂತೆ ಈ ವರ್ಷವೂ ಗುರುವಾರ ಸಂಭ್ರಮದ ಮೊಹರಂ ಹಬ್ಬವನ್ನು ಶಾಂತಿ ಸೌಹಾರ್ಧತೆಯಿಂದ ಆಚರಿಸಲಾಯಿತು.

ಗುರುವಾರ ಸಂಜೆ ಜಾಮೀಯಾ ಮಸೀದಿಯಲ್ಲಿ ನಮಾಜ (ಪ್ರಾರ್ಥನೆ) ಸಲ್ಲಿಸಿದ ಮುಸ್ಲಿಂ ಬಾಂಧವರು ನಂತರ ಡೋಲಿಗಳ ಭವ್ಯ ಮೆರವಣಿಗೆ ಚಾಲನೆ ನೀಡಿದರು. ಈ ಮೆರವಣಿಗೆಯು ನಗರದ ಸದ್ಭಕ್ತರ ಕಣ್ಮಣ ಸೆಳೆಯಿತು. ಸೇರಿದ ಭಕ್ತಜನತೆ ಡೋಲಿಗಳಿಗೆ ಬೆಂಡ ಬೆತ್ತಾಸು ಹಾರಿಸಿದರು. ಊದು ನೀಡಿದರು. ಯುವಕರು, ಫಕೀರರು ಹೈಲಾ ದುಯಿಲಾ ಎಂದು ಫಂಜಾವನ್ನು ಹಿಡಿದು ಓಡಾಡಿದರು. 

ವಿವಿಧ ಗಲ್ಲಿಗಳಲ್ಲಿ ಹಸೇನ್-ಹುಸೇನಿ ಡೋಲಿ ಕೂಡ್ರಿಸಿದ್ದರು. ಗುರುವಾರ ನಡೆದ ಡೋಲಿಗಳ ಮೆರವಣಿಗೆಯು ರಾತ್ರಿ ಹೊತ್ತಿಗೆ ಐತಿಹಾಸಿಕ ಕೆರೆಗೆ ಹೋಗಿ ಡೋಲಿಗಳ ವಿಸರ್ಜನೆ ನಡೆಯಿತು. ರಾತ್ರಿ ಮಹ್ಮದ್ ಹನೀಫ್ ಹುಟ್ಟುವರೆಂದು ಹಿರಿಯರು ಹೇಳಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆ ಕಾಲಕ್ಕೆ ಶಾಂತಿ ಸುವ್ಯವಸ್ಥೆಗೆ ಹೆಚ್ಚುವರಿ ಪಿಎಸ್‍ಐ ಎಸ್.ಕೆ.ಸೂರ್ಯವಂಶಿ ಹಾಗೂ ಪೊಲೀಸ ಸಿಬ್ಬಂದಿ ಕ್ರಮಕೈಗೊಂಡಿದ್ದರು.