ತೇರದಾಳದ ಪದ್ಮಾನಗರದಲ್ಲಿ (ಡಚ್ಚ ಕಾಲನಿ) ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಆರೋಗ್ಯ ರಕ್ಷಾವಿಮೆ ಯೋಜನೆಯಡಿಯಲ್ಲಿ ಹತ್ತು ಸಾವಿರ ಮೊತ್ತದ ಚೆಕ್ ವಿತರಿಸಿದರು.
ಬಡವರ ಸಂಜೀವಿನಿ ಶ್ರೀ ಧರ್ಮಸ್ಥಳ ಸಂಘದ ಆರೋಗ್ಯ ರಕ್ಷಾ ವಿಮೆ : ಬಾಲಕೃಷ್ಣ
ತೇರದಾಳ : ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಆರೋಗ್ಯ ರಕ್ಷಾವಿಮೆ ಯೋಜನೆಯಡಿಯಲ್ಲಿ ಪಟ್ಟಣದ ಜೀವನ ಜ್ಯೋತಿ ಸಂಘದ ಸದಸ್ಯೆ ಶ್ರೀಮತಿ ಸಂಗೀತಾ ಖವಾಸಿಯವರಿಗೆ ಹೆರಿಗೆ ಸೌಲಭ್ಯದ ಅಡಿಯಲ್ಲಿ ಹತ್ತು ಸಾವಿರ ಮೊತ್ತದ ಚೆಕ್ ವಿತರಿಸಲಾಯಿತು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕಾ ಯೋಜನಾಧಿಕಾರಿಯಾದ ಬಾಲಕೃಷ್ಣ ಅವರ ನೇತೃತ್ವದಲ್ಲಿ ಫಲಾನುಭವಿಯ ಮನೆಗೆ ತೆರಳಿದ ತಂಡ ಆರೋಗ್ಯ ರಕ್ಷಾ ಹೆರಿಗೆ ಸೌಲಭ್ಯದ ಅಡಿಯಲ್ಲಿ ಚೆಕ್ ವಿತರಿಸಿ ಮಾತನಾಡಿದ ಅವರು ಪ್ರಸಕ್ತ ಸಾಲಿನಲ್ಲಿ ಜಮಖಂಡಿ ತಾಲೂಕಿನಾದ್ಯಂತ ಆರೋಗ್ಯ ರಕ್ಷಾ ವಿಮೆಯನ್ನು ಒಟ್ಟು 22300 ಸದಸ್ಯರು ನೋಂದಾಯಿಸಿದ್ದು ತೇರದಾಳ ವಲಯದಲ್ಲಿ ಒಟ್ಟು 2950 ಸದಸ್ಯರು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿದ್ದು ಈ ನಿಟ್ಟಿನಲ್ಲಿ ತೇರದಾಳ ಪದ್ಮಾನಗರ (ಡಚ್ಚ ಕಾಲನಿ) ಕಾರ್ಯಕ್ಷೇತ್ರದ ಜೀವನ ಜ್ಯೋತಿ ಸ್ವಸಹಾಯ ಸಂಘದ ಶ್ರೀಮತಿ ಸಂಗೀತಾ ಖವಾಸಿಯವರು ಸೌಲಭ್ಯವನ್ನು ಪಡೆಯುವುದರೊಂದಿಗೆ ಈ ಸೌಲಭ್ಯವನ್ನು ಪಡೆದ ತೇರದಾಳ ವಲಯದ ಮೊದಲ ಫಲಾನುಭವಿಯಾಗಿರುವುದು ಸಂತಸದ ಸಂಗತಿಯಂದು ತಿಳಿಸಿದ ಅವರು ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವುದರೊಂದಿಗೆ ಬದುಕಿನಲ್ಲಿ ಆಪತ್ತುಗಳು ಎದುರಾದಾಗ ಸದಸ್ಯರಿಗೆ ಸೂಕ್ತ ಸಹಾಯಾನುದಾನವನ್ನು ಪೂರೈಸುವ ಸದುದ್ದೇಶದಿಂದ ವಿಮಾ ಸೌಲಭ್ಯವನ್ನು ಕಲ್ಪಿಸಿದ್ದು ಸಂಘದ ಅವಕಾಶಗಳನ್ನು ಎಲ್ಲರೂ ಸದ್ವಿನಿಯೋಗಗೊಳಿಸಿಕೊಂಡು ಸ್ವಾವಲಂಭಿ ಬದುಕಿನೆಡಗೆ ಸಾಗುವಂತೆ ತಿಳಿಸಿದ ಅವರು ಸಂಘದ ವಿಮಾ ಸೌಲಭ್ಯವು ಬಡವರ ಪಾಲಿನ ಸಂಜೀವಿನಿಯಾಗಿದೆಯಂದು ಹೇಳಿದರು.
ಈ ಸಂಧರ್ಭದಲ್ಲಿ ಪುರಸಭೆ ಸದಸ್ಯ ರುಸ್ತುಮ್ ನಿಪ್ಪಾಣಿ ಮಾತನಾಡಿ ಶ್ರೀ ಧರ್ಮಸ್ಥಳ ಸಂಸ್ಥೆ ಹಲವಾರು ಸಾಮಾಜೀಕ ಕಾರ್ಯಗಳನ್ನು ಕೈಗೊಳ್ಳುವುದರೊಂದಿಗೆ ಬಡವರ ಬದುಕಿಗೊಂದು ಹೊಸ ಆಶಾಕಿರಣವನ್ನು ಕಲ್ಪಿಸಿದ್ದು ಧರ್ಮಾಧಿಕಾರಿಗಳಾದ ಶ್ರೀ ವಿರೇಂದ್ರ ಹೆಗ್ಡೆಯವರ ಸೇವೆ ಅವಿಸ್ಮರಣೀಯವೆಂದು ಬಣ್ಣಿಸಿದರು. ಸಂಘದ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ಸಂತೋಷ ಸ್ವಾಗತಿಸಿ ವಂದಿಸಿದರು.
-------------------------------------
------------------------------------------------
ºÀ


Social Plugin