ತೇರದಾಳ ಪಟ್ಟಣದ ಕಲೂತಿ ನಗರದ ಜನರಿಗೆ ನೀರಿಗಾಗಿ ಕಲೂತಿ ನಗರದ ಕೊಳವೆ ಬಾವಿಯಿಂದ ಮುಖ್ಯ ಟ್ಯಾಂಕ್‍ವರೆಗೆ ಪೈಪ್ ಲೈನ್ ಅಳವಡಿಸು ಕಾಮಗಾರಿ ಪ್ರಾರಂಭಿಸಿ ಜನರಿಗೆ ನೀರಿನ ಸೌಲಭ್ಯ ಕಲ್ಪಿಸುತ್ತಿರುವುದು.

ತೇರದಾಳ ಕಲೂತಿ ನಗರಕ್ಕೆ ವರದಾನವಾದ ಉಪಚುನಾವಣೆ 

ತೇರದಾಳ : ಪಟ್ಟಣದ ಕಲೂತಿ ನಗರದ ಜನರು ನೀರಿಗಾಗಿ ಕಳೆದ ಮೂರು ವರ್ಷಗಳಿಂದ ಪ್ರತಿಭಟನೆ ಮನವಿಗಳನ್ನು ಸಲ್ಲಿಸಿದರು ಕವಡೆ ಕಾಸಿನ ಕಿಮ್ಮತ್ತು ನೀಡದ ಅಧಿಕಾರಿಗಳು ಉಪಚುನಾವಣೆ ಘೋಷನೆಯಾದಂತೆ ಈ ಕುರಿತು ಗಮನ ಹರಿಸಿ ಜನರಿಗೆ ನೀರಿನ ಸೌಲಭ್ಯ ಕಲ್ಪಿಸಲು ಮುಂದಾಗಿರುವುದು ಜನರಿಗೆ ಉಪಚುನಾವಣೆ ದೇವರವರವಾಗಿ ಪರಿಣಮಿಸಿದೆ.

   ಪಟ್ಟಣದ ಕಲೂತಿ ನಗರಕ್ಕೆ ಕಳೆದ ಮೂರು ವರ್ಷಗಳಿಂದ ಜನರು ಸೂಕ್ತ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ಸಮೀಪದ ಹನಗಂಡಿ ಗ್ರಾಮದ ಬಾವಿಗಳನ್ನು ಆಶ್ರಯಿಸಿ ಪ್ರತಿ ದಿನ ನೀರನ್ನು ಹೊತ್ತು ಸುಸ್ತಾಗಿದ್ದ ಜನತೆಗೆ ಪುರಸಭೆ ವತಿಯಿಂದ ಇಂದು ಪುರಸಭೆ ವ್ಯಾಪ್ತಿಯಲ್ಲಿರುವ ಕಲೂತಿ ನಗರದ ಕೊಳವೆ ಬಾವಿಯಿಂದ ಮುಖ್ಯ ಟ್ಯಾಂಕ್‍ವರೆಗೆ ಪೈಪ್ ಲೈನ್ ಅಳವಡಿಸು ಕಾಮಗಾರಿ ಪ್ರಾರಂಭವಾಗಿದ್ದು ಸಾರ್ವಜನಿಕರಿಗೆ ದಿನದ 24 ಗಂಟೆ ನಿರಂತರ ನೀರನ್ನು ಪೂರೈಸುವುದಕ್ಕಾಗಿ ಮುಖ್ಯ ಟ್ಯಾಂಕ್‍ನಲ್ಲಿ ನೀರನ್ನು ಶೇಕರಿಸಿಡುವ ವ್ಯವಸ್ಥೆಯನ್ನು ಮಾಡಿ ಜನರು ಅಗತ್ಯತೆಗನುಗುಣವಾಗಿ ನೀರನ್ನು ಉಪಯೋಗಿಸುವ ವ್ಯವಸ್ಥೆಯನ್ನು ಕಲ್ಪಿಸಿರುವುದರಿಂದ ಸಂತಸವನ್ನು ವ್ಯಕ್ತಪಡಿಸಿದ ಜನರು  ಹಲವು ಪ್ರತಿಭಟನೆ ಹೋರಾಟಗಳನ್ನು ಮಾಡಿ ಮನವಿ ಸಲ್ಲಿಸಿದರೂ ಕೂಡ ಯಾವೊಬ್ಬ ಜನಪ್ರತಿನಿಧಿಯಾಗಲಿ ಅಥವಾ ಅಧಿಕಾರಿಗಳಾಗಲಿ ಇತ್ತ ಕಡೆ ಮುಖ ಮಾಡದ ಇವರು ಇಂದು ಉಪಚುನಾವಣೆ ಘೋಷನೆಯಾದ ತಕ್ಷಣ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಇದೂ ಉಪಚುನಾವಣೆಯ ನೆಪದಲ್ಲಿ ದೇವರು ಕೊಟ್ಟ ವರವೆಂದು ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಸಾರ್ವಜನಿಕರು ಚಾಟಿ ಏಟು ಬೀಸಿದರು. 

  ಈ ಮದ್ಯೆ ಮತದಾರರನ್ನು ಆಕರ್ಷಿಸಲು ನಡೆಯುತ್ತಿರುವ ಕಾಮಗಾರಿಯನ್ನು  ನಾವೇ ಮಾಡಿಸಿದ್ದು, ಅಧಿಕಾರಿಗಳಿಗೆ ನಾವೇ ಹೇಳಿದ್ದು ನಮ್ಮಿಂದಲೇ ಈ ಕಾಮಗಾರಿ ನಡೆಯುತ್ತಿರುವುದೆಂದು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಆಡಳಿತ ಮತ್ತು ಪ್ರತಿಪಕ್ಷದವರಿಗೆ ನಾಗರಿಕರು ಛೀಮಾರಿ ಹಾಕಿದ ಪ್ರಸಂಗ ಜರುಗಿತು.

-----------------------------------------------