ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ಶ್ರೀ ಸದ್ಗುರು ಶರಣಬಸವೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.

ಶಿಕ್ಷಣ ಅಭಿವೃದ್ಧಿಯ ಬೆನ್ನಲುಬು : ವಾಯ್ ಹೆಚ್ ಅಲಾಸ  

ತೇರದಾಳ :  ಸಮೀಪದ ಹಳಿಂಗಳಿ ಗ್ರಾಮದ ಶ್ರೀ ಸದ್ಗುರು ಶರಣಬಸವೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ಆವರಣದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶಿವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಿದ 75ನೇ ಸ್ವಾತಂತ್ರೊತ್ಸವ ಅಮೃತ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾಜಿ ಎಸ್‍ಡಿಎಮ್‍ಸಿ ಅಧ್ಯಕ್ಷ  ನಿಂಗಪ್ಪ ಸಂಕಾರ ಧ್ವಜಾರೋಹಣ ಹಾಗೂ  ಬಸಪ್ಪ ನಾಗಪ್ಪ ತೇಲಿ ಪೂಜಾ ಕಾರ್ಯಕ್ರಮ ನೆರೆವೇರಿಸಿದರು. 

   ಈ ಸಂದರ್ಭದಲ್ಲಿ ಮಾತನಾಡಿದ  ಬಿ.ಬಿ ವೆಂಕಟಾಪೂರ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಉತ್ತಮ ನಾಯಕರ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ನರೇಂದ್ರ ಮೋದಿಯವರು ವಿಶ್ವಕ್ಕೆ ಮಾದರಿಯಾಗಿದ್ದಾರೆಂದು ಬಣ್ಣಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಿಬಿಎಸ್‍ಇ ಪ್ರಾಚಾರ್ಯ ವಾಯ್ ಎಚ್ ಅಲಾಸ ದೇಶದಲ್ಲಿ ಕೌಶಲ್ಯಾಧಾರಿತ ಶಿಕ್ಷಣದ ಅವಶ್ಯಕತೆಯಿದ್ದು, ವಿದ್ಯಾರ್ಥಿಗಳು ಮಾಡುತ್ತಾ ಕಲಿಯವಂತಾದಾಗ ಮಾತ್ರ ಸ್ವಾವಲಂಭಿ ಭಾರತದ ಪರಿಕಲ್ಪಣೆ ಸಾಕಾರಗೊಳ್ಳಲು ಸಾಧ್ಯವೆಂದು ತಿಳಿಸಿದರು.

  ಸಮಾರಂಭದಲ್ಲಿ ಊರಿನ ಗಣ್ಯ ನಾಗರಿಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ  ಎಚ್.ಬಿ ಕಾಂಬಳೆ ಧ್ವಜವಂದನೆ ಹೇಳಿದರು.  ಸಿ.ಎಸ್ ಗುಡದಿನ್ನಿ ಸ್ವಾಗತಿಸಿದರು,  ವ್ಹಿ.ವ್ಹಿ ಸಿದ್ದಾಪೂರ ನಿರೂಪಿಸಿದರು.  ಸೋಮಶೇಖರ ಜಿ.ಎಸ್ ವಂದಿಸಿದರು.