ತೇರದಾಳದ ದೇವರಾಜ ನಗರದ ಸರ್ವೆ ನಂ 552ರ ಆಕಾಶ ಕೆರೆಯನ್ನು ಪ್ರಭಾವಿ ವ್ಯಕ್ತಿಗಳು ಅತೀಕ್ರಮಣ ಮಾಡಿಕೊಂಡಿದ್ದಾರೆ ಅದನ್ನು ತೆರವುಗೊಳಿಸುವಂತೆ ಪುರಸಭೆ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಅತೀಕ್ರಮಣ ಮಾಡಿದ ಆಕಾಶ ಕೆರೆಯನ್ನು ತೆರವುಗೊಳಿಸುವಂತೆ ಮನವಿ

ತೇರದಾಳ : ಪಟ್ಟಣದ ದೇವರಾಜ ನಗರದ ಸರ್ವೆ ನಂ552ರಲ್ಲಿನ ಸಾರ್ವಜನಿಕರು ಉಪಯೋಗಿಸುತ್ತಿದ್ದ ಸಾರ್ವಜನಿಕ ಆಕಾಶ ಕೆರೆಯನ್ನು ಶ್ರೀಜಿನಸೇನಾಚಾರ್ಯ ವಿದ್ಯಾಮಂಡಳದವರು ಅತೀಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಪ್ರಜಾಪರಿವರ್ತನಾ ವೇದಿಕೆಯ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ಸರಿಕರ ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿ ಪುರಸಭೆ ಕಂದಾಯ ಅಧಿಕಾರಿ ಎಫ್.ಬಿ.ಗಿಡ್ಡಿ ಇವರಿಗೆ ಮನವಿ ಸಲ್ಲಿಸಿದರು.

  ಈ ಹಿಂದೆ ಈ ಆಕಾಶ ಕೆರೆಯನ್ನು ತೆರವುಗೊಳಿಸುವಂತೆ ಎರಡು ಸಲ ಮನವಿಯನ್ನು ಕೊಟ್ಟಿದ್ದರು ಅದನ್ನು ತೆರವುಗೊಳಿಸುವ ಗೋಜಿಗೆ ಹೋಗಿಲ್ಲ. ಈ ವಿಷಯವು ಬಹಳ ಮುಖ್ಯವಾಗಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ತಕ್ಷಣ ಆಕಾಶ ಕೆರೆಯನ್ನು ಪ್ರಭಾವಿ ವ್ಯಕ್ತಿಗಳಿಂದ ಅತೀಕ್ರಮಣವಾಗಿರುವುದನ್ನು ತೆರವುಗೊಳಿಸಿ ತಮ್ಮ ಪುರಸಭೆ ವಶಕ್ಕೆ ಪಡೆದು ಸಾರ್ವಜನಿಕ ಉಪಯೋಗಕ್ಕಾಗಿ ಮತ್ತು ಪ್ರಾಣಿ,ಪಕ್ಷಿಗಳಿಗೆ ಕುಡಿಯಲು ನೆರವಾಗುವಂತೆ ಅನುಕೂಲ ಮಾಡಿಕೊಡಬೇಕು ಪ್ರತಿಭಟನೆಯ ಮೂಲಕ ಮನವಿ ಸಲ್ಲಿಸಿದರು.

  ಈ ಸಂದರ್ಭದಲ್ಲಿ ನಾಗಪ್ಪ ಸರಿಕರ, ಆನಂದ ನಡುವಿನಕೇರಿ, ಪ್ರಭು ರೋಡಕರ,ಜಿ.ಎಸ್.ಸುತಾರ, ಸುಧೀರ ಯಳಕಾರ, ಎಸ್.ಬಿ.ರೋಡಕರ, ಗಿರೀಶ ಹಟ್ಟೆನವರ, ಸುಧಾಕರ ದೊಡಮನಿ, ಕೇಶವ ನಡುವಿನಕೇರಿ ಸೇರಿದಂತೆ ಹಲವಾರು ಜನರು ಇದ್ದರು.