*ಇಡೀ ವಿಶ್ವವೇ ನಿಬ್ಬೆರಗಾಗಿ ಭಾರತವನ್ನು ನೋಡುತ್ತಿದೆ*
ಭೀಕರ ಮಾರಕ ಕರೋನಾ ರೋಗದಿಂದ ತತ್ತರಿಸಿದ್ದ ಇಡೀ ವಿಶ್ವದಲ್ಲಿ ತನ್ನ ಆರ್ಥಿಕತೆಯ ಸಂಭಾಳಿಸುವ ಜೊತೆಗೆ ಪ್ರಥಮ ಬಾರಿಗೆ ಲಸಿಕೆ ಸಂಶೋಧಿಸಿ ಪ್ರಪಂಚದಲ್ಲಿಯೇ ಅತೀ ಹೆಚ್ಚು ಲಸಿಕಾ ವಿತರಣೆ ಮಾಡಿರುವ ರಾಷ್ಟç ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಗಿದೆ. ತನ್ನ ರಕ್ಷಣಾ ಕ್ಷೇತ್ರದ ಪರಿಕರಗಳನ್ನು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಸ್ವಯಂ ಉತ್ಪಾದಿಸುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿನ ಪರಾವಲಂಬಿತನ ದೂರವಾಗಿಸಿದ್ದಲ್ಲದೇ ಬಡ ರಾಷ್ಟçಗಳಿಗೆ ಮಾರಕ ಕರೋನಾ ನಿಗ್ರಹಿಸಲು ನೆರವಾಗುವತ್ತ ಉಚಿತ ಲಸಿಕೆ ಪೂರೈಸುವ ಮೂಲಕ ಭಾರತದ ಸ್ವಾವಲಂಬಿತನ ಮತ್ತು ಆರ್ಥಿಕತೆಯ ಸುರಕ್ಷತಾ ಕ್ರಮಗಳನ್ನು ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುತ್ತಿದೆ ಎಂದು ಶಾಸಕ ಸಿದ್ದು ಸವದಿ ನುಡಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ
ರಬಕವಿ-ಬನಹಟ್ಟಿ ತಾಲೂಕಾಡಳಿತ ಬನಹಟ್ಟಿಯ ಎಸ್‌ಆರ್‌ಏ ಮೈದಾನದಲ್ಲಿ ಆಯೋಜಿಸಿದ್ದ ೭೫ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರö್ಯಕ್ಕಾಗಿ ಲಕ್ಷಾಂತರ ದೇಶಭಕ್ತರ ತ್ಯಾಗ-ಬಲಿದಾನ ಮತ್ತು ಶ್ರಮವನ್ನು ನಾವಿಂದು ಸ್ಮರಿಸಬೇಕಾದ ಪುಣ್ಯದಿನವಾಗಿದೆ.ಪೂರ್ವಜರು ನಮಗೆ ತಂದಿಟ್ಟ ಸ್ವಾತಂತ್ರö್ಯವನ್ನು ಜವಾಬ್ದಾರಿಯಿಂದ ಉಳಿಸಿಕೊಂಡು ರಾಷ್ಟೀಯವಾದಕ್ಕೆ ಆದ್ಯತೆ ನೀಡಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮೆರೆಯುವತ್ತ ಎಲ್ಲರೂ ಅಹರ್ನಿಶಿ ಶ್ರಮಿಸಬೇಕಿದೆ.
ರೈತರು ತಾವು ಬೆಳೆದ ಬೆಳೆಯ ಸಮೀಕ್ಷೆ ಮಾಡುವ ವ್ಯವಸ್ಥೆ ಜಾರಿಯಾಗಿರುವುದು ರೈತರಲ್ಲಿ ಆತ್ಮಸ್ಥೆರ್ಯ ಹೆಚ್ಚಿಸಿದ್ದು,ಇದಕ್ಕೆ ಅಧಿಕಾರಿಗಳು ಧನಾತ್ಮಕವಾಗಿ ಸ್ಪಂದಿಸಬೇಕೆಂದರು.ಇಡೀ ಮನುಕುಲಕ್ಕೆ ಗಂಡಾಂತರ ತಂದಿಟ್ಟ ಕೊರೋನಾ ಸಂದರ್ಭದಲ್ಲಿ ನಮ್ಮ ವಿಜ್ಞಾನಿಗಳು, ವೈದ್ಯರು ಮತ್ತು ಸಿಬ್ಬಂದಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಿ ಅಮೂಲ್ಯಜೀವಗಳನ್ನು ರಕ್ಷಿಸುವ ಮೂಲಕ ಪ್ರಶಂಸಾರ್ಹ ಕಾರ್ಯ ಮಾಡಿದ್ದಾರೆ. ಅಂತರಾಷ್ಟಿçಯ ಮಟ್ಟದಲ್ಲಿ ಇದೀಗ ಭಾರತ ಕ್ರೀಡಾಕ್ಷೇತ್ರದಲ್ಲಿಯೂ ಪ್ರಕಾಶಿಸುತ್ತಿದೆ.
ಓಲಂಪಿಕ್ಸ್ ಆಟಗಳಲ್ಲಿ ಒಟ್ಟು ೭ ಪದಕಗಳನ್ನು ಶತಮಾನದ ಬಳಿಕ ಪಡೆದಿರುವ ದೇಶದಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುವಂತಾಗಿದೆ.
ಹಿಂದಿನ ಹಿರಿಯರು ಜಾತಿ, ಪಂಥ ಭಾಷೆ, ಮತಗಳ ನಡುವೆ ಹೋರಾಟ ಮಾಡದೇ ಒಟ್ಟಾಗಿ ದೇಶದ ಸ್ವಾತಂತ್ರö್ಯಕ್ಕೆ ಶ್ರಮಿಸಿ ಗಳಿಸಿಕೊಟ್ಟದ್ದನ್ನು ನಾವೆಲ್ಲ ಜತನದಿಂದ ಕಾಯ್ದುಕೊಂಡು ದೇಶದ ಪ್ರಗತಿಯಲ್ಲಿ ನಮ್ಮ ಹೊಣೆಗಾರಿಕೆಯನ್ನು, ಬದ್ಧತೆಯನ್ನು ಪ್ರದರ್ಶಿಸಿ ಮುಂದಿನ ಜನಾಂಗಕ್ಕೆ ಆದರ್ಶ ಪ್ರಾಯರಾಗಬೇಕೆಂದರು.
ತಹಶೀಲ್ದಾರ ಎಸ್.ಬಿ.ಇಂಗಳೆ ಧ್ವಜಾರೋಹಣ ನೆರವೇರಿಸಿದರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 16 ಸಾಧಕರನ್ನು ಸನ್ಮಾನಿಸಲಾಯಿತು.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin