*`ನಂದಿನಿ ಸಿಹಿ ಉತ್ಸವ’ಕ್ಕೆ ಚಾಲನೆ*
*ಶೇ.೧೦ ರಷ್ಟು ರಿಯಾಯ್ತಿ ದರದಲ್ಲಿ ಸಾರ್ವಜನಿಕರಿಗೆ ಅನುಕೂಲ ನೀಡಿದ ಡೆಂಪೋಡೇರಿ*
ರೈತರು ಗುಣಮಟ್ಟದಿಂದ ನೀಡುತ್ತಿರುವ ಹಾಲಿನ ಉತ್ಪನ್ನಗಳಿಂದ ತಯಾರಿಸಿದ ಸಿಹಿ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ನಂದಿನಿ ಹಾಲಿನ ಸಿಹಿ ಉತ್ಪನ್ನಗಳ ಉತ್ಸವಕ್ಕೆ ಸಿಪಿಐ ಜೆ. ಕರುಣೇಶಗೌಡ ಚಾಲನೆ ನೀಡಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿಯ ಡೆಂಪೋ ಡೇರಿಯಲ್ಲಿ ಕೆಎಂಎಫ್ ಹಾಗು ಡೆಂಪೋ ಡೇರಿ ಸಹಯೋಗದಲ್ಲಿ ನಡೆಯುತ್ತಿರುವ ಸಿಹಿ ಉತ್ಸವವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಕರುಣೇಶಗೌಡ ಹೇಳಿದರು.

ಡೆಂಪೋ ಡೇರಿ ವ್ಯವಸ್ಥಾಪಕ ನಿರ್ದೇಶಕಾದ ಡಾ. ಚಂದ್ರಶೇಖರ ಕಮಕೇರಿ ಮಾತನಾಡಿ, ರೈತರು ನೀಡುತ್ತಿರುವ ನಂದಿನ ಹಾಲಿನಿಂದ ಉತ್ತಮ ಗುಣಮಟ್ಟದ ಸಿಹಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. 

ನಂದಿನಿ ಸಿಹಿ ಉತ್ಸವವು ಆ.19 ಎರಡು ವಾರಗಳ ದಿನಗಳ ಕಾಲ ಶೇ.10 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಅದರಂತೆ ಶ್ರೀಖಂಡಕ್ಕೆ ಒಂದು ತಿಂಗಳವರೆಗೆ ರಿಯಾಯ್ತಿಯಿದೆ. ಈ ಉತ್ಸವದಿಂದ ನಂದಿನಿ ಹಾಲಿನ ಗುಣಮಟ್ಟವನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ರೈತರಿಗೆ ಉತ್ತೇಜನ ನೀಡಲಾಗುತ್ತದೆ ಎಂದರು.ಪ್ರತಿ ವರ್ಷ ಕೆಎಂಎಫ್‌ನಿಂದ ಜೂನ್ ತಿಂಗಳಲ್ಲಿ ನಂದಿನಿ ಸಿಹಿ ಉತ್ಸವ ಮಾಡಲಾಗುತ್ತಿತ್ತು. 

ಈ ಬಾರಿ ಕೊರೊನಾ ಅಡ್ಡಿ ಹಿನ್ನಲೆ ಆಗಸ್ಟ್ನಲ್ಲಿ ಗಣೇಶೋತ್ಸವ ಸೇರಿದಂತೆ ಅನೇಕ ಹಬ್ಬಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಸಿಹಿ ಉತ್ಪನ್ನಗಳ ಮಾರಾಟ ಆಯೋಜಿಸಲಾಗಿದೆ. 

ಗ್ರಾಹಕರು ಸಿಹಿ ಉತ್ಪನ್ನ ಸೇವನೆ ಮಾಡುವ ಮೂಲಕ ಹಬ್ಬವನ್ನು ಆಚರಣೆ ಮಾಡಬೇಕೆಂದು ಮನವಿ ಮಾಡಿದರು.

`ಫೇಡ, ಮೈಸೂರ ಪಾಕ್, ಬಾದಾಮ್ ಬರ್ಫಿ ಹಾಗು ಶ್ರೀಖಂಡ ಸೇರಿದಂತೆ ಅನೇಕ ಸಿಹಿ ಪದಾರ್ಥಳಿಗೆ ಶೇ.೧೦ ರಷ್ಟು ರಿಯಾಯ್ತಿ ದರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಸಂಸ್ಥೆ ಮುಂದಾಗಿದೆ. ಸದ್ಯದಲ್ಲಿಯೇ ಕೆಎಂಎಫ್‌ನಿಂದ ಕರದಂಟು, ಲಡಕಿ ಲಾಡು, ಶ್ರೀಖಂಡದಲ್ಲಿ ಕಿವಿ, ಗ್ರೀನ್ ಆಪಲ್ ಹಾಗು ಬಟರ್‌ಸ್ಕಾಚ್ ಸುವಾಸನೆ ಭರಿತ ಸಿಹಿ ಪದಾರ್ಥ ಶೀಘ್ರ ಲೋಕಾರ್ಪಣೆಗೊಳ್ಳಲಿದೆ ಎಂದು ಡಾ. ಕಮಕೇರಿ ತಿಳಿಸಿದ್ರು.

ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ