*ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿರೋಧ*

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕಾಲತಿಪ್ಪಿ ಗ್ರಾಮದ ಸರ್ವೆ ನಂ.೧೫ ರಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧದ ಹಿನ್ನಲೆ ಇಂದು ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಪತ್ರ ನೀಡಲಾಯಿತು.




ಕಾಲತಿಪ್ಪಿ ಗ್ರಾಮದಲ್ಲಿ ಜನವಸತಿ, ಶಾಲೆ, ಕುಡಿಯುವ ನೀರಿನ ಟಾಕಿ ಹಾಗು ದೇವಸ್ಥಾನ ಸೇರಿದಂತೆ ಶುದ್ಧ ಪರಿಸರ ಹೊಂದಿದ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಸುಮಾರು ಒಂದು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲು ಹೊರಟಿರುವದು ಸಮಂಜಸವಲ್ಲ ತಕ್ಷಣವೇ ಈ ಕಾರ್ಯದಿಂದ ಹಿಂದೆ ಸರಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಇದೇ ಸಂದರ್ಭ ತಹಶೀಲ್ದಾರ ಸಂಜಯ ಇಂಗಳೆ ಅವರಿಗೆ ಮನವಿ ಅರ್ಪಿಸಲಾಯಿತು. ಸದಾಶಿವ ರೆಡ್ಡಿ, ಗಜಾನಂದ ಕರಿಗಾರ, ಸಂಜು ರೆಡ್ಡಿ, ಹಣಮಂತ ಪಾಟೀಲ, ಶಂಕರ ಹೂಗಾರ, ಮಲ್ಲಯ್ಯ ಮಠದ, ಶ್ರೀಶೈಲ ಪಾಟೀಲ ಸೇರಿದಂತೆ ಅನೇಕರಿದ್ದರು.



ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ