*ಸಂಧಾನ ಮೂಲಕ ೪೯೩ ಪ್ರಕರಣ ಇತ್ಯರ್ಥ*

ರಾಜೀ ಸಂಧಾನ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಲೋಕ ಅದಾಲತ್ ಸಹಕಾರಿಯಾಗಲಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಕಿರಣಕುಮಾರ ವಡಗೇರಿ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಪ್ರಾಧಿಕಾರ ಆಶ್ರಯದಲ್ಲಿ ನಡೆದ ರಾಷ್ಟಿçಯ ಮೇಘಾ ಲೋಕ ಅದಾಲತ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

 ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನ ಮೇರೆಗೆ ಲೋಕ ಅದಾಲತ್ ಆಯೋಜಿಸಲಾಗಿದೆ. ಅದಾಲತ್‌ನಲ್ಲಿಅತಿ ಹೆಚ್ಚು ಸಿವಿಲ್ ಪ್ರಕರಣಗಳಾದ ಆಸ್ತಿ, ಜಮೀನು, ಮನೆ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಮೋಟಾರ ವಾಹನ ಅಪಘಾತ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ ಎಂದರು. ಕ್ಷಕಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುತ್ತಿರುವದು ವಿಶೇಷವಾಗಿತ್ತು. 

ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ೫೬೮ ಪ್ರಕರಣಗಳ ಪೈಕಿ ೬೬ ಪ್ರಕರಣಗಳು ರಾಜೀ ಸಂಧಾನವಾದರೆ, ದಿವಾಣಿ ನ್ಯಾಯಾಲಯದಲ್ಲಿ ೫೨೫ ಪ್ರಕರಣಗಳಲ್ಲಿ ೪೨೭ ಪ್ರಕರಣಗಳು ರಾಜೀ ಸಂಧಾನವಾಗಿರುವದು ವಿಶೇಷವಾಗಿತ್ತು.

*ವಿಚ್ಛೇದನೆಗೆ ಅವಕಾಶ ನೀಡದೆ ಸುಖಾಂತ್ಯ*

ಪತಿ-ಪತ್ನಿ ಕಲಹವು ವಿಚ್ಛೇದನೆಯ ಹಂತ ತಿರುಗಿ ೨ ವರ್ಷಗಳ ಕಾಲ ನ್ಯಾಯಾಲಯದಲ್ಲಿ ಪ್ರಕರಣ ನಡೆದಿತ್ತು. ಇಂದು ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಕೀಲರ ಸಂಧಾನದೊಂದಿಗೆ ಪ್ರಕರಣ ಇತ್ಯರ್ಥಗೊಳಿಸುವ ಮೂಲಕ ಸುಖಾಂತ್ಯಗೊಳಿಸಿ ಪತಿ-ಪತ್ನಿ ಒಂದುಗೂಡಿಸುವಲ್ಲಿ ಕಾರಣವಾಗಿದ್ದು ಅದಾಲತ್‌ನ ಮಹತ್ವ ಸಾರುವಲ್ಲಿ ಕಾರಣವಾಗಿದೆ ಎಂದು ನ್ಯಾಯಾಧೀಶ ಕಿರಣಕುಮಾರ ವಡಗೇರಿ ತಿಳಿಸಿದರು. 

ಬನಹಟ್ಟಿಯ ಜೆಎಂಎಫ್‌ಸಿ ಹಿರಿಯ ಹಾಗು ಕಿರಿಯ ದಿವಾಣಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ನಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ ೪೯೩ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು.

ನ್ಯಾಯಾಂಗ ಸಂಧಾನಕರಾಗಿ ಹಿರಿಯ ದಿವಾಣಿ ನ್ಯಾಯಾಧೀಶರಾದ ಕಿರಣಕುಮಾರ ವಡಗೇರಿ ಹಾಗು ದಿವಾಣಿ ನ್ಯಾಯಾಧೀಶೆ ಶುಷ್ಮಾ ಟಿ.ಸಿ. ಸಹಾಯಕಸರ್ಕಾರಿ ಅಭಿಯೋಜಕ ಎಂ.ಸಿ. ಮಸಳಿ, ನ್ಯಾಯವಾದಿಗಳಾಗಿ ರಣಧೀರ ಸಿಂಘೆ ಹಾಗು ಕಾಡೇಶ ನ್ಯಾಮಗೌಡ ಇದ್ದರು.
ತಪ್ಪದೇ ವಿಡಿಯೋ ನೋಡಿ 👇





ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ