*ಸಸಿ ನೆಡುವಲ್ಲಿ ಗಿನ್ನೀಸ್ ದಾಖಲೆ ಪ್ರಯತ್ನ*

 ಗಿನ್ನೀಸ್ ದಾಖಲೆಗಾಗಿ ದೇಶವನ್ನು ಹಚ್ಚ ಹಸಿರಿನ ಸಿರಿ ಸಂಪತ್ತನ್ನಾಗಿ ಪಣ ತೊಡುವಲ್ಲಿ ಹೀರೋ ಸಂಸ್ಥೆಯು ಮುಂದಾಗಿರುವದು ನಿಜಕ್ಕೂ ಶ್ಲಾಘನೀಯವೆಂದು ಕೊಣ್ಣೂರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪ್ರೊ. ಬಸವರಾಜ ಕೊಣ್ಣೂರ ಪ್ರಶಂಸೆ ವ್ಯಕ್ತಪಡಿಸಿದರು.




ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ
ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಸಿ ನೆಟ್ಟು ನಂತರ ಮಾತನಾಡಿದ ಅವರು, ಬನಹಟ್ಟಿಯ ಪೂರ್ಣಿಮಾ ಅಟೋಮೋಬೈಲ್‌ನಿಂದ ತಾಲೂಕಿನಾದ್ಯಂತ ಸಸಿ ನೆಡುವ ಕಾರ್ಯದಲ್ಲಿ ತೊಡಗಿ ಅವುಗಳ ಪೋಷಣೆಗೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಲ್ಲಿ ಮುಂದಾಗಿರುವದು ವಿಶೇಷ. ಸಸಿ ನೆಡುವದಷ್ಟೇ ಮಹತ್ವವಲ್ಲ ಅವುಗಳ ಪಾಲನೆ-ಪೋಷಣೆ ಬಹುಮುಖ್ಯವೆಂದರು.



ಹಿರೋ ಶೋರೋಂ ಮಾಲಿಕರಾದ ಗುರು ಹೊರಟ್ಟಿ ಮಾತನಾಡಿ, ಈಗಾಗಲೇ ಮದಲಮಟ್ಟಿ, ಸಸಾಲಟ್ಟಿ, ಬನಹಟ್ಟಿ ಹೀಗೆ ಅನೇಕ ಕಡೆಗಳಲ್ಲಿನ ಸರ್ಕಾರಿ ಹಾಗು ಖಾಸಗಿ ಶಾಲೆಗಳಲ್ಲಿ ಸಸಿ ನೆಡುವ ಮೂಲಕ ಅವುಗಳ ನಿರ್ವಹಣೆ ನಡೆಸುವ ಮೂಲಕ ಹಸಿರು ಸಂಪತ್ತಿನ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಇದೇ ಸಂದರ್ಭ ಶಿವಾನಂದ ದಾಸ್ಯಾಳ, ವೆಂಕಣ್ಣ ಪಾಟೀಲ, ಪ್ರಜ್ವಲ ಹೊರಟ್ಟಿ,ಶ್ರೀಶೈಲ ಕಾದೇವರ, ಮಂಜುನಾಥ ನುಚ್ಚಿ ಸೇರಿದಂತೆ ಅನೇಕರಿದ್ದರು.



ವರದಿ
ಮಲ್ಲಿಕಾರ್ಜುನ ತುಂಗಳ
 ಮುಖ್ಯ ವರದಿಗಾರರು
ಬಾಗಲಕೋಟೆ