ಮನೆಮನೆಗೆ ಬೇಟ್ಟಿ ನೀಡುತ್ತಿರುವ ಅಚಲೇರಿ ಜಿಡಗಾ ಶ್ರೀಗಳು
ಮುಗಳಖೋಡ: ಶ್ರಾವಣ ಮಾಸದ ನಿಮಿತ್ಯ ಮುಗಳಖೋಡ ಪಟ್ಟಣಕ್ಕೆ ಆಗಮಿಸಿದ ಅಚಲೇರಿ-ಜಿಡಗಾ ಮಠದ ಪೀಠಾಧಿಪತಿಗಳಾದ ಶ್ರೀ ಸ. ಸ. ಬಸವರಾಜೇಂದ್ರ ಮಹಾಸ್ವಾಮಿಗಳನ್ನು ಪಟ್ಟಣದ ಎಲ್ಲ ಭಕ್ತಾದಿಗಳು ತಮ್ಮ ಮನೆಗೆ ಆಹ್ವಾನಿಸುತಿದ್ದು, ಶ್ರೀಗಳು ಭಕ್ತರ ಅಹ್ವಾನಕ್ಕೆ ಸ್ಪಂದಿಸಿ ಪ್ರತಿ ಭಕ್ತರ ಮನೆಗೆ ತೆರಳಿ ಆಶೀರ್ವದಿಸುತ್ತಿದ್ದಾರೆ. ಭಕ್ತರು ಶ್ರಾವಣಮಾಸದಲ್ಲಿ ಪೂಜ್ಯರ ಆಗಮನ ನಮ್ಮ ಭಾಗ್ಯವೆಂದು ತಿಳಿದು ಸಂತೋಷವಾಗಿ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ ಶ್ರೀಗಳು ಬರುವ ದಾರಿಯಲ್ಲಿ ಹೂವಿನಿಂದ ಶೃಂಗಾರ ಮಾಡಿ ಸ್ವಾಗತಿಸಿ ಮನೆಯಲ್ಲಿ ಗುರುಗಳ ಪಾದ-ಪೂಜೆ ನೆರವೇರಿಸಿ ಗುರು ಕಾಣಿಕೆ ನೀಡಿ ತಮ್ಮ ತಮ್ಮ ಭಕ್ತಿಯನ್ನು ಸಮರ್ಪಿಸುತಿದ್ದಾರೆ.
-------------------https://youtube.com/channel/UCuijpgXCcALhTUk0HijPdLQ

Social Plugin