ತೇರದಾಳದ ಮಹಾತ್ಮಾ ಗಾಂಧೀಜಿ ಕ್ರಿಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣವನ್ನು ತಹಶೀಲ್ದಾರ ಸಂಜಯ ಇಂಗಳೆ ನೆರವೇರಿಸಿದರು.

ತೇರದಾಳದ ಮಹಾತ್ಮಾ ಗಾಂಧೀಜಿ ಕ್ರಿಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಶಾಸಕ ಸಿದ್ದು ಸವದಿ ಮಾತನಾಡಿದರು.

ಭಾರತ ಸ್ವರ್ಗದ ಬಾಗಿಲು -ಶಾಸಕ ಸಿದ್ದು ಸವದಿ

ತೇರದಾಳ : ರಾಷ್ಟ್ರದ ಅಖಂಡತೆಗಾಗಿ ಜ್ಯಾತಿ,ಮತ, ಪ್ರದೇಶ,ರಾಜ್ಯ,ಭಾಷೆ ಎಲ್ಲವನ್ನು ಬಿಟ್ಟು ಭಾರತ ಮಾತೆಯ ರಕ್ಷಣೆಗಾಗಿ ದೇಶದ ಅಭಿವೃದ್ಧಿಗಾಗಿ ಎಲ್ಲ ಪಣ ತೊಡುವಂತ ಕೆಲಸ ಮಾಡಬೇಕು. ಮಾರಕ ರೋಗಗಳು, ಪ್ರವಾಹಗಳು, ಪ್ರಕೃತಿ ವಿಕೋಪಗಳು ನಮ್ಮ ನಾಡಿನ ಮೇಲೆ ದಾಳಿ ಮಾಡಿದೆ. ಜಗತ್ತಿನ ಪ್ರಬಲ ರಾಷ್ಟ್ರಗಳ ಜೊತೆಗೆ ನಮ್ಮ ರಾಷ್ಟ್ರ ಯಾವುದರಲ್ಲಿ ಕಮ್ಮಿ ಇಲ್ಲ. ಕೊರೊನಾ ಸಾಂಕ್ರಾಮಿಕ ಮಹಾಮಾರಿ ವೈರಾಣು ಬಂದು ಒಂದು ವರ್ಷದಲ್ಲಿ ಎರಡು ಮೂರು ಲಸಿಕೆಯನ್ನು ಸಂಶೋಧನೆ ಮಾಡಿ 50ಕೋಟಿ ಜನರಿಗೆ ಲಸಿಕೆಯನ್ನು ಹಾಕಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ಪಟ್ಟಣದ ಮಹಾತ್ಮಾ ಗಾಂಧೀಜಿ ಕ್ರಿಡಾಂಗಣದಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಾರ್ವಜನಿಕ ಧ್ವಜಾರೋಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತವನ್ನು ಸ್ವರ್ಗದ ಬಾಗಿಲು ಎಂದು ಕರೆಯುತ್ತಾರೆ. ಹಬ್ಬಗಳಲ್ಲಿ ಸರ್ವ ಶ್ರೇಷ್ಠವಾದುದು ಸ್ವಾತಂತ್ರೋತ್ಸವ ಹಾಗೂ ಗಣರಾಜ್ಯೋತ್ಸವ. ಹಬ್ಬಗಳು ಜ್ಯಾತಿ,ಧರ್ಮಕ್ಕೆ ಸೀಮಿತವಾದರೆ, ಸ್ವಾತಂತ್ರೋತ್ಸವ ಮತ್ತು ಗಣರಾಜ್ಯೋತ್ಸವ ಹಬ್ಬವನ್ನು ಇಡೀ ನಾಡಿನ ಜನ ಒಂದಾಗಿ ಒಂದೇ ತಾಯಿಯ ಮಕ್ಕಳಾಗಿ ವಿಜೃಂಭನೆಯಿಂದ ಆಚರಿಸುವಂತ ಹಬ್ಬವಾಗಿದೆ. ಸ್ವಾತಂತ್ರದ ಸೂರ್ಯ ಉದಯಿಸಲಿಕ್ಕೆ ಕಾರಣಿಭೂತರಾಗಿರುವ ಲಕ್ಷಾಂತರ ಹುತಾತ್ಮರನ್ನು ನೆನೆಯುವ ದಿನ ಇದಾಗಿದೆ. ನವ ಯುವಕರಿಗೆ ಸ್ವಾತಂತ್ರದ ಮಹತ್ವವನ್ನು ತಿಳಿದುಕೊಳ್ಳುವ ಮಹತ್ವದ ದಿನ ಇಂದು. ದೊರಕಿರುವ ಸ್ವಾತಂತ್ರವನ್ನು ಯಾವ ರೀತಿ ಉಳಿಸಿಕೊಳ್ಳಬೇಕು ಹಾಗೂ ದೇಶವನ್ನು ಹೇಗೆ ಕಟ್ಟಬೇಕು ಎಂಬುದರ ಜೊತೆಗೆ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳುವ ಕೆಲಸ ಈ ಹಬ್ಬಗಳಲ್ಲಿ ಇದೆ. ಅನೇಕ ಹೋರಾಟಗಾರರು ಮನೆ,ಮಠಗಳನ್ನು ತ್ಯಾಗ ಮಾಡಿ ಸ್ವಾತಂತ್ರವೇ ನನ್ನ ಜನ್ಮ ಸಿದ್ಧ ಹಕ್ಕು ಎಂದು ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿ ಈ ದೇಶಕ್ಕೆ ಸ್ವಾತಂತ್ರವನ್ನು ತಂದು ಕೊಟ್ಟಿದ್ದಾರೆ. 

 ರೈತರಿಗೋಸ್ಕರವಾಗಿ ಬೆಳೆ ಸಮೀಕ್ಷಾ ಆ್ಯಪ್ ಮೂಲಕ ಸರ್ವೆ ಕಾರ್ಯ ಸ್ವತಃ ರೈತರೆ ಮಾಡಬಹುದು. ಪರಿಹಾರ, ಕನಿಷ್ಟ ಬೆಂಬಲ ಬೆಲೆ ಈ ಲಾಭಗಳನ್ನು ಪಡೆಯಬಹುದು. ಹಿಂದೆಂದು ಕಾಣದ ಹಾಗೆ ಸತತವಾಗಿ ಕೃಷ್ಣಾ ನದಿ ಮಹಾಪೂರ ಬಂದು ರೈತರ ಬೆಳೆ,ಮನೆ,ಮಠ ಕಸಿದುಕೊಂಡಿದೆ. ನಮ್ಮಲ್ಲಿ ಅಗಾಧವಾದ ಯುವ ಶಕ್ತಿಯಿದೆ. ಅದನ್ನು ಉಪಯೋಗಿಸಿಕೊಂಡು ಜಗತ್ತಿನಲ್ಲಿಯೇ ಭಾರತ ದೇಶವನ್ನು ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡುವಲ್ಲಿ ಪ್ರಯತ್ನಿಸಬೇಕು ಎಂದರು.

 ತಹಶೀಲ್ದಾರ ಸಂಜಯ ಇಂಗಳೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

  ಈ ಸಂದರ್ಭದಲ್ಲಿ ತೆರೆದ ವಾಹನದಲ್ಲಿ ಪೋಲಿಸ್ ಪರೇಡ ವಂದನೆ ಸ್ವೀಕರಿಸಿದರು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೊಸಮನಿ, ಉಪಾಧ್ಯಕ್ಷೆ ಶಾಂತವ್ವ ಕಾಲತಿಪ್ಪಿ, ಗ್ರೇಡ್-2 ತಹಶೀಲ್ದಾರ ಎಸ್.ಬಿ.ಕಾಂಬಳೆ, ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟೆ, ಆಹಾರ ನಿರೀಕ್ಷಕ ಪಿ.ಎಸ್.ಮಠಪತಿ, ಮುಖ್ಯಾಧಿಕಾರಿ ಅಶೋಕ ಗುಡಿಮನಿ, ವೈದ್ಯಾಧಿಕಾರಿ ಸುದರ್ಶನ ನಿಡೋಣಿ, ಸಿಪಿಐ ಜೆ.ಕರುಣೇಶಗೌಡ, ಪಿಎಸ್‍ಐ ರಾಜು ಬೀಳಗಿ, ಹೆಚ್ಚುವರಿ ಪಿಎಸ್‍ಐ ಎಸ್.ಕೆ.ಸೂರ್ಯವಂಶಿ, ಭಾಜಪ ನಗರ ಘಟಕ ಅಧ್ಯಕ್ಷ ಮಹಾವೀರ ಕೋಕಟನೂರ, ಸಿಆರ್‍ಪಿ ಆರ್.ಎ.ನ್ಯಾಮಗೌಡ, ಎಸ್.ಬಿ.ಹಡಪದ ಸೇರಿದಂತೆ ಪಟ್ಟಣದ ಪ್ರಮುಖರು ಹಾಗೂ ಎಲ್ಲ ಶಾಲೆಗಳು ಶಿಕ್ಷಕರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

----------------------------------------