ಪ್ರತಿ ವರ್ಷ ವಿಜ್ರಂಭಣೆಯಿಂದ ನಡೆಯುತ್ತಿದ್ದ ಈ ಭಾಗದಲ್ಲಿಯೇ ದೊಡ್ಡ ಜಾತ್ರೆಯಾದ ರಬಕವಿ ಶ್ರೀ ಮಲ್ಲಿಕಾರ್ಜುನ ಹಾಗೂ ಮಹಾದೇವರ ಜಾತ್ರೆಯನ್ನು ಕೊರೊನಾ ವೈರಸ್ ಹಾವಳಿಯಿಂದ ಸರ್ಕಾರದ ನಿಯಮಾನುಸಾರ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಶ್ರೀ ಶಂಕರಲಿಂಗ ಟ್ರಸ್ಟನ ಅಧ್ಯಕ್ಷ ಬಾಲಚಂದ್ರ ಉಮದಿ ಅಣ್ಣನವರು ತಿಳಿಸಿದ್ದಾರೆ.
ಶುಕ್ರವಾರ M R NEWS ದೊಂದಿಗೆ ಮಾತನಾಡಿದ ಅವರು ಆ.೨೩ ರಂದು ಸಂಜೆ ೭ ಕ್ಕೆ ನಡೆಯಲಿರುವರಥೋತ್ಸವ ಹಾಗೂ ಆ.೨೪ ರಂದು ಸಂಜೆ ೪ ಕ್ಕೆ ಜರುಗುವ ಜಂಗಿ ನಿಖಾಲಿ ಕುಸ್ತಿಗಳು, ಆ.೨೫ ರಂದು ಜರುಗಲಿರುವ ಕಳಸೋತ್ಸವ, ಸಂಭಾಳವಾದನ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಸಂಪೂರ್ಣ ರದ್ದಾಗಿರುತ್ತವೆ. ದೇವರ ಮತ್ತು ರಥದ ದರ್ಶನಕ್ಕೆ ಮುಕ್ತ ಅವಕಾಶ ನೀಡಲಾಗಿದ್ದು, ಇನ್ನುಳಿದ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಉಮದಿ ತಿಳಿಸಿದ್ದಾರೆ.
ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ

Social Plugin