"ಸಮಾಜ ಸೇವೆಯಲ್ಲಿ ದೇವರನ್ನು ಕಾಣಿರಿ*

ದೇವರನ್ನು ಯಾರೂ ನೋಡಿಲ್ಲ ಆದರೆ ಸಮಾಜಮುಖಿ ಕಾರ್ಯ ಹಾಗು ತುಳಿತಕ್ಕೊಳಗಾದವರನ್ನು ಎತ್ತಿ ಹಿಡಿದು ಪರೋಪಕಾರಿ ಜೀವನದಲ್ಲಿ ದೇವರನ್ನು ಕಾಣಲು ಸಾಧ್ಯವೆಂದು ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯ ಸಂಚಾಲಕ ಡಾ. ಪದ್ಮಜೀತ ನಾಡಗೌಡ ಪಾಟೀಲ ಹೇಳಿದರು.



ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕುರುಹಿನಶೆಟ್ಟಿ ಸಹಕಾರಿಸಂಘದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನೇತ್ರ ತಜ್ಞನಾಗಿಬಡವರ ಪರ ಸೇವೆಗೈಯುತ್ತಿರುವಲ್ಲಿ ನೆಮ್ಮದಿ ಕಂಡಿದ್ದೇನೆ. ಅದರೊಂದಿಗೆ ಕೈಲಾದಷ್ಟು ಸಂಕಷ್ಟ ಸಂದರ್ಭ ಸಹಾಯ ಮಾಡುತ್ತಿರುವ ನನಗೆ ಜನತೆಯ ಆಶೀರ್ವಾದವಿದೆಯೆಂದರು.
ಮತ್ತೋರ್ವ ಸನ್ಮಾನಿತಗೊಂಡ ಉದ್ಯಮಿ ಪ್ರಕಾಶ ದೇಸಾಯಿ ಮಾತನಾಡಿ, ಅತ್ಯಂತ ಕಷ್ಟದಿಂದ ಯಾರು ಮೇಲೆ ಬಂದಿರುತ್ತಾರೋ ಬಡತನ ಹಾಗು ಸಮಸ್ಯೆಗಳ ಅರಿವಿರುತ್ತದೆ. ಅದರಂತೆಯೇ ಇತರರಿಗೆ ಮಾದರಿಯಾಗುವ ಮೂಲಕ ಕೆಳಮಟ್ಟದ ಜನರನ್ನು ಮೇಲೆತ್ತುವ ಕಾಯಕದಲ್ಲಿ ತೊಡಗಿದಾಗ ಮಾತ್ರ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವೆಂದರು.
ವೇದಿಕೆ ಮೇಲೆ ಸಂಘದ ಅಧ್ಯಕ್ಷ ಗಂಗಪ್ಪ ಮಂಟೂರ, ಶಂಕರ ಸೊರಗಾಂವಿ, ವಿ.ಎನ್. ಡುಮಕಿಮಠ ಉಪಸ್ಥಿತರಿದ್ದರು.



ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ