ತಮದಡ್ಡಿ ಪುನರ್ವಸತಿ ಕಾಮಗಾರಿಗೆ ಉಚ್ಚನ್ಯಾಯಾಲಯದಿಂದ ತಡೆಯಾಜ್ಞೆ
ತೇರದಾಳ : ಹೋರಾಟ ಪ್ರತಿಭಟಣೆಗಳಿಂದ ರಾಜ್ಯವ್ಯಾಪಿ ಸುದ್ದಿಯಾಗಿದ್ದ ಹಳಿಂಗಳಿ ತಮದಡ್ಡಿ ಪುನರ್ವಸತಿ ಕೇಂದ್ರದ ಕದನ ಇಂದು ಮಾನ್ಯ ಉಚ್ಚ ನ್ಯಾಯಾಲಯ ಕಾಮಗಾರಿಗೆ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡುವುದರೊಂದಿಗೆ ಪ್ರಕರಣಕ್ಕೆ ಅಲ್ಪವಿರಾಮ ನೀಡಿದೆ.
ಅಧ್ಯಕ್ಷರು ಉಪಾಧ್ಯಕ್ಷರು ಪದ್ಮಸರೋವರ ಪಾವಪುರ ಪ್ರತಿಕೃತಿ ಜಲಮಂದಿರವಂ ಗುಂಪಾಕೆರೆ ಅಲ್ಪಸಂಖ್ಯಾತರ ಅಬಿವೃದ್ದಿ ಸಮಿತಿ ಹಳಿಂಗಳಿ ಇವರು ಮಾನ್ಯ ಉಚ್ಚ ನ್ಯಾಯಾಲಯ ವಿಭಾಗೀಯ ಪೀಠ ಧಾರವಾಡ ಇವರಲ್ಲಿ ಸಲ್ಲಿಸಿದ ದಾವೇ ಸಂಖ್ಯೆ: 103093 ರನ್ವಯ ಇಂದು ಕಾಮಗಾರಿಗೆ ತಡೆಯಾಜ್ಞೆಯನ್ನು ನೀಡಿದ್ದು ಮುಂದಿನ ವಿಚಾರಣೆಯವರೆಗೆ ಕಾಮಗಾರಿ ನಡೆಯುತ್ತಿರುವ ಸರ್ವೇ ನಂ 142/ಅ ರಲ್ಲಿ ಬರುವ ಒಟ್ಟು ಕ್ಷೇತ್ರ 336 ಎಕರೆ ಭೂ ಪ್ರದೇಶದಲ್ಲಿ ಹಳಿಂಗಳಿ ಗ್ರಾಮ ಪಂಚಾಯತ ವ್ಯಾಪ್ತಿಗೊಳಪಡುವ 58 ಎಕರೆ ಪ್ರದೇಶವನ್ನು ಹೊರತು ಪಡಿಸಿ ಉಳಿದೆಡೆ ಯಾವುದೇ ರೀತಿಯ ಕಾಮಗಾರಿಯನ್ನು ಕೈಗೊಳ್ಳಬಾರದು ಹಾಗೂ ಸ್ಮಾರಕಗಳನ್ನು ನಾಶಪಡಿಸಬಾರದು ಮತ್ತು ಯತಾಸ್ಥಿತಿಯನ್ನು ಮುಂದುವರೆಸಬೇಕೆಂದು ನೀಡಿರುವ ತಡೆಯಾಜ್ಞೆಯಲ್ಲಿ ಆದೇಶಿಸಿದೆ.
ಪ್ರಕರಣದಲ್ಲಿ ಪ್ರತಿವಾದಿಗಳಾಗಿ ಕಾರ್ಯದರ್ಶಿಗಳು ಕಂದಾಯ ಇಲಾಖೆ,ಬೆಂಗಳೂರು,ಜಿಲ್ಲಾಧಿಕಾರಿಗಳು ಬಾಗಲಕೋಟ, ತಹಶೀಲ್ದಾರರು ರಬಕವಿ ಬನಹಟ್ಟಿ, ಉಪವಿಭಾಗಾಧಿಕಾರಿಗಳು ಜಮಖಂಡಿ, ಪೋಲೀಸ್ ವೃತ್ತ ನಿರೀಕ್ಷಕರು ಬನಹಟ್ಟಿ, ಪಿಎಸ್‍ಆಯ್ ತೇರದಾಳ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಕಾರಿಗಳು ಕರ್ನಾಟಕ ನಿರಾವರಿ ನಿಗಮ ನಿಯಮಿತ ಹಾಗೂ ಪುವ ಮತ್ತು ಪುನರ್ ನಿರ್ಮಾಣ ಉಪವಿಭಾಗ ರಬಕವಿ ಹಾಗೂ ಮಾನ್ಯ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬಾಗಲಕೋಟ ಹೀಗೆ ಒಟ್ಟು 8 ಜನರನ್ನು ಪ್ರತಿವಾದಿಗಳನ್ನಾಗಿಸಲಾಗಿದ್ದು ಮುಂದಿನ ವಿಚಾರಣೆಯನ್ನು ಸೆ.13 ರಂದು ಕಾಯ್ದಿರಿಸಲಾಗಿದೆ.
------------------------------

Social Plugin