ಸರಳವಾಗಿ ನೆರವೇರಿದ ಉಚಿತ ಚಿಕಿತ್ಸಾ ಶಿಬಿರ
ಮುಗಳಖೋಡ: ಪಟ್ಟಣದಲ್ಲಿ ನೂತನವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ‘ಧರ್ಮಟ್ಟಿ ದವಾಖಾನೆ’ ಯಲ್ಲಿ ಗುರುವಾರ ಅಗಷ್ಟ 26 ರಂದು ಸಾರ್ವಜನಿಕರ ಆರೋಗ್ಯದ ಸೇವೆಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಉಚಿತ ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಸಕ್ಕರೆ ಕಾಯಿಲೆ, ಚಿಕ್ಕಮಕ್ಕಳ ಚಿಕಿತ್ಸೆ, ಸಂಧಿವಾತ, ರಕ್ತದೊತ್ತಡ, ಚರ್ಮರೋಗ, ಮೂಲವ್ಯಾಧಿ, ಸ್ತ್ರೀರೋಗ ಸಮಸ್ಯೆ ಸೇರಿದಂತೆ ಒಟ್ಟು 168 ಜನರಿಗೆ ಚಿಕಿತ್ಸೆ ನೀಡಲಾಯಿತೆಂದು ಡಾ. ಸಚೀನ ಧರ್ಮಟ್ಟಿ ಹೇಳಿದರು.
ಮುಗಳಖೋಡ ಪಟ್ಟಣ ಸೇರಿದಂತ್ತೆ ಪಾಲಬಾಂವಿ, ಸಸಾಲಟ್ಟಿ, ಖಣದಾಳ, ಹಿಡಕಲ್ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಈ ಶಿಬಿರದ ಸದುಪಯೋಗ ಪಡೆದುಕೊಂಡು ಮುಗಳಖೋಡ ಪಟ್ಟಣದಲ್ಲಿ ಇಂತಹ ‘ಧರ್ಮಟ್ಟಿ ದವಾಖಾನೆ’ ಆಗಿರುವುದರಿಂದ ಚಿಕಿತ್ಸೆಗೆಂದು ಬೇರೆ ಬೇರೆ ಪಟ್ಟಣಗಳಿಗೆ ಹೋಗದೆ, ನಮ್ಮೂರಲ್ಲಿಯೇ ಇಂತಹ ಚಿಕಿತ್ಸೆ ದೊರೆಯುವದರಿಂದ ಇಲ್ಲಿಯ ಜನರಿಗೆ ಸಹಾಯವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಸಚೀನ ಧರ್ಮಟ್ಟಿ, ಡಾ. ಸುಶ್ಮೀತಾ ಧರ್ಮಟ್ಟಿ, ರಾಘು ಧರ್ಮಟ್ಟಿ, ಶೇಖರ ನಿಲಜಗಿ ಉಪಸ್ಥಿತರಿದ್ದರು.
--------------------------------------
-



Social Plugin