*ವರದಿ ಸ್ಪಂದಿಸಿ ಸೂರು ನೀಡಿದ ಶಾಸಕ ಸವದಿ*


ಈಚೆಗೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ನಿವೃತ್ತ ಯೋಧ ೮೪ ರ ವಯೋವೃದ್ಧ ಈರಪ್ಪ ಬಡಿಗೇರ ಕುಟುಂಬಕ್ಕೆ ಮಾಸಾಶನ ಸೇರಿದಂತೆ ಯಾವದೇ ಸೌಲಭ್ಯಗಳಿಲ್ಲದ ಕುರಿತು Swarupa sandarshan CHANNEL ದಲ್ಲಿ ವಿಸ್ತçತ ವರದಿಗೆ ಸ್ಪಂದಿಸಿದ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಬಡಿಗೇರ ಕುಟುಂಬಕ್ಕೆ ಸರ್ಕಾರಿ ಪ್ರದೇಶದ ಮನೆಯೊಂದನ್ನು ಬದುಕು ನಿರ್ವಹಣೆಗೆಂದು ನೀಡುವ ಮೂಲಕ ಮಾನವೀಯತೆ ಮೆರೆಯುವಲ್ಲಿ ಕಾರಣರಾಗಿದ್ದಾರೆ.

ಬನಹಟ್ಟಿಯ ಶುದ್ಧ ನೀರಿನ ಘಟಕದ ವಸತಿ ಪ್ರದೇಶದಲ್ಲಿ ಖಾಲಿಯಿದ್ದ ಮನೆಯೊಂದರಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ ಮಾಜಿ ಯೋಧನಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕೊನೆಯ ಜೀವಿತಾವಧಿವರೆಗೂ ವಾಸ ಮಾಡುವಂತೆ ಅಧಿಕಾರಿಗಳ ಸಮ್ಮುಖದಲ್ಲಿ ಇರಲು ಅವಕಾಶ ಕಲ್ಪಿಸಲಾಗಿದೆ. ಇಳಿವಯಸ್ಸಿನಲ್ಲಿರುವ ದಂಪತಿಗೆ ಯಾವದೇ ತೊಂದರೆಯಾಗದಂತೆ ಅವರ ಉಪಜೀವನಕ್ಕೆ ಅವಶ್ಯವಿರುದನ್ನು ನೀಡುವದಲ್ಲದೆ ಸರ್ಕಾರದಿಂದ ದೊರಕಬೇಕಾದ ಸೌಲಭ್ಯಗಳನ್ನು ನ್ಯಾಯಯುತವಾಗಿ ಒದಗಿಸುವಲ್ಲಿ ಶೀಘ್ರ ವ್ಯವಸ್ಥೆ ಮಾಡಲಾಗುವದೆಂದರು.ತಹಶೀಲ್ದಾರ ಸಂಜಯ ಇಂಗಳೆ, ಪೌರಾಯುಕ್ತ ಶ್ರೀನಿವಾಸ ಜಾಧವ, ನಗರಸಭಾಧ್ಯಕ್ಷ ಶ್ರೀಶೈಲ ಬೀಳಗಿ, ವಿದ್ಯಾಧರ ಸವದಿ ಸೇರಿದಂತೆ ಅನೇಕರಿದ್ದರು.

ತಪ್ಪದೇ ವಿಡಿಯೋ ನೋಡಿ 👇




ವರದಿ
ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು
ಬಾಗಲಕೋಟೆ