*ಬ್ಯಾಂಕ್‌ಗಳ ಮೇಲೆ ಹಾರದ ರಾಷ್ಟ್ರ ಧ್ವಜ*


ಇಡೀ ದೇಶವೇ ಸ್ವಾತಂತ್ರ್ಯ ದೊರೆತು ೭೫ ನೇ ವರ್ಷದ ಅಮೃತ ಮಹೋತ್ಸವ ಆಚರಣೆಯಲ್ಲಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಬೇಕಾದ ಹಬ್ಬವನ್ನು ಕೆಲವರು ನಿರ್ಲಕ್ಷ್ಯಕ್ಕೀಡಾಗಿರುವದು ನಾಚಿಕೆಯಾಗುವಂತ ಸಂಗತಿ.
ರವಿವಾರ ಕೆಲವು ರಾಷ್ಟ್ರಿಕೃತ ಹಾಗು ಸಹಕಾರಿ ಬ್ಯಾಂಕ್‌ಗಳವರು ರಾಷ್ಟ್ರಧ್ವಜಾರೋಹಣ ಮಾಡಿಲ್ಲ.
 


ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ
ಮಂಗಳವಾರ ಪೇಟೆಯಲ್ಲಿರುವ ಕರ್ನಾಟಕ ಬ್ಯಾಂಕ್ ಕಟ್ಟಡದಲ್ಲಿ ಧ್ವಜ ಏರಿಸಲು ಕಂಬವನ್ನೂ ನಿಲ್ಲಿಸದೆ ಧ್ವಜ ಹಾರಿಸದೆತೀರಾ ನಿರ್ಲಕ್ಷ್ಯ ತೋರಿರುವದು ಅಕ್ಷಮ್ಯ ಅಪರಾಧವಾಗಿದೆ ಎಂದು ಸ್ಥಳೀಯ ಸಂಘಟನೆಗಳು ದೂರಿದ್ದಾರೆ.ನಾಡಿನ ಪ್ರತಿಯೊಬ್ಬ ಪ್ರಜೆಯೂ ಇಂದು ಹಬ್ಬದ ರೀತಿಯಲ್ಲಿ ಸ್ವಾತಂತ್ರ್ಯ ದಿನ ಆಚರಿಸುತ್ತಿರುವಾಗ ಬ್ಯಾಂಕ್ ಸಿಬ್ಬಂದಿ ರಜೆಯ ಮಜಾ ಅನುಭವಿಸಲು ತೆರಳಿರುವದು ಸರಿಯಲ್ಲ. ಈ ಬಗ್ಗೆ ಬ್ಯಾಂಕಿನ ಹಿರಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.



ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ