ಬೆಳಗಾವಿ: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ಫಲಿತಾಂಶವು 100ಕ್ಕೆ 100ರಷ್ಟು ಆಗಿದ್ದು.ಒಟ್ಟು125 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.ಇದರಲ್ಲಿ 76 ವಿದ್ಯಾರ್ಥಿಗಳು ಅತ್ತ್ಯುತ್ತಮ ಶ್ರೇಣಿಯಲ್ಲಿ ಹಾಗೂ 49 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಮತ್ತು 8 ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದರೆ 3 ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ100ಕ್ಕೆ 100 ಅಂಕ ಪಡೆದಿದ್ದಾರೆ ಹಾಗೂ ಒಬ್ಬರು ಇಂಗ್ಲಿಷ್ ವಿಷಯದಲ್ಲಿ100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. 613 ಅಂಕಗಳನ್ನು ಪಡೆದು ವಿಠ್ಠಲ ಶಂಕರ ನೇಸರಗಿ ಶಾಲೆಗೆ ಪ್ರಥಮಸ್ಥಾನ ಪಡೆದರೆ ಐಶ್ವರ್ಯ ಮಹಾದೇವ ಕರಬನ್ನಿ 599 ಅಂಕಗಳನ್ನು ಪಡೆದು ಶಾಲೆಗೆ ದ್ವೀತಿಯ ಸ್ಥಾನ ಪಡೆದಿದ್ದಾಳೆ ಬಸಮ್ಮ ಈರಪ್ಪ ಸೋಮನಟ್ಟಿ ಹಾಗೂ ಚೈತ್ರಾ ಕಲ್ಲಪ್ಪ ಬಡಿಗೇರ 597 ಅಂಕಗಳನ್ನು ಪಡೆದು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿವರ್ಗ ಗ್ರಾಮದ ಪ್ರಮುಖರು ಪಂಚಾಯತಿಯ ಅಧ್ಯಕ್ಷರು ಅಭಿವೃದ್ಧಿ ಅಧಿಕಾರಿಗಳು ಎಸ್ ಡಿ ಎಮ್ ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಅಭಿನಂದಿಸಿದ್ದಾರೆ.
ವಿಠ್ಠಲ ಶಂಕರ ನೇಸರಗಿ ಪ್ರಥಮ ಸ್ಥಾನ
ಐಶ್ವರ್ಯ ಮಹದೇವ ಕರಬನ್ನಿ . ದ್ವಿತೀಯ ಸ್ಥಾನ
ಬಸಮ್ಮ ಈರಪ್ಪ ಸೋಮಶೆಟ್ಟಿ. ತೃತೀಯ ಸ್ಥಾನ
ಚೈತ್ರ ಕಲ್ಲಪ್ಪ ಬಡಿಗೇರ. ತೃತೀಯ ಸ್ಥಾನ
Social Plugin