ತೇರದಾಳದ ಶ್ರೀಸಿದ್ಧೇಶ್ವರ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಚೇರಮನ್ ಮಲ್ಲಪ್ಪ ಮುಕರಿ ಧ್ವಜಾರೋಹಣ ನೆವೇರಿಸಿದರು. ತೇರದಾಳ : ಕೋವಿಡ್‍ದಿಂದಾಗಿ ರಾಜ್ಯ ಎಲ್ಲ ಶಾಲೆ ಕಾಲೇಜುಗಳು ಬಂದಾಗಿ ಶಿಕ್ಷಣ ವ್ಯವಸ್ಥೆ ಕುಂಠಿತಗೊಂಡಿದೆ. ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ವಿದ್ಯಾರ್ಥಿಗಳು ಶಿಕ್ಷಕರ ಸಂಪರ್ಕದ ಮೂಲಕ ಬೇರೆ ಬೇರೆ ವ್ಯವಸ್ಥೆಗಳನ್ನು ಅನುಸರಿಸಿ ಶಿಕ್ಷಣದ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಬೇಕು ಎಂದು ಬಸವರಾಜ ಬಾಳಿಕಾಯಿ ಹೇಳಿದರು. ಪಟ್ಟಣದ ಶ್ರೀಸಿದ್ಧೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದ ಘನತೆ ವಿಷಯ ಬಂದಾಗ ಜಾತಿ, ಮತ, ಪಂಥ ಬೇಧ ಭಾವ ಬದಿಗಿತ್ತು ನಾವೆಲ್ಲರೂ ಭಾರತ ಮಾತೆ ಒಂದೇ ಮಕ್ಕಳ ರೀತಿಯಲ್ಲಿ ಬದುಕಿದರೆ ಜಗತ್ತಿನಲ್ಲಿ ಈ ದೇಶ ಜಗನಮಾತೆಯಾಗಿ ಮೆರೆಲಿಕ್ಕೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾವೆಲರೂ ದೇಶದ ರಾಷ್ಟ್ರದ ಮತ್ತು ಧರ್ಮದ ವಿಷಯದಲ್ಲಿ ಒಂದಾಗಿ ಈ ದೇಶವನ್ನು ಪ್ರಗತಿಗತಿಯಲ್ಲಿ ನಾವೆಲ್ಲರೂ ಕೊಂಡೊಯ್ಯೋಣವೆಂದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಚೇರಮನ್ ಮಲ್ಲಪ್ಪ ಮುಕರಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಪರಪ್ಪ ಕಾಲತಿಪ್ಪಿ, ಪ್ರೌಢಶಾಲಾ ಚೇರಮನ ಮಹೇಶ ಯಾದವಾಡ, ಅಪ್ಪು ಮಂಗಸೂಳಿ, ಎಮ್.ಸಿ.ಕುಂಚಗನೂರ, ಬಾಬು ಸೋರಗಾವಿ, ಮಹಾಂತೇಶ ಪಂಚಾಕ್ಷರಿ, ಪರಪ್ಪ ಅಥಣಿ, ಶಿವಾನಂದ ನಿವರಗಿ ಸೇರಿದಂತೆ ಹಲವರಿದ್ದರು.
Social Plugin