ವರದಿ :ಮುರಿಗೆಪ್ಪ ಮಾಲಗಾರ. ಬಂಡಿಗಣಿ 26:ಪರಮಾತ್ಮನ ಆಶಿರ್ವಾದ ನಮಗೆ ದೋರೆಯಬೇಕಾದರೆ ಸತ್ಯ ಧರ್ಮದ ದಾರಿಯಲ್ಲಿ ನಡೆದು ಸಮಾಜದಲ್ಲಿ ನಾವೆಲ್ಲರೂ ಸಮಾನ ಮನಸ್ಕರಾಗಿ ಬಾಳುವದು ಅತ್ಯಂತ ಮಹತ್ವದ್ದಾಗಿದೆ ಎಂದು ಬಂಡಿ ಗಣಿಯ ಚಕ್ರವರ್ತಿ ಅಣ್ಣದಾನೇಶ್ವರ ಪುಜ್ಯರು ಹೇಳಿದರು.
 ಅವರು ಅಥಣಿ ತಾಲೂಕಿನ ಮಾಯನಟ್ಟಿ ಗ್ರಾಮದಲ್ಲಿ ನಡೆದ ಭರಮದೇವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಾ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಪರಂಪರೆ, ಸಂಸ್ಕೃತಿಯಲ್ಲಿ ಭಾರತದ ದೇಶವು ದೊಡ್ಡದಾಗಿದೆ ನಾವು ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು, ಎಂದರು.
ಸಾನಿದ್ಯ ವಹಿಸಿ ಕೌಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡುತ್ತಾ ಮಾನವನ ಜನ್ಮ ಜಗತ್ತಿನಲ್ಲಿ ಅತ್ಯಂತ ಶೇಷ್ಠ
ಸಮಾನತೆ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೇಸುತ್ತಾ ಅಣ್ಣ ಆಹಾರ ಪದಾರ್ಥಗಳನ್ನು ಎಲ್ಲರೂ ಸಮಾನರುಪದಲ್ಲಿ ಒದಗಿಸುತ್ತಾ ಧಾನ ಧರ್ಮ ಮಾಡಬೇಕು ಎಂದು ಹೇಳಿದರು.
ಈದೆ ಸಂದರ್ಭಗಳಲ್ಲಿ ಸಾನಿದ್ಯ ವಹಿಸಿದ್ದ ಸದಾಶಿವ ಜಂಬಗಿಯ ಸುರೇಶ್ ಮಹಾರಾಜರು ಮಾತನಾಡಿ ಸಮಾಜ ಮತ್ತು ಸಂಪತ್ತು ಮಾನವನನ್ನು ಬದಲಿಸುವ ತಾಕತ್ತು ಹೋಂದಿದೆ ಅದಕ್ಕಾಗಿಯೇ ನಾವು ಬದಕುವ ಬರವಸೆಯಲ್ಲಿಯೆ ಇರಬೇಕು ಎಂದರು.ಈ ಸಂದರ್ಭದಲ್ಲಿ ಹನಗಂಡಿಯ ಚಿನ್ಮಯಾನಂದ ಸ್ವಾಮೀಜಿ ಗಳು,ತೇವರಟ್ಟಿಯ ಲಕ್ಕನ ಮಹಾರಾಜರು, ಗ್ರಾಮದ ಮುಖಂಡರಾದ ಶಿವರಾಯ ಸನದಿ,ಮುತ್ತಪ್ಪ ನಾಯಿಕ,ನಂದು ಬುರ್ಲಿ,ಸದಾಶಿವ ನಾಯಿಕ,ಸುರೇಶ ನಾಯಿಕ,ಅಪ್ಪಾಸಾಬ ಸೇಜುಳಿ,ರಾವಸಾಬ ಕೋಟಿ,ಶಂಕರ ಅವಗಡೆ,ಕರೇಪ್ಪಾ ಬೇವನೂರ,ಶಂಕರ್ ಬೇವನೂರ,ಸಂಜು ಬುರ್ಲಿ ಸೇರಿದಂತೆ ಮುಂತಾದವರು ಹಾಜರಿದ್ದರು.