*ಹಟಗಾರ ಸಮಾಜದ ಗುರು ಪೀಠ ಸ್ಥಾಪನೆಗೆ ಸಿದ್ಧತೆ*
 ಕರ್ನಾಟಕ ರಾಜ್ಯ ಹಟಗಾರ ಸಮಾಜದ ಜಗದ್ಗುರುಗಳಾಗಿ ಪರಮ ಪೂಜ್ಯ ಶ್ರೀ ಚಿಕ್ಕ ರೇವಣಸಿದ್ದ ಸ್ವಾಮಿಜಿ ಅವರ ಪೀಠಾರೋಹಣ ಕಾರ್ಯಕ್ರಮವನ್ನು ಶ್ರೀಘ ಜರುಗಲಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಡಾ. ಪಂಡಿತ ಪಟ್ಟಣ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ
ಬನಹಟ್ಟಿಯ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನೇಕಾರ ಗೀತೆಯೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಹಟಗಾರ ಸಮಾಜವು ಹಿಂದುಳಿದ ಹಾಗು ತುಳಿತಕ್ಕೊಳಗಾದ ಸಮಾಜವಾಗಿದ್ದು, ಇದರ ಏಳ್ಗೆಗೆ ಹಾಗು ಒಗ್ಗಟ್ಟಿಗಾಗಿ ಸಮಾಜದ ಜಗದ್ಗುರುಗಳ ಅವಶ್ಯಕತೆಯಿದ್ದು, ಸಮಾಜವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಶೀಘ್ರವೇ ಜಗದ್ಗುರುಗಳ ಪೀಠಾರೋಹಣ ನಡೆಯಲಿದೆ ಎಂದು ಪಟ್ಟಣ ತಿಳಿಸಿದರು.ವೇದಿಕೆ ಮೇಲೆ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಡಾ. ಎಂ.ಎಸ್. ದಡ್ಡೇನವರ, ಶ್ರೀಶೈಲ ದಭಾಡಿ ಉಪಸ್ಥಿತರಿದ್ದರು. 
ಈ ಕಾರ್ಯಕ್ರಮದಲ್ಲಿ ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ಅನೇಕ ಜಿಲ್ಲೆಗಳ ಸಮಾಜದ ಮುಖಂಡರು ಭಾಗವಹಿಸಿದ್ದರು.ಇದೇ ಸಂದರ್ಭ ವಚನ ಪಿತಾಮಹ ಡಾ.ಹಳಕಟ್ಟಿಯವರ ಜನ್ಮದಿನವನ್ನು ಕರ್ನಾಟಕ ಸರ್ಕಾರ `ವಚನ ಸಂರಕ್ಷಣಾ ದಿನ'ವೆಂದು ಸರ್ಕಾರದಿಂದ ಸಾರ್ವಜನಿಕವಾಗಿ ಆಚರಿಸಲು ಆದೇಶಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಸರ್ಕಾರವನ್ನು ಅಭಿನಂದಿಸಿದರು. 
ಸಭೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.


ವರದಿ 
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ